ಈ ಚುನಾವಣೆಯಲ್ಲಿ ಯಾರ್ಯಾರು ಮಕಾಡೆ ಮಲಗ್ತಾರೋ ಗೊತ್ತಿಲ್ಲ.. ಘಟಾನುಘಟಿ ನಾಯಕರಿಗೇ ಸೋಲಿನ ಭೀತಿ ಕಾಡ್ತಿದೆ. ಕನಕಪುರಕ್ಕೆ ಹೋಗಿ ಡಿಕೆಶಿಯನ್ನ ಕಟ್ಟಿಹಾಕಲು ಯತ್ನಿಸಿದ್ದ, ಅಶೋಕ್ ಗೆ ನಿದ್ದೆಗೆಟ್ಟಿದೆ. ಪದ್ಮನಾಭನಗರ ಕ್ಷೇತ್ರ ಹೈವೋಲ್ಟೇಜ್ ಅಖಾಡವಾಗಿ ಮಾರ್ಪಟ್ಟಿದ್ದು, ಡಿಕೆ ಬ್ರದರ್ಸ್ ಎಂಟ್ರಿಯಿಂದ ಅಶೋಕ್ ಸುಸ್ತಾಗಿ ಹೋಗಿದ್ದಾರೆ.. ಯೆಸ್… ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ವಿರುದ್ಧ ಕಣಕ್ಕಿಳಿದಿರೋ ಆರ್ ಅಶೋಕ್ ಗೆ ಕಾಂಗ್ರೆಸ್ ಟಕ್ಕರ್ ಕೊಡ್ತಾ ಇದೆ. ರಘುನಾಥ್ ನಾಯ್ಡು ನಾಮಪತ್ರ ಸಲ್ಲಿಸಿದ್ದಾರೆ.
ಅಂತಿಮ ಕ್ಷಣದಲ್ಲಿ ಡಿ.ಕೆ ಸುರೇಶ್ ನ್ನ ಅಖಾಡಕ್ಕಿಳಿಸಿ, ಅಶೋಕ್ ನಿದ್ದೆಗೆಡುವಂತೆ ಪ್ಲ್ಯಾನ್ ರೂಪಿಸಿದ್ದಾರೆ. ಡಿ.ಕೆ ಸುರೇಶ್ ಕೂಡ ನಾಮಪತ್ರ ಸಲ್ಲಿಕೆ ಮಾಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಿಂದ ಡಿ.ಕೆ ಸುರೇಶ್ ಗೆ ಸಂದೇಶ ಹೋಗುದ್ದು, ಇಡೀ ದಿನ ಆ ಸಿದ್ಧತೆಯಲ್ಲೇ ತೊಡಗಿದ್ರು. ನಾಮಪತ್ರ ಸಲ್ಲಿಸಲು ಎಲ್ಲ ಡಾಕ್ಯೂಮೆಂಟ್ ರೆಡಿ ಮಾಡಿಕೊಂಡಿದ್ದಾರೆ. ಸುರೇಶ್ ನಾಮಪತ್ರ ಸಲ್ಲಿಸ್ತಾರೆ ಅಂತಾ ಡಿ.ಕೆ ಶಿವಕುಮಾರ್ ಅವ್ರೇ ಹೇಳಿದ್ದಾರೆ.. ಈಗಾಗಲೇ ಬಿ ಫಾರ್ಮ್ ಪಡೆದು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ರಘುನಾಥ್ ನಾಯ್ಡು ನಾಮಪತ್ರ ಸಲ್ಲಿಕೆ ಮಾಡಿದ್ದಾಗಿದೆ. ಹೈಕಮಾಂಡ್ ನಿಂದ ಕೊನೆಯ ಸಂದೇಶಕ್ಕಾಗಿ ಡಿಕೆ ಬ್ರದರ್ಸ್ ಕಾಯ್ತಾ ಇದ್ದಾರೆ..
ಇಂದು ಬೆಳಿಗ್ಗೆಯೊಳಗೆ ಪಕ್ಷದ ಅಧ್ಯಕ್ಷರಿಂದ ಸಿ ಫಾರ್ಮ್ ಪಡೆದು, ಮಧ್ಯಾಹ್ನ ನಾಮಪತ್ರ ಸಲ್ಲಿಕೆ ಮಾಡಿದ್ರೆ ಅಚ್ಚರಿಯಿಲ್ಲ. ಸದ್ಯಕ್ಕೆ ಡಿಕೆ ಸುರೇಶ್ ಸ್ಪರ್ಧೆ ವಿಚಾರ ಚುನಾವಣಾ ಕಣದಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿದೆ. ಇತ್ತ ಆರ್ ಅಶೋಕ್ ವಿರುದ್ಧ ಮೈಂಡ್ ಗೇಮ್ ಆಡ್ತಿರೋ ಡಿಕೆ ಬ್ರದರ್ಸ್, ಕನಕಪುರದ ಕಡೆ ಹೆಜ್ಜೆ ಹಾಕದಂತೆ ತಂತ್ರಗಾರಿಕೆ ನಡೆಸಿದ್ದಾರೆ.ಡಿ ಕೆ ಸುರೇಶ್ ಸ್ಪರ್ಧೆ ಮಾಡಿದ್ರೆ ಕನಕಪುರದಲ್ಲಿ ಚುನಾವಣೆ ಕೆಲಸ ಮಾಡೋದು ಕಷ್ಟ. ಪದ್ಮನಾಭನಗರದಲ್ಲೇ ಇದ್ದು ಚುನಾವಣೆ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತೆ. ಈ ಎಲ್ಲಾ ಚಿಂತನೆ ಮಾಡಿ ಅಚ್ಚರಿ ನಿರ್ಧಾರ ತೆಗೆದುಕೊಳ್ಳಲು ಡಿಕೆ ಬ್ರದರ್ಸ್ ನಿರ್ಧಾರ ಮಾಡಿದ್ದಾರೆ.
ಇನ್ನು ನೋ ಡ್ಯೂ ಸರ್ಟಿಫಿಕೇಟ್ ದೆಹಲಿಯಿಂದ ತರಿಸಿಕೊಂಡಿದ್ದೇನೆ. ಶುಭ ಘಳಿಕೆ, ಶುಭ ಸಮಯದಲ್ಲಿ ಎಲ್ಲಾ ನಡೆಯುತ್ತಿರುತ್ತೆ ಅಂತಾ ಡಿ.ಕೆ ಸುರೇಶ್ ಹೇಳಿದ್ದಾರೆ. ಅಶೋಕ್ ಅವ್ರನ್ನ ಭಯ ಬೀಳಿಸುವ ತಂತ್ರವಾ ಎಂದು ಕೇಳಿದ್ದಕ್ಕೆ ಪಾಪ.. ಅಶೋಕ್ ಎಂದು ವ್ಯಂಗ್ಯ ಮಾಡಿದ್ದಾರೆ.. ಒಟ್ನಲ್ಲಿ ಡಿ.ಕೆ ಬ್ರದರ್ಸ್ ಚದುರಂಗದಾಟಕ್ಕೆ ಆರ್ ಅಶೋಕ್ ತಲೆ ಕೆಡಿಸಿಕೊಳ್ಳುವಂತಾಗಿದೆ. ಕನಕಪುರಕ್ಕೆ ಹೋಗಿ ಚುನಾವಣಾ ಪ್ರಚಾರ ನಡೆಸಲು ಹಿಂದೇಟು ಹಾಕ್ತಾ ಇದ್ದಾರೆ. ಬಿಜೆಪಿ ಹೈಕಮಾಂಡ್ ತಂತ್ರದಿಂದ, ಅಶೋಕ್ ಬುಡ ಅಲ್ಲಾಡತೊಡಗ್ತಿದೆ. ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಆಗಿರೋದ್ರಿಂದ, ಮಧ್ಯಾಹ್ನದೊಳಗೆ ಎಲ್ಲದಕ್ಕೂ ಸ್ಪಷ್ಟ ಚಿತ್ರಣ ಸಿಗಲಿದೆ..