ಬೆಂಗಳೂರು ;-ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ನಿಂದ ಡಿಕೆಶಿಗೂ ನಿರಾಶೆ ಆಗಿದೆ ಎಂದು ಶಾಸಕ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಆಶಾ, ಅಂಗನವಾಡಿ ಕಾರಗಯಕರ್ತೆಯರಿಗೆ ಹಣ ಮೀಸಲಿಟ್ಟಿಲ್ಲ. ಇಡೀ ಬಜೆಟ್ ಪೊಲಿಟಿಕಲ್ ಸ್ಟೇಟ್ಮೆಂಟ್ ಅಂದ್ರೆ ತಪ್ಪಾಗಲ್ಲ. ನಿಜವಾಗಲು ಇದು ದುರಾದೃಷ್ಟ. ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದಾರೆ. ಬಿಜೆಪಿ ಆರ್ಥಿಕ ಶಿಸ್ತು ಕಾಪಾಡದಿದ್ರೆ ಇವತ್ತು ಕಷ್ಟ ಆಗ್ತಿತ್ತು. ಬಂಡವಾಳ ಹೂಡಿಕೆಯಲ್ಲೂ 9.8ಲಕ್ಷ ಕೋಟಿ MOU ಆಗಿದೆ. ಭ್ರಷ್ಟಾಚಾರ ಅಂತ ಆರೋಪಿಸಿ ಗೂಬೆ ಕೂರಿಸಿದ್ದಾರೆ. ಭ್ರಷ್ಟಾಚಾರ ನಡೆದಿದ್ರೆ GST ಹೆಚ್ಚಳವಾಗ್ತಿತ್ತಾ? ಎಂದು ಪ್ರಶ್ನಿಸಿದರು.
ಬಜೆಟ್ ನಿಂದ ನಿರಾಶೆ ಆಗಿರೋದು ಕರ್ನಾಟಕ ಮಾತ್ರವಲ್ಲ ಡಿಕೆಶಿ ಅವರಿಗೂ ನಿರಾಶೆ ಆಗಿದೆ. ಡಿಕೆಶಿ ಅವರು ಚುನಾವಣೆ ಮೊದಲು ಪಾದಯಾತ್ರೆ ಮಾಡಿದ್ರು. ಮೇಕೇದಾಟಿಗೆ 3 ಸಾವಿರ, ಮಹದಾಯಿಗೆ 10 ಕೋಟಿ ಮೀಸಲು ಅಂತ ಹೇಳಿದ್ರು. ಆದರೆ ಹಣ ಮೀಸಲಿಟ್ಟಿಲ್ಲ. ಸಿದ್ದರಾಮಯ್ಯ ಅವರು ಡಿಕೆಶಿ ಮೇಲೆ ಸೇಡು ತೀರಿಸಿಕೊಂಡಂತಿದೆ ಎಂದು ಟೀಕಿಸಿದರು.