ಬೆಂಗಳೂರು ;-ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡಲ್ಲ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಡಿಕೆಶಿ ಗಿಂತ ಪವರ್ ಫುಲ್. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಒಳ ಜಗಳ ಹೊರ ಬರುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ತರ ನಾನು ಗ್ಯಾರಂಟಿಯಾಗಿ ಹೇಳುತ್ತೇನೆ,
ಸಿದ್ದರಾಮಯ್ಯ ಅಧಿಕಾರವನ್ನು ಬಿಟ್ಟುಕೊಡಲ್ಲ. ಅಧಿಕಾರ ಹಂಚಿಕೆ ಒಂದು ನಾಟಕ ಅಷ್ಟೇ. ಮುಖ್ಯಮಂತ್ರಿ ಆಗೋದು ಡಿಕೆ ಶಿವಕುಮಾರ್ ಅವರ ಒಂದು ಕನಸು ಅಷ್ಟೇ’ ಎಂದರು.
ಇನ್ನೂ ಡಿ.ಕೆ.ಸುರೇಶ್ ಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲ್ಲವೆಂದು ಗೊತ್ತಾಗಿದೆ. ಅದಕ್ಕಾಗಿಯೇ ಅವರು ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ ಎಂದು ಮಾಜಿ ಸಚಿವ ಆರ್ ಅಶೋಕ್ ಟೀಕೆ ಮಾಡಿದ್ದಾರೆ,