ಬೆಂಗಳೂರು: ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಿಸಲು ಕೆಪಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ನಡೆಯುತ್ತಿರುವ ಪೈಪೋಟಿ ಹಿನ್ನೆಲೆಯಲ್ಲಿ ಕನಿಷ್ಠ ಆರು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಜಟಿಲಗೊಂಡಿದೆ.
ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಎರಡು ಬಣಗಳಾಗಿ ವಿಂಗಡನೆ ಆಗಿದ್ದು, ಓರ್ವ ಆಕಾಂಕ್ಷಿಗೆ ಸಿದ್ದರಾಮಯ್ಯ ಬೆಂಬಲ ಸೂಚಿಸಿದರೆ ಮತ್ತೋರ್ವ ಆಕಾಂಕ್ಷಿಯ ಬೆನ್ನಿಗೆ ಬೆಂಬಲವಾಗಿ ಡಿಕೆಶಿ ನಿಂತಿದ್ದಾರೆ. ಪರಿಣಾಮ ಈ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರವಾಗಿ ಗೊಂದಲ ಸೃಷ್ಟಿಯಾಗಿದ್ದು, ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲೂ ತೀವ್ರ ಚರ್ಚೆ ನಡೆಯುವ ಸಾಧ್ಯತೆ ಇದೆ.
ಗ್ಗಂಟಾಗಿರುವ ಕ್ಷೇತ್ರಗಳು
*ಪುತ್ತೂರು : ಅಶೋಕ್ ರೈ/ ಶಕುಂತಲಾ ಶೆಟ್ಟಿ/ ಕಾವು ಹೇಮನಾಥ್ ಶೆಟ್ಟಿ/ ದಿವ್ಯಪ್ರಭಾ
* ಮಂಗಳೂರು ಉತ್ತರ : ಮೊಯ್ದಿನ್ ಭಾವಾ/ ಇನಾಯತ್ ಅಲಿ
*ನರಗುಂದ: ಕೋನರೆಡ್ಡಿ v/s ವಿನೋದ್ ಅಸೂಟಿ
*ಕಲಘಟಗಿ: ಸಂತೋಷ್ ಲಾಡ್ v/ ನಾಗರಾಜ್ ಛಬ್ಬಿ
* ತೀರ್ಥಹಳ್ಳಿ: ಕಿಮ್ಮನೆ ರತ್ನಾಕರ v/s ಮಂಜುನಾಥ್ ಗೌಡ
ಸಿದ್ದು, ಡಿಕೆಶಿ ಬೆಂಬಲ, ಗೊಂದಲಗೊಂಡ ಅಭ್ಯರ್ಥಿ ಆಯ್ಕೆ
ಇನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮೊಯ್ದಿನ್ ಭಾವಾ ಹಾಗೂ ಇನಾಯತ್ ಅಲಿ ನಡುವೆ ತೀವ್ರ ಪೈಪೋಟಿ ಇದೆ. ಮೊಯ್ದಿನ್ ಬಾವಾ ಬೆಂಬಲಕ್ಕೆ ಸಿದ್ದರಾಮಯ್ಯ ಇದ್ದರೆ, ಇನಾಯತ್ ಅಲಿ ಬೆಂಬಲಕ್ಕೆ ಡಿಕೆ ಶಿವಕುಮಾರ್ ಇದ್ದಾರೆ. ಇಬ್ಬರೂ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಕ್ಷೇತ್ರದ ಆಯ್ಕೆ ಕಗ್ಗಂಟಾಗಿದೆ.
ನರಗುಂದ ಕ್ಷೇತ್ರದಲ್ಲಿ ಕೋನರೆಡ್ಡಿ v/s ವಿನೋದ್ ಅಸೂಟಿ ನಡುವೆ ಪೈಪೋಟಿ ನಡೆಯುತ್ತಿದೆ. ಕೋನರೆಡ್ಡಿಗೆ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ ಪ್ರಯತ್ನ ಪಡುತ್ತಿದ್ದರೆ, ವಿನೋದ್ ಅಸೂಟಿ ಗೆ ಡಿಕೆಶಿ ಬೆಂಬಲ ಇದೆ.
ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರದಲ್ಲಿಸಂತೋಷ್ ಲಾಡ್ v/ ನಾಗರಾಜ್ ಛಬ್ಬಿ ನಡುವೆ ಪೈಪೋಟಿ ತೀವ್ರವಾಗಿದೆ. ಸಂತೋಷ್ ಛಬ್ಬಿ ಬೆಂಬಲವಾಗಿ ಡಿಕೆಶಿ ನಿಂತರೆ ಸಂತೋಷ್ ಲಾಡ್ ಬೆಂಬಲವಾಗಿ ಸಿದ್ದರಾಮಯ್ಯ ಅವರು ಇದ್ದಾರೆ. ಪರಿಣಾಮ ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆಯೂ ಜಟಿಲವಾಗಿದೆ.
ಜೊತೆಗೆ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಿಮ್ಮನೆ ರತ್ನಾಕರ v/s ಮಂಜುನಾಥ್ ಗೌಡ ನಡುವೆ ಪೈಪೋಟಿ ಇದೆ. ಕಿಮ್ಮನೆಗೆ ಸಿದ್ದರಾಮಯ್ಯ ಅವರು ಅನೌಪಚಾರಿಕವಾಗಿ ಈಗಾಗಲೇ ಪ್ರಚಾರ ನಡೆಸಲು ಸೂಚನೆ ನೀಡಿದ್ದಾರೆ. ಆದರೆ ಮಂಜುನಾಥ್ ಗೌಡ ಬೆಂಬಲಕ್ಕೆ ಡಿಕೆಶಿ ನಿಂತಿದ್ದಾರೆ. ಪರಿಣಾಮ ಈ ಕ್ಷೇತ್ರದ ಆಯ್ಕೆಯೂ ಕಗ್ಗಂಟಾಗಿದೆ.