ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ನೀರು ಕುಡಿದರೆ, ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳು ಸಿಗುತ್ತದೆ ಎನ್ನುವ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಮನುಷ್ಯನ ದೇಹದ ಮುಕ್ಕಾಲು ಅಂಶ ಬರೀ ನೀರಿನಿಂದ ತುಂಬಿ ಕೊಂಡಿರುವುದರಿಂದ ಯಾವುದೇ ಕಾರಣಕ್ಕೂ, ದೇಹದಲ್ಲಿ ನೀರಿನ ಅಂಶದ ಕೊರತೆ ಎದುರಾಗದಂತೆ ನೋಡಿಕೊಳ್ಳ ಬೇಕು.
ಇದು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದನ್ನು ಅಧ್ಯಯನಗಳು ಇನ್ನೂ ಸಾಬೀತುಪಡಿಸಿಲ್ಲ. ಆದರೂ ಕೆಲವೊಂದು ಅಧ್ಯಯನಗಳು ಇದನ್ನು ನಿಜ ಎಂದು ಹೇಳುತ್ತೇವೆ. ಏಕೆಂದರೆ ಕಡಲೆ ಬೀಜಗಳು ಮನುಷ್ಯನ ದೇಹದಲ್ಲಿ ತಾಪಮಾನವನ್ನು ಹೆಚ್ಚು ಮಾಡುತ್ತವೆ. ತಕ್ಷಣ ತಂಪಾದ ನೀರು ಕುಡಿಯುವುದರಿಂದ ಇದ್ದಕ್ಕಿದ್ದಂತೆ ಮತ್ತು ಒಂದೇ ಸಮಯದಲ್ಲಿ ದೇಹದ ತಾಪಮಾನ ತಗ್ಗುತ್ತದೆ. ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ…
- ಸರಿಸುಮಾರು ಬಾದಾಮಿ ಬೀಜಗಳಲ್ಲಿ ಸಿಗುವಷ್ಟೇ, ಪೋಷ ಕಾಂಶಗಳನ್ನು ಒಳಗೊಂಡ ಇನ್ನೊಂದು ನೈಸರ್ಗಿಕ ಆಹಾರ ಪದಾರ್ಥ ಎಂದರೆ ಅದು ನೆಲಗಡಲೆ ಅಥವಾ ಕಡಲೆಬೀಜಗಳು.
- ಚಳಿಗಾಲದಲ್ಲಿ ಮಿತವಾಗಿ ಕಡಲೆಬೀಜಗಳನ್ನು ಸೇವನೆ ಮಾಡು ವುದರಿಂದ, ಹಲವಾರು ರೀತಿಯಲ್ಲಿ ಆರೋಗ್ಯ ಪ್ರಯೋಜನ ಗಳನ್ನು ಪಡೆದುಕೊಳ್ಳಬಹುದು.ಆದರೆ ನೆಲಗಡಲೆ ತಿಂದ ಬಳಿಕ, ತಪ್ಪಿಯೂ ಕೂಡ ನೀರು ಕುಡಿಯಲೇಬಾರದು ಎಂದು ಆರೋಗ್ಯ ತಜ್ಞರು ಹೇಳುವರು.
- ಯಾಕೆಂದ್ರೆ ಈ ಬೀಜಗಳಲ್ಲಿ ಕಂಡು ಬರುವ ಹೆಚ್ಚಿನ ಪ್ರಮಾಣದ ಎಣ್ಣೆಯಂಶವು ನೀರಿನೊಂದಿಗೆ ಸೇರಿಕೊಂಡ ವೇಳೆ,ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಪ್ರಮು ಖವಾಗಿ ಗಂಟಲಿನಲ್ಲಿ ಕಿರಿಕಿರಿ,ಕೆಮ್ಮಿನ ಸಮಸ್ಯೆ ಉಂಟಾ ಗುವ ಸಾಧ್ಯತೆ ಇರುತ್ತದೆ.