ಬೆಂಗಳೂರು:- ಕನ್ನಡಪರ ಹೋರಾಟಗಾರ ಕರವೇ ನಾರಾಯಣಗೌಡ ವಿರುದ್ಧ ಸುಳ್ಳು ಕೇಸು ಹಾಕಬೇಡಿ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಾರಾಯಣಗೌಡ ಅವರು ಹೋರಾಟಗಾರರು, ಹೋರಾಟ ಮಾಡುವುದು ಸಹಜ. ಕರ್ನಾಟಕದಲ್ಲಿ ಕನ್ನಡದಲ್ಲಿ ನಾಮಫಲಕ ಹಾಕುವಂತೆ ಆದೇಶ ಇದೆ. ಯಾರೋ ಅವರ ವಿರುದ್ಧ ದೂರು ನೀಡಿದ್ದಾರೆ. ಆ ಸಂಬಂಧ ಮಾತನಾಡಿದೆವು ಎಂದು ಹೇಳಿದರು.
ಈ ಬಗ್ಗೆ ನಾನು ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದೇನೆ. ಹೋರಾಟಗಾರರಿಗೆ ನಾವು ಎಷ್ಟು ಗೌರವ ನೀಡಬೇಕೋ ಅದನ್ನು ನೀಡಲೇಬೇಕು. ಅವರ ಹೋರಾಟದಿಂದ ಕನ್ನಡ ಉಳಿಯುತ್ತಿದೆ. ಅವರಿಗೆ ರಾಜಕೀಯ ಬೇಡ. ಅವರ ವಿರುದ್ಧ ಸುಳ್ಳು ಕೇಸು ದಾಖಲಿಸಬಾರದು ಎಂದು ಆಯುಕ್ತರಿಗೆ ಹೇಳಿದ್ದೇನೆ ಎಂದರು.