ಹೀಗೆ ಕಣ್ಣು ಆಸು ಪಾಸು ಗುಳ್ಳೆ ಕಾಣಿಸಿಕೊಂಡರೇ ಮನೆ ಮದ್ದು ಮಾಡದೆ ನೇರವಾಗಿ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಏಕೆಂದರೆ ಕಣ್ಣು ಅತಿ ಸೂಕ್ಷ್ಮ ಅಂಗವಾದ ಕಾರಣ ನಾವು ಹೆಚ್ಚು ಗಮನ ಹರಿಸಬೇಕಾಗಿತ್ತದೆ. ಕಣ್ಣಿನಲ್ಲಿ ಸಣ್ಣ ಧೂಳು ಹೋದ್ರೂ ತಡ ಮಾಡದೇ ನೀರು ತುಂಬಿಕೊಳ್ಳುತ್ತದೆ.
ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ಅದರಿಂದ ಅತಿಯಾಗಿ ಕಿರಿಕಿರಿ ಅನುಭವಿಸುತ್ತೇವೆ. ಕಣ್ಣಿನಲ್ಲೂ ಅನೇಕ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಹೀಗೆ ಕಣ್ಣುಗಳ ಕೆಳ ಭಾಗದ ಚರ್ಮ ಊದಿಕೊಳ್ಳುವುದು ಇದರಲ್ಲಿ ಒಂದಾಗಿದೆ. ಇದು ಸಾಮಾನ್ಯ ಅಲ್ಲವೇ ಅಲ್ಲ. ಈ ಸಮಸ್ಯೆಯನ್ನು ವೈದ್ಯರು ಪೆರಿಯರ್ಬಿಟಲ್ ಎಡಿಮಾ ಎಂದು ಕರೆಯುತ್ತಾರೆ. ಕಣ್ಣುಗಳ ಅಡಿಯಲ್ಲಿ ಹೀಗೆ ದಪ್ಪನೇಯ ಆಕಾರದ ಗುಳ್ಳೆ ಕಾಣಿಸಿಕೊಳ್ಳುತ್ತದೆ. ಇದನ್ನು ನಾವು ಆಡು ಭಾಷೆಯಲ್ಲಿ ಕಣ್ಣು ಕುಟ್ರೆ ಎಂದು ಹೇಳುತ್ತವೆ. ಈ ಕಣ್ಣು ಕುಟ್ರೆ ಬರಲು ಹಲವು ಕಾರಣಗಳಿರುತ್ತವೆ. ಕಣ್ಣು ಕುಟ್ರೆ ಬರುವ ಮೊದಲು ಅದರ ಸುತ್ತ ಮುತ್ತ ಅತೀವ ನೋವಾಗುತ್ತದೆ. ದಿನ ಕಳೆದಂತೆ. ಕಣ್ಣಿನ ಮಧ್ಯ ಭಾಗದಲ್ಲಿ ಅಥವಾ ಕೊನೆಯಲ್ಲಿ ಒಂದು ಪುಟ್ಟ ಗುಳ್ಳೆ ಕಾಣಿಸಿಕೊಳ್ಳುತ್ತದೆ. ಬಳಿಕ ಆ ಗುಳ್ಳೆ ದೊಡ್ಡದಾಗಿ ಹೋಗುತ್ತದೆ. ಅದರಿಂದ ಊತದ ಜೊತೆಗೆ ನೋವು ಹೆಚ್ಚಾಗಬಹುದು ಮತ್ತು ದೃಷ್ಟಿಗೆ ಸಮಸ್ಯೆಯಾಗಬಹುದು. ಕಣ್ಣಿನ ಕೆಳ ಭಾಗದ ಚರ್ಮ ಊದಲು ಕಾರಣವಾಗುತ್ತದೆ.
ಕಣ್ಣಿನ ಮೇಲ್ಭಾಗದ ಹಾಗೂ ಕೆಳ ಭಾಗದ ರೆಪ್ಪೆಗಳ ಭಾಗಕ್ಕೆ ಹರಿದಿರುವ ಅತ್ಯಂತ ಸಣ್ಣ ಗ್ರಂಥಿಗಳು ಬ್ಲಾಕ್ ಆದರೆ ಅದರಲ್ಲಿ ಹರಿಯುವ ರಸಗಳು ಕಣ್ಣಿನ ರೆಪ್ಪೆಯ ಅಂಚಿನವರೆಗೆ ತಲುಪಿ ಅಲ್ಲಿ ಗುಳ್ಳೆಯ ಆಕಾರದಲ್ಲಿ ಕಣ್ಣಿನ ರೆಪ್ಪೆಯ ಸೂಕ್ಷ್ಮ ಚರ್ಮವನ್ನು ಊದಿಕೊಳ್ಳುವಂತೆ ಮಾಡುತ್ತದೆ. ಅತಿಯಾದ ಗಾಳಿಯಿಂದಲೂ ಹೀಗೆ ಕಣ್ಣು ಊದಿಕೊಳ್ಳುತ್ತದೆ. ಕಣ್ಣುಗಳ ಒಳ ಭಾಗದಲ್ಲಿ ಕಂಡು ಬರುವ ಕಣ್ಣುಗಳ ಸೋಂಕು ಹೊರ ಭಾಗದ ರೆಪ್ಪೆಗಳಲ್ಲಿ ಗುಳ್ಳೆಗಳು ಉಂಟಾಗುವಂತೆ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿರ್ಲಕ್ಷ್ಯ ಬೇಡ.