ಸ್ವಚ್ಛತೆಗಾಗಿ, ಪಾನೀಯಕ್ಕಾಗಿ, ಔಷಧೀಯ ಪ್ರಯೋಜನಕ್ಕಾಗಿ ಹಾಗೂ ಸೌಂದರ್ಯ ಕ್ಕಾಗಿ ಬಳಕೆಯಾಗುವ ನಿಂಬೆ ಹಣ್ಣನ್ನು ಫ್ರಿಜ್ ನಲ್ಲಿ ಇಡುವಾಗ ಹೀಗೆ ಮಾಡಿ.
ಅಂಗಡಿಯಿಂದ ತಂದ ನಿಂಬೆಹಣ್ಣನ್ನು ಸ್ವಚ್ಛವಾಗಿ ತೊಳೆದು ತೇವಾಂಶ ಹೋಗುವಂತೆ ಒರೆಸಿ. ಬಳಿಕ ಗಾಳಿಯಾಡದ ಕವರ್ ನಲ್ಲಿ ಹಾಕಿ ಫ್ರಿಜ್ ನಲ್ಲಿಡಿ. ಫ್ರೀಜರ್ ನಲ್ಲಿಟ್ಟರೆ ಬಹುಕಾಲ ತಾಜಾ ಆಗಿ ಹಾಳಾಗದೆ ಉಳಿಯುತ್ತದೆ.
ನಿಂಬೆ ಹೋಳುಗಳನ್ನು ತೆಳುವಾಗಿ ಕತ್ತರಿಸಿದ್ದು, ಇವುಗಳನ್ನೇ ಸಂಗ್ರಹಿಸಿ ಇಡಬೇಕಾದರೆ ಗಾಳಿಯಾಡದ ಪ್ಲಾಸ್ಟಿಕ್ ಕವರ್ ನಲ್ಲೇ ಹಾಕಿಡಬಹುದು. ನಿಂಬೆ ಹಿಂಡಿದ ಬಳಿಕ ಉಳಿಯುವ ಭಾಗವನ್ನು ಸಣ್ಣ ಹೋಳುಗಳಾಗಿ ಕತ್ತರಿಸಿ ಉಪ್ಪು ಹಾಕಿಟ್ಟರೆ ಬೇಕಿದ್ದಾಗ ಉಪ್ಪಿನಕಾಯಿಯಾಗಿ ಮಾಡಿಕೊಳ್ಳಬಹುದು.
ನಿಂಬೆ ಹಿಂಡಿದ ಬಳಿಕ ಉಳಿಯುವ ಸಿಪ್ಪೆಯನ್ನು ಕಂಕುಳ ಅಡಿ ಭಾಗ ಕಪ್ಪಾಗಿದ್ದರೂ ಇದನ್ನು ಉಜ್ಜಬಹುದು. ದೇವರಿಗೆ ಬಳಸುವ ಹಿತ್ತಾಳೆ ಪಾತ್ರೆಗಳನ್ನು ಪಳ ಪಳನೆ ಹೊಳೆಯುವಂತೆ ಮಾಡಬೇಕಿದ್ದರೆ ನಿಂಬೆಸಿಪ್ಪೆಯಿಂದ ತಿಕ್ಕಿ ನೋಡಿ.