ಈಗಿನ ವಾತಾವಾರಣದಲ್ಲಿ ಹೆಚ್ಚಿನವರಿಗೆ ಆಗಾಗ ವೈರಲ್ ಜ್ವರ ಕಾಡುತ್ತಿರುತ್ತದೆ. ಸಾಮಾನ್ಯವಾಗಿ ಜ್ವರ ಬಂದಾಗ ಹೆಚ್ಚಿನವರು ಸ್ನಾನ ಮಾಡುವುದಿಲ್ಲ. ಜ್ವರ ಬಿಟ್ಟ ನಂತರವೇ ಸ್ನಾನ ಮಾಡುತ್ತಾರೆ. ಆದರೆ ನಮ್ಮಲ್ಲಿ ಅಧಿಕ ಜನರಿಗೆ ಜ್ವರ ಇದ್ದಾಗ ಸ್ನಾನ ಮಾಡಬಹುದೇ, ಇಲ್ಲವೋ ಎನ್ನುವುದು ತಿಳಿದಿರುವುದಿಲ್ಲ. ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ ತಿಳಿಯೋಣ.
ಜ್ವರ ಬಂದಾಗ ಸ್ನಾನ ಮಾಡಬೇಕೋ, ಬೇಡವೋ ಎಂಬುವುದರ ಬಗ್ಗೆ ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಸಂಶೋಧನೆ ನಡೆಸಲಾಗಿದೆ. ಸಾಮಾನ್ಯವಾಗಿ ಜ್ವರ ಮತ್ತು ಶೀತವಾದಾಗ ಜನ ಸ್ನಾನ ಮಾಡುವುದನ್ನು ತಪ್ಪಿಸುತ್ತಾರೆ. ಆದರೆ ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವುದಾದರೆ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಶೀತ ಮತ್ತು ಜ್ವರಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಇದು ವ್ಯಕ್ತಿಯ ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ ಎನ್ನಲಾಗಿದೆ.
ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಪ್ರಯೋಜನಕಾರಿಯಾಗಿದೆ. ಬೆಚ್ಚಗಿನ ನೀರಿನಿಂದ ಸ್ನಾನವು ದೇಹದ ಉಷ್ಣತೆಯನ್ನು ಸಹಜ ಸ್ಥಿತಿಗೆ ತರಲು ಸಹಾಯ ಮಾಡುತ್ತದೆ. ಆದರೆ ತಣ್ಣೀರಿನಿಂದ ಸ್ನಾನವು ಜ್ವರದಲ್ಲಿ ಮತ್ತಷ್ಟು ಹಾನಿಯನ್ನು ಉಂಟು ಮಾಡಬಹುದು. ಆದ್ದರಿಂದ ತಣ್ಣೀರಿನಿಂದ ಸ್ನಾನ ಮಾಡುವುದನ್ನು ತಪ್ಪಿಸಬೇಕು.
ಜ್ವರದ ಸಮಯದಲ್ಲಿ ಸ್ನಾನ ಮಾಡುವುದರ ಬಗ್ಗೆ ನಡೆಸಿದ ಕೆಲ ಅಧ್ಯಯನಗಳು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಜ್ವರದ ಲಕ್ಷಣಗಳನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದಿದೆ. ಇದರಿಂದ ವ್ಯಕ್ತಿಗೆ ಹೆಚ್ಚು ಆರಾಮದಾಯಕ ಭಾವನೆ ಮೂಡುತ್ತದೆ. ಆದರೆ ತಣ್ಣೀರಿನಿಂದ ಸ್ನಾನ ಮಾಡುವುದು ಶೀತ ಅಥವಾ ದೇಹದ ಉಷ್ಣತೆಯಲ್ಲಿ ಹಠಾತ್ ಕುಸಿತದಂತಹ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡಬಹುದು.
ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹದ ಉಷ್ಣತೆಯನ್ನು ನಿಯಂತ್ರಣಕ್ಕೆ ಬರುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಣೆ ಆಗುತ್ತದೆ. ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ. ಇದು ದೇಹದ ಉಷ್ಣತೆಯನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ.
ಸಂಶೋಧನೆ ಏನು ಹೇಳುತ್ತದೆ?: ಇಂಡಿಯನ್ ಜರ್ನಲ್ ಆಫ್ ಕಂಟಿನ್ಯೂಯಿಂಗ್ ನರ್ಸಿಂಗ್ ಎಜುಕೇಶನ್ನ ಸಂಶೋಧನೆಯು ಜ್ವರದಿಂದ ಬಳಲುತ್ತಿರುವವರಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಬಿಸಿನೀರಿನ ಫುಟ್ಬಾತ್ ಚಿಕಿತ್ಸೆಯು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.
= ಪಡೆಯುವ ರೋಗಿಗಳು ಪ್ರಮಾಣಿತ ಆರೈಕೆಯನ್ನು ಪಡೆಯುವವರಿಗಿಂತ ಗಮನಾರ್ಹವಾಗಿ ಕಡಿಮೆ ದೇಹದ ಉಷ್ಣತೆಯನ್ನು ಹೊಂದಿದ್ದಾರೆ ಎಂದು ಅಧ್ಯಯನವು ತಿಳಿಸಿದೆ. ವಿಶೇಷವಾಗಿ ಜ್ವರ 38 ° C ಮತ್ತು 39 ° C (100 ° F ನಿಂದ 102 ° F) ನಡುವೆ ತಲುಪಿದಾಗ ಬಿಸಿನೀರಿನಲ್ಲಿ ಪಾದಗಳನ್ನು ತೊಳೆಯುವುದು ಜ್ವರಕ್ಕೆ ಉತ್ತಮ ಪರಿಹಾರವಾಗಿದೆ.
ತುಂಬಾ ಬಿಸಿ ನೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಿ: ಒಂದು ವೇಳೆ ಅತಿಯಾದ ಜ್ವರವಿದ್ದರೆ ಬಿಸಿ ಸ್ನಾನವನ್ನು ತಪ್ಪಿಸಬೇಕು. ಇಲ್ಲದಿದ್ದರೆ ಸಮಸ್ಯೆಗಳು ಗಂಭೀರ ಸ್ಥಿತಿಗೆ ತಲುಪಬಹುದು. ಇಂತಹ ಸಮಯದಲ್ಲಿ ವೈದ್ಯರ ಸಲಹೆ ಪಡೆಯುವುದು ಬಹಳ ಮುಖ್ಯ.
ಪಾದಗಳನ್ನು ಬೆಚ್ಚಗಿನ ನೀರಿನಿಂದ ತೊಳೆಯುವುದು ಅಥವಾ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಜ್ವರ ಮತ್ತು ಶೀತಕ್ಕೆ ಪ್ರಯೋಜನಕಾರಿ ಆಗಿದೆ. ಇದು ಸಮಸ್ಯೆಯನ್ನು ಕಡಿಮೆ ಮಾಡಲು ಮತ್ತು ಜ್ವರ ಬಂದಾಗ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಜೊತೆಗೆ ಶೀತದ ಸಮಯದಲ್ಲಿ ಸ್ನಾಯು ನೋವುಗಳನ್ನು ನಿವಾರಿಸುತ್ತಾರೆ