ಅನೇಕರು ಊಟದ ನಂತರ ಸಿಹಿ ತಿಂಡಿಯನ್ನು ಅತಿಯಾಗಿ ತಿನ್ನುವುದು ಅಥವಾ ನಿಯಮಿತವಾಗಿ ತಿನ್ನುವುದು ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ ಅಂತ ಹೇಳುತ್ತಾರೆ. ಆದರೆ ಊಟದ ನಂತರ ಬೆಲ್ಲವನ್ನು ತಿನ್ನುವುದು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ ಅಂತ ಹೇಳಲಾಗುತ್ತಿದೆ.
ಪ್ರತಿ ಊಟದ ನಂತರ ಒಂದು ಸಣ್ಣ ತುಂಡು ಬೆಲ್ಲವನ್ನು ತಿನ್ನುವುದು ಆರೋಗ್ಯಕರವಂತೆ ನೋಡಿ. ಬೆಲ್ಲವು ಭಾರತೀಯ ಆಹಾರದ ಒಂದು ಬಹುಮುಖ್ಯವಾದ ಭಾಗವಾಗಿದೆ. ನಿಮ್ಮ ಅಜ್ಜಿಯರು ಊಟದ ನಂತರ ಬೆಲ್ಲವನ್ನು ತಿನ್ನುವುದನ್ನು ನೀವು ಗಮನಿಸಿರಬಹುದು
ಊಟ ಮುಗಿಸಿದ ನಂತರ ಅನುಭವಿಸಬಹುದಾದ ಸಕ್ಕರೆಯ ಕಡುಬಯಕೆಗಳನ್ನು ಬೆಲ್ಲದ ಸಣ್ಣ ತುಂಡು ಪರಿಣಾಮಕಾರಿಯಾಗಿ ಪೂರೈಸುತ್ತದೆ. ಈ ಸರಳ ಅಭ್ಯಾಸವು ಆರೋಗ್ಯಕ್ಕೆ ಅನೇಕ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ ಎಂದು ಅನೇಕರಿಗೆ ತಿಳಿದಿಲ್ಲ.
ಪ್ರತಿ ಊಟದ ನಂತರ ಸಣ್ಣ ಬೆಲ್ಲದ ತುಂಡನ್ನು ತಿನ್ನುವುದು ನಿಮ್ಮ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕ್ರಿಯೆ ಸರಾಗವಾಗುವಂತೆ ಸಹಾಯ ಮಾಡುತ್ತದೆ. ಬೆಲ್ಲವು ಸುಕ್ರೋಸ್ನ ಉತ್ತಮ ಮೂಲವಾಗಿದ್ದು, ಇದು ನಿಯಮಿತ ಕರುಳಿನ ಚಲನೆಯನ್ನು ಬೆಂಬಲಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಬೆಲ್ಲವು
ಕಬ್ಬಿಣದ ಅದ್ಭುತ ಮೂಲವಾಗಿದ್ದು, ಇದು ಅತ್ಯಲ್ಪ ಪ್ರಮಾಣದ ಕೊಬ್ಬಿನೊಂದಿಗೆ ಮೆಗ್ನೀಸಿಯಮ್, ಪೊಟ್ಯಾಸಿಯಮ್, ಮ್ಯಾಂಗನೀಸ್ನ ಸಮೃದ್ಧ ಮೂಲವಾಗಿದೆ. ಇವೆಲ್ಲಾ ಪೋಷಕಾಂಶಗಳು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.
ಬೆಲ್ಲದಲ್ಲಿರುವ ಪೋಷಕಾಂಶಗಳು ದೇಹಕ್ಕೆ ತ್ವರಿತವಾಗಿ ಬೇಕಾದ ಶಕ್ತಿಯನ್ನು ನೀಡುತ್ತದೆ. ಇದೊಂದು ಊಟದ ನಂತರದಲ್ಲಿ ತೆಗೆದುಕೊಳ್ಳಬಹುದಾದ ಉತ್ತಮವಾದ ಸಿಹಿತಿಂಡಿಯಾಗಿದೆ.
ಈಗಂತೂ ಅಧಿಕ ರಕ್ತದೊತ್ತಡ ಎಂದಿಗಿಂತಲೂ ಹೆಚ್ಚು ಸಾಮಾನ್ಯವಾಗಿದೆ. ಚಳಿಗಾಲದಲ್ಲಿ ಪರಿಸ್ಥಿತಿ ಇನ್ನೂ ಸಹ ಹದಗೆಡುತ್ತದೆ. ಬೆಲ್ಲವು ಪೊಟ್ಯಾಸಿಯಮ್ನ ಉತ್ತಮ ಮೂಲವಾಗಿದ್ದು, ಇದು ರಕ್ತದೊತ್ತಡವನ್ನು ಇನ್ನಷ್ಟು ಹದಗೆಡಿಸುತ್ತದೆ. ಅಷ್ಟೇ ಅಲ್ಲದೆ, ಬೆಲ್ಲವು ಕಡಿಮೆ ಗ್ಲೈಸೇಮಿಕ್ ಸೂಚಿಯನ್ನ ಹೊಂದಿದ್ದು, ಇದು ಬೇರೆ ಸಿಹಿ ತಿಂಡಿಗಿಂತಲೂ ಉತ್ತಮವಾದ ಸಿಹಿತಿಂಡಿಯಾಗಿದೆ.
ಪ್ರತಿ ಊಟದ ನಂತರ ಸಣ್ಣ ಬೆಲ್ಲದ ತುಂಡನ್ನು ತಿನ್ನುವುದು ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡುತ್ತದೆ. ಹಾಗಾಗಿ ಪ್ರತಿ
ಊಟದ ಮಧ್ಯೆ ಬೆಲ್ಲವನ್ನು ತಿನ್ನುವುದು ರಕ್ತದೊತ್ತಡವನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.
ಬೆಲ್ಲವು ಕಬ್ಬಿಣದ ಅತ್ಯುತ್ತಮ ಮೂಲವಾಗಿದೆ. ಊಟದ ನಂತರ ಬೆಲ್ಲವನ್ನು ಸೇವಿಸುವುದರಿಂದ ದೇಹದಲ್ಲಿ ಕೊರತೆ ಇರುವಂತಹ ಕಬ್ಬಿಣದ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಮತ್ತು ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡಲು ಇದು ತುಂಬಾನೇ ಸಹಾಯ ಮಾಡುತ್ತದೆ.
ಬೆಲ್ಲದಲ್ಲಿರುವಂತಹ ಉತ್ಕರ್ಷಣ ನಿರೋಧಕಗಳಾದ ಸತು ಮತ್ತು ಸೆಲೆನಿಯಮ್ ಅಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅಲ್ಲದೆ ಇದು ಆಕ್ಸಿಡೇಟಿವ್ ಒತ್ತಡದಿಂದ ಸಹ ಪರಿಹಾರ ನೀಡುತ್ತದೆ.