ಆಹಾರಕ್ಕೆ ತಕ್ಕಂತೆ ಉಪ್ಪು ಹಾಕಿದಾಗ ಆಹಾರದ ರುಚಿ, ಪರಿಮಳ ಹೆಚ್ಚಾಗುತ್ತದೆ. ಕೆಲವರು ಆಹಾರಕ್ಕೆ ಹಾಕಿರುವ ಉಪ್ಪಿನ ಜೊತೆಗೆ ಮೇಲುಪ್ಪು ಹಾಕಿಕೊಂಡು ಊಟ ಮಾಡ್ತಾರೆ. ಉಪ್ಪಿನ ಸೇವನೆ ಮಿತವಾಗಿರಬೇಕು. ಅತಿಯಾದ ಉಪ್ಪು ನಮ್ಮ ಆರೋಗ್ಯವನ್ನು ಹದಗೆಡಿಸುವುದಲ್ಲದೆ ಸಾವಿಗೆ ಕಾರಣವಾಗುತ್ತದೆ.
ಪ್ರತಿ ವರ್ಷ ಸುಮಾರು 1.89 ಮಿಲಿಯನ್ ಜನರು ಅತಿಯಾದ ಉಪ್ಪಿನಿಂದ ಸಾವನ್ನಪ್ಪುತ್ತಾರೆ ಎಂಬ ಆಘಾತಕಾರಿ ಸಂಗತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅತಿಯಾದ ಉಪ್ಪು ಸೇವನೆ ಮಾಡೋರಲ್ಲಿ ಅಧಿಕ ರಕ್ತದೊತ್ತಡ ಮತ್ತು ಹೆಚ್ಚಿನ ಹೃದಯ ಸಮಸ್ಯೆಗಳು ಕಾಡುತ್ತವೆ.
ನೀವು ಎಲ್ಲ ಆಹಾರ ಕ್ಕೆ ಅತಿಯಾಗಿ ಉಪ್ಪು ಹಾಕ್ಬೇಕಾಗಿಲ್ಲ. ಹಾಲು, ಮಾಂಸ ಮತ್ತು ಚಿಪ್ಪುಮೀನುಗಳಂತಹ ಅನೇಕ ರೀತಿಯ ಆಹಾರಗಳಲ್ಲಿ ನೈಸರ್ಗಿಕವಾಗಿ ಇದು ಕಂಡುಬರುತ್ತದೆ. ಟೇಬಲ್ ಸಾಲ್ಟ್ನಲ್ಲಿ ವ್ಯಾಪಕವಾಗಿ ಕಂಡುಬರುವ ಸೋಡಿಯಂ, ಜೀವಕೋಶಗಳ ಆರೋಗ್ಯ ಕಾಪಾಡುವ ಪೋಷಕಾಂಶವಾಗಿದೆ. ದೇಹಕ್ಕೆ ಅಗತ್ಯ ಎನ್ನುವ ಕಾರಣಕ್ಕೆ ಸೋಡಿಯಂ ಅನ್ನು ಅಧಿಕವಾಗಿ ಸೇವಿಸಿದರೆ, ಹೃದ್ರೋಗ, ಪಾರ್ಶ್ವವಾಯು ಮತ್ತು ಅಕಾಲಿಕ ಮರಣದ ಅಪಾಯ ಹೆಚ್ಚಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.
ಹಾರ್ವರ್ಡ್ ಮೆಡಿಕಲ್ ಸ್ಕೂಲ್ ವರದಿಯ ಪ್ರಕಾರ, ಸೋಡಿಯಂ ಅಧಿಕ ಸೇವನೆಯು ಅಧಿಕ ರಕ್ತದೊತ್ತಡವನ್ನು ಉಂಟುಮಾಡುತ್ತದೆ. ಅನೇಕ ಅಧ್ಯಯನಗಳ ಪ್ರಕಾರ, ಹೆಚ್ಚು ಉಪ್ಪಿರುವ ಆಹಾರ, ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗುತ್ತದೆ..
ಅತಿಯಾದ ಉಪ್ಪು ಸೇವನೆ ಮೂರ್ತಪಿಂಡದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದು ಹೃದಯ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಈಗಾಗಳೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರು ಈ ಉಪ್ಪನ್ನು ಹೆಚ್ಚು ಸೇವನೆ ಮಾಡೋದ್ರಿಂದ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಧಿಕ ಪ್ರಮಾಣದಲ್ಲಿ ಉಪ್ಪಿನ ಸೇವನೆ ಮಾಡೋದ್ರಿಂದ ತಲೆನೋವು ನಿಮ್ಮನ್ನು ಕಾಡುತ್ತದೆ.