ಮುಖದಲ್ಲಿ ಮೂಡುವ ಚಿಕ್ಕದೊಂದು ‘ಗುಳ್ಳೆ’ ಸೌಂದರ್ಯಕ್ಕೆ ಕಪ್ಪು ಚುಕ್ಕಿಯಾಗಿ ಕಾಣಿಸುತ್ತದೆ. ಹದಿಹರೆಯದ ಹೆಣ್ಣುಮಕ್ಕಳಂತೂ ತಮ್ಮ ಮೊಡವೆಗಳನ್ನು ಶತ್ರುಗಳಂತೆ ಪರಿಗಣಿಸುತ್ತಾರೆ. ಅದನ್ನು ಮರೆಮಾಚಲು ಎಲ್ಲ ಕ್ರೀಮ್ಗಳನ್ನು ಹಚ್ಚುತ್ತಾರೆ. ಹಾಗಾದರೆ ಮೊಡವೆಯಿಂದ ಮುಕ್ತಿ ಪಡೆಯಲು ತೆಗೆದುಕೊಳ್ಳಬೇಕಾದ ಆರೈಕೆ ಕ್ರಮಗಳಾವುವು ನೋಡಿಕೊಂಡು ಬರೋಣ.
ಮೊಡವೆಗಳುಹೇಗೆಉಂಟಾಗುತ್ತವೆ?:
ಚರ್ಮದಿಂದ ಉತ್ಪತ್ತಿಯಾಗುವ ಎಣ್ಣೆಯ ಅಂಶ ಮತ್ತು ಚರ್ಮದ ಮೇಲಿನ ಸತ್ತ ಜೀವ ಕೋಶಗಳು ಮುಖದ ಮೇಲೆ ಮೂಡಿ ಬರುವ ಸಣ್ಣ ಸಣ್ಣ ಕೂದಲುಗಳನ್ನು ಮೂಡಿ ಬರದಂತೆ ಅಲ್ಲೇ ತಡೆಯುತ್ತವೆ. ಈ ರೀತಿ ಮಾಡುವುದರಿಂದ ಚರ್ಮದ ಮೇಲೆ ಉರಿಯೂತ ಉಂಟಾಗಿ ಮೊಡವೆಗಳ ರೂಪದಲ್ಲಿ ಕಾಣುತ್ತವೆ.
ಮೊಡವೆತಡೆಯಲುಈಕೆಳಗಿನಕೆಲವುಸಾಮಾನ್ಯಸಲಹೆಗಳನ್ನುಅನುಸರಿಸಿ:
ದಿನಕ್ಕೆಎರಡುಬಾರಿಮುಖತೊಳೆಯಿರಿ:
ಯಾವುದೇ ಚರ್ಮ ಪ್ರಕಾರವಾಗಿರಲಿ, ಸ್ವಚ್ಛತೆಯು ಯಾವಾಗಲೂ ಮೊದಲಿರಬೇಕು. ದಿನಕ್ಕೆ ಎರಡು ಬಾರಿ ನಿಮ್ಮ ತ್ವಚೆಯನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ, ವಿಶೇಷವಾಗಿ ನೀವು ಮೊಡವೆಗಳನ್ನು ಹೊಂದಿದ್ದರೆ. ಎರಡು ಬಾರಿ ಮುಖ್
ನೀವು ಮೊಡವೆಗಳನ್ನು ಹೊಂದಿದ್ದರೆ. ಎರಡು ಬಾರಿ ಮುಖ್ ತೊಳೆಯುವುದರಿಂದ ಯಾವುದೇ ಮಾಲಿನ್ಯಕಾರಕಗಳು, ಎಣ್ಣೆ ಮತ್ತು ಧೂಳನ್ನು ತೆಗೆದುಹಾಕಬಹುದು. ಇಲ್ಲವಾದಲ್ಲಿ ಈ ಕೊಳಗಳು, ಚರ್ಮದ ರಂಧ್ರಗಳನ್ನು ನಿರ್ಬಂಧಿಸಿ, ವೈಟ್ಹೆಡ್ಗಳು ಮತ್ತು ಕಪ್ಪು ಕಲೆಗಳನ್ನು ಉಂಟುಮಾಡುತ್ತದೆ. ಇದಕ್ಕಾಗಿ ನೀವು ಮೊಡವೆ ವಿರುದ್ಧ ಹೋರಾಡುವ ವಿಶೇಷ ಫೇಸ್ ವಾಶ್ ಬಳಸುವ ಅವಶ್ಯಕತೆಯಿಲ್ಲ.
ಮುಖವನ್ನುಮುಟ್ಟಬೇಡಿಅಥವಾಮೊಡವೆಗಳನ್ನುಉಜ್ಜಬೇಡಿ:
ಸಹಜವಾಗಿ, ಇದನ್ನ ಮಾಡಿಯೇ ಮಾಡುತ್ತೇವೆ. ಆದರೆ ಇದು ತಪ್ಪು. ಮೊಡವೆಗಳನ್ನು ತೆಗೆಯುವುದು, ಹಿಸುಕುವುದು ಮತ್ತು ಉಜ್ಜುವ ಮೂಲಕ ಅದು ಮತ್ತಷ್ಟು ಹೆಚ್ಚಾಗುತ್ತದೆ. ಮೊಡವೆಯನ್ನು ಹಿಸುಕುವುದರಿಂದ, ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಮುಖದಿಂದ ನಿಮ್ಮ ಕೈಯನ್ನು ದೂರವಿಡುವುದು ಉತ್ತಮ. ಪದೇಪದೇ ಮುಖವನ್ನು ಮುಟ್ಟುವುದರಿಂದ, ಕೈಯಲ್ಲಿರುವ ಕೊಳೆ ತ್ವಚೆ ಸೇರಿ, ಮೊಡವೆ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ.
ಟೋನರ್, ಮಾಯಿಶ್ಚರೈಸರ್ಬಳಸಿ, ಸ್ಕ್ರಬ್ಬಿಂಗ್ಬಿಡಬೇಡಿ:
ಮೊಡವೆ ಪೀಡಿತ ತ್ವಚೆಯನ್ನು ತೊಳೆದ ನಂತರ, ಏನು ಮಾಡುತ್ತೀರಿ ಎಂಬುದು ಸಹ ಬಹಳ ಮುಖ್ಯ. ತ್ವಚೆಯನ್ನು ಎಫ್ಫೋಲಿಯೇಟ್ ಮಾಡಿದ
ನಂತರ, ಅದನ್ನು ರಿಫ್ರೆಶ್ ಮಾಡಲು ಮತ್ತು ಆರ್ಧ್ರಕಗೊಳಿಸಲು ಟೋನರ್ ಮತ್ತು ಮಾಯಿಶ್ಚರೈಸರ್ ಬಳಸುವುದು ನಿರ್ಣಾಯಕವಾಗಿದೆ. ಮೊಡವೆಗಳು ಉಲ್ಬಣಗೊಳ್ಳುವುದನ್ನು ತಡೆಯುವಲ್ಲಿ ಇದು ಒಂದು ಪ್ರಮುಖ ಹಂತವಾಗಿದೆ. ನಿಮ್ಮ ಮುಖವನ್ನು ಸ್ವಚ್ಛಗೊಳಿಸಿದ ನಂತರ, ಟೋನರ್, ಸೀರಮ್ ಮತ್ತು ಮಾಯಿಶ್ಚರೈಸರ್ ಹಚ್ಚುವುದನ್ನು ಮರೆಯಬೇಡಿ. ಈ ಮೂರು ಅಂಶಗಳು ನಿಮ್ಮ ತ್ವಚೆಯನ್ನು ಕೂಲ್ ಮಾಡಲು ಸಹಾಯ ಮಾಡುತ್ತವೆ.
ಆರೋಗ್ಯಕರಆಹಾರವನ್ನುತೆಗೆದುಕೊಳ್ಳಿ:
ನಾವು ಸೇವಿಸುವ ಆಹಾರ ಮತ್ತು ಮೊಡವೆಗಳ ನಡುವಿನ ಲಿಂಕ್ ಇದೆ. ಆದ್ದರಿಂದ ಆರೋಗ್ಯ ಪೂರ್ಣ ಆಹಾರ ಸೇವಿಸಿ. ಹುರಿದ ಎಣ್ಣೆಯುಕ್ತ ಆಹಾರವನ್ನು ಹೆಚ್ಚು ಸೇವಿಸಿದರೆ, ತೂಕದ ಜೊತೆಗೆ ನಿಮ್ಮ ಮುಖದ ಸೌಂದರ್ಯವೂ ಮಾಯವಾಗಿ ಮೊಡವೆಗಳ ಆಗಮನಕ್ಕೆ ಕಾರಣವಾಗುತ್ತದೆ. ಆದ್ದರಿಂದ ಹಣ್ಣು-ತರಕಾರಿ ಮಿಶ್ರಿತ ಆಹಾರಗಳನ್ನು