ಹೆಸರಾಂತ ಕ್ರಿಕೆಟ್ (Cricket) ಆಟಗಾರ ಎಂ.ಎಸ್. ಧೋನಿ (M.S. Dhoni) ಮುಂದಿನ ದಿನಗಳಲ್ಲಿ ತೆರೆಯ ಮೇಲೆ ಹೀರೋ (Hero) ಆಗಲಿದ್ದಾರಂತೆ. ಹಾಗಂತ ಸ್ವತಃ ಅವರ ಪತ್ನಿ ಸಾಕ್ಷಿಯೇ (Sakshi Dhoni) ಭವಿಷ್ಯ ನುಡಿದಿದ್ದಾರೆ. ಕ್ರಿಕೆಟ್, ಹಲವು ಉದ್ಯಮಗಳನ್ನು ನಡೆಸುತ್ತಿರುವ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಇದೀಗ ಸಿನಮಾ ರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ತಮ್ಮದೇ ಬ್ಯಾನರ್ ನಲ್ಲಿ ಈಗಾಗಲೇ ತಮಿಳು ಚಿತ್ರವನ್ನೂ ನಿರ್ಮಾಣ ಮಾಡಿದ್ದಾರೆ.
ಟೀಮ್ ಇಂಡಿಯಾಗೆ ಫಿಟ್ನೆಸ್ ಕಲ್ಚರ್ ಪರಿಚಯಿಸಿದ್ದೇ ಚಾಂಪಿಯನ್ ಕ್ಯಾಪ್ಟನ್ ಎಂಎಸ್ ಧೋನಿ. ಅಂದು ಮಾಹಿ ಬಿತ್ತಿದ ಫಿಟ್ನೆಸ್ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅದೆಷ್ಟರ ಮಟ್ಟಿಗೆ ವಿಶ್ವಕ್ರಿಕೆಟ್ಗೆ ಭಾರತ ತಂಡವಿಂದು ಫಿಟ್ನೆಸ್ ತವರೂರಾಗಿ ಗುರುತಿಸಿಕೊಂಡಿದೆ. ವಿರಾಟ್ ಕೊಹ್ಲಿ ಫಿಟ್ನೆಸ್ ಟ್ರೆಂಡ್ ಸೆಟ್ಟರ್ ಆಗಿದ್ದಾರೆ. ಆದರೆ ಟೀಮ್ ಇಂಡಿಯಾದಲ್ಲಿ ಫಿಟ್ನೆಸ್ ಇಷ್ಟೆಲ್ಲ ಆಳವಾಗಿ ಬೇರೂರಿದ್ರು ಮಾಜಿ ಕ್ಯಾಪ್ಟನ್ ಧೋನಿಗೆ ಫಿಟ್ನೆಸ್ ಮೇಲಿನ ಒಲವು ಮಾತ್ರ ಇನ್ನೂ ಕಮ್ಮಿಯಾಗಿಲ್ಲ.
ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿರೋ ಮಾಸ್ಟರ್ಮೈಂಡ್ ವರ್ಷಕ್ಕೊಮ್ಮೆ ಐಪಿಎಲ್ನಲ್ಲಿ ಮಾತ್ರ ಕಾಣಿಸಿಕೊಳ್ತಿದ್ದಾರೆ. ಜಗತ್ತನ್ನೇ ಗೆದ್ದ ಮಹಿಗೀಗ 42 ವಯಸ್ಸು. ಈ ವಯಸ್ಸಿನಲ್ಲು ಮಿಸ್ಟರ್ ಕೂಲ್ಗೆ ಫಿಟ್ನೆಸ್ ಮೇಲಿನ ಆಸಕ್ತಿ ಮಾತ್ರ ಕಿಂಚಿತ್ತು ಕಮ್ಮಿ ಆಗಿಲ್ಲ.
ನೋಡಿ ತನ್ನ ತೀಕ್ಷ್ಣ ಬುದ್ಧವಂತಿಕೆಯಿಂದಲೇ ಕ್ರಿಕೆಟ್ ಲೋಕವನ್ನಾಳಿದ ಧೋನಿ 42ನೇ ವಯಸ್ಸಿನಲ್ಲೂ ಎಷ್ಟೊಂದು ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ ಅನ್ನೋದನ್ನ. ಅಬ್ಬಬ್ಬಾ ಅದೇನ್ ಮೈಕಟ್ಟು, ಅದೇನ್ ಮಸಲ್ಸ್ ಅಲ್ವಾ ? ನಿಜಕ್ಕೂ ಕ್ರೇಜಿನೇ ಬಿಡಿ. ತಲಾ ಧೋನಿ ರಾಂಚಿಯಲ್ಲಿ ಜಿಮ್ ಸೆಷನ್ ಮುಗಿಸಿಕೊಂಡು ಹೊರಬರ್ತಿರೋ ವಿಡಿಯೋ ಇದು. ಮಾಹಿಯ ಈ ಫಿಟ್ನೆಸ್ ಕಂಡು ಯಂಗ್ಸ್ಟರ್ಸ್ ನಾಚದೇ ಬೇರೆ ವಿಧಿಯಿಲ್ಲ.
ಈ ವಯಸ್ಸಿನಲ್ಲೂ ಧೋನಿಯ ಮೈಕಟ್ಟು ನೋಡಿ ನಿಮಗೆ ಅಚ್ಚರಿ ಅನ್ನಿಸಿರಬಹುದು. ಅಜಾನುಬಾಹು ತೋಳುಗಳು ಎಂತಹವರಿಗೂ ಜಲಸ್ ಹುಟ್ಟಿಸುತ್ತೆ. ಕೇವಲ ದೇಹವನ್ನ ಸದೃಢವಾಗಿಟ್ಟುಕೊಳ್ಳಲು ಮಹಿ ಫಿಟ್ನೆಸ್ ಗೀಳಿಗೆ ಬಿದ್ದಿಲ್ಲ. ಬದಲಿಗೆ ಧೋನಿಯ ಫಿಟ್ನೆಸ್ ಸರ್ಕಸ್ ಹಿಂದೆ ಸಿನಿಮಾ ಲೋಕಕ್ಕೆ ಎಂಟ್ರಿಕೊಡುವ ಲೆಕ್ಕಚಾರ ಅಡಗಿದೆ.
ಹೌದು, ಮಿಸ್ಟರ್ ಕೂಲ್ ಫಿಟ್ನೆಸ್ ಕಡೆ ಇಷ್ಟೊಂದು ಗಮನ ಕೊಡಲು ಕಾರಣ ಸಿನಿಮಾ. ಬೆಳ್ಳಿಪರದೇ ಪರದೇ ಹಿರೋ ಆಗಿ ಅಬ್ಬರಿಸಲು ಧೋನಿ ಸೈಲೆಂಟಾಗಿ ಸಿದ್ಧತೆ ಆರಂಭಿಸಿದ್ದಾರೆ. ಸ್ವತಃ ಧೋನಿ ಪತ್ನಿ ಸಾಕ್ಷಿ ಧೋನಿ ಅವರೇ ಸಿನಿ ರಂಗಕ್ಕೆ ಧುಮುಕುವ ಹಿಂಟ್ ನೀಡಿದ್ದಾರೆ.