ಬೇಸಿಗೆ ಕಾಲದಲ್ಲಿ ನಾವು ಎಲ್ಲಾದರೂ ಹೊರಗಡೆ ಹೋದಾಗ ಎದುರಾಗುವ ವಿಪರೀತ ಶಕೆ ಹಾಗೂ ಬೆವರಿನ ಕಾರಣದಿಂದ ದೇಹಕ್ಕೆ ತಂಪಾದ ಮತ್ತು ಆರೋಗ್ಯಕರವಾದ ಯಾವುದಾದರೂ ಪಾನೀಯವನ್ನು ಕುಡಿಯಬೇಕು ಎಂದು ಮನಸ್ಸಿಗೆ ಬಂದರೆ ಅದು ಎಳನೀರು ಅಥವಾ ಕಬ್ಬಿನ ರಸವೇ ಆಗಿರುತ್ತದೆ.
ಇದರಲ್ಲಿ ಅನೇಕ ಬಗೆಯ ಪೌಷ್ಠಿಕಾಂಶಗಳು ಸಿಗುವ ಹೊರತಾಗಿಯೂ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಗುಣಲಕ್ಷಣ ಇದೆ. ಕಾಮಾಲೆ ರೋಗದಿಂದ ಬಳಲುತ್ತಿರುವವರಿಗೆ ಮತ್ತು ರಕ್ತಹೀನತೆ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಇದು ಪರಿಹಾರ ಒದಗಿಸುತ್ತದೆ
ಮೂತ್ರಪಿಂಡದ ಆರೋಗ್ಯಕ್ಕೆ ಪ್ರಯೋಜನಕಾರಿ
ಕಬ್ಬಿನ ರಸವನ್ನು ನಿಯಮಿತವಾಗಿ ಬಳಸುವುದರಿಂದ ಮೂತ್ರದ ಹರಿವು ಸ್ಪಷ್ಟ ಮತ್ತು ವೇಗವಾಗಿರುತ್ತದೆ. ಇದು ಮೂತ್ರಪಿಂಡವು ತನ್ನ ಕೆಲಸವನ್ನು ಸರಿಯಾಗಿ ಮಾಡಲು ಸಹಾಯ ಮಾಡುತ್ತದೆ.
ಯಕೃತ್ತಿನ ಆರೋಗ್ಯಕ್ಕೆ ಪ್ರಯೋಜನಕಾರಿ
ಕಬ್ಬಿನ ರಸವನ್ನು ನಮ್ಮ ಯಕೃತ್ತಿಗೆ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವೈದ್ಯರು ಸಾಮಾನ್ಯವಾಗಿ ಜಾಂಡೀಸ್ ರೋಗಿಗಳಿಗೆ ಕಬ್ಬಿನ ರಸವನ್ನು ಕುಡಿಯಲು ಸಲಹೆ ನೀಡುತ್ತಾರೆ. ಅದು ಅವರಿಗೆ ಪರಿಹಾರವನ್ನು ನೀಡುತ್ತದೆ. ಕಬ್ಬಿನ ರಸವನ್ನು ಪ್ರತಿದಿನ ಸೇವಿಸಬಹುದು. ಒಂದು ಲೋಟ ಕಬ್ಬಿನ ರಸವನ್ನು ಯಾವುದೇ ಸಮಯದಲ್ಲಿ ತೆಗೆದುಕೊಳ್ಳಬಹುದು. ಆದಾಗ್ಯೂ ನಿಮಗೆ ಯಾವುದೇ
ಜೀರ್ಣಕ್ರಿಯೆಗೆ ಸಹಕಾರಿ
ಕಬ್ಬಿನ ರಸದಲ್ಲಿ ಕರಗುವ ನಾರುಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಇವು ಕರುಳಿನ ಒಳಗೆ ಆಹಾರದ ಚಲನೆ ಸುಲಭವಾಗಿಸಲು ಸಹಾಯ ಮಾಡುತ್ತವೆ. ಆ ಮೂಲಕ ಮಲಬದ್ಧತೆ, ಹೊಟ್ಟೆಯುಬ್ಬರಿಕೆ ಮತ್ತು ಹೊಟ್ಟೆಯ ಸೆಡೆತ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ನೆರವಾಗುತ್ತದೆ.
ರೋಗ ನಿರೋಧಕ ಶಕ್ತಿ ವೃದ್ಧಿ
ದೇಹದಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಇದ್ದರೆ ರೋಗ ನಿರೊಧಕ ಶಕ್ತಿ ಉತ್ತಮವಾಗಿರುತ್ತದೆ. ನೀವು ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಅಂಶ ಕಬ್ಬಿನ ಹಾಲಿನಲ್ಲಿದೆ. ಇದರ ನಿಯಮಿತ ಸೇವನೆಯಿಂದ ರೋಗ ನಿರೋಧಕ ಶಕ್ತಿ ಅತ್ಯುತ್ತಮವಾಗಿರುತ್ತದೆ.
ಕಾಂತಿಯುಕ್ತ ತ್ವಚೆಗೆ ಸಹಕಾರಿ
ಕಬ್ಬಿನ ಹಾಲಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ಗ್ಲೈಕೊಲಿಕ್ ಆಮ್ಲದಂತಹ ಆಲ್ಫಾ ಹೈಡ್ರಾಕ್ಸಿ ಆಮ್ಲಗಳು ವಿಕಿರಣಕ್ಕೆ ಒಳಗಾದ ಚರ್ಮದ ಪುನಃಶ್ಚೇತನಕ್ಕೆ ಸಹಾಯ ಮಾಡುತ್ತದೆ. ಅಲ್ಲದೇ ಮುಖದ ಮೊಡವೆಗಳನ್ನು, ಮೊಡವೆಗಳ ಕಲೆಗಳನ್ನು ಕಡಿಮೆ ಮಾಡುತ್ತದೆ. ಚರ್ಮದ ವಯಸ್ಸಾಗುವ ಗತಿಯನ್ನು ನಿಧಾನಗೊಳಿಸುವುದರ ಜೊತೆಗೆ ತ್ವಚೆಯನ್ನು ಕಾಂತಿಯುಕ್ತ ಮತ್ತು ಮೃದುವಾಗಿರಲು ನೆರವಾಗುತ್ತದೆ.