ಭಾರತದ ವಿವಿಧ ಭಾಗಗಳಲ್ಲಿ ಮೊಮೊಸ್ ಟ್ರೆಂಡ್ ವೇಗವಾಗಿ ಹೆಚ್ಚುತ್ತಿದೆ. ನೇಪಾಳದಿಂದ ಆರಂಭವಾದ ಈ ಖಾದ್ಯ ದೇಶದ ಮೂಳೆ ಮೂಲೆಗಳಿಗೂ ಹಬ್ಬಿದೆ. ಸಂಜೆಯಾಗುತ್ತಿದ್ದಂತೆಯೇ ರಸ್ತೆ ಬದಿಗಳಲ್ಲಿ ಮೊಮೊಸ್ ಸ್ಟಾಲ್ಗಳು ಎದ್ದು ನಿಲ್ಲುತ್ತವೆ. ಈ ಖಾದ್ಯ ತಿನ್ನಲು ಬಲು ರುಚಿ. ಈ ರುಚಿಯ ಕಾರಣದಿಂದಲೇ ಇದನ್ನು ಎಷ್ಟು ತಿಂದರೂ ಕಡಿಮೆ ಎಂದೆನಿಸುತ್ತದೆ.
ಆದರೆ ರಸ್ತೆ ಬದಿಯಲ್ಲಿ ತರಾತುರಿಯಲ್ಲಿ ತಿನ್ನುವ ಮೊಮೊಸ್ ನಿಮ್ಮ ದೇಹಕ್ಕೆ ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಅದರಲ್ಲಿ ಎಣ್ಣೆ ಮತ್ತು ಮಸಾಲೆಗಳಿಲ್ಲ ಎಂದು ನಮಗೆ ಅನಿಸುತ್ತದೆ. ಎಣ್ಣೆ ಮತ್ತು ಮಸಾಲೆ ಇಲ್ಲದಿರುವಾಗ ಇದು ಹೇಗೆ ಅಪಾಯಕಾರಿ ಎಂದು ಹಲವರು ಕೇಳುತ್ತಾರೆ. ಎಷ್ಟೇ ತಿಂದರೂ ಅದು ದೇಹಕ್ಕೆ ಹಾನಿಕಾರಕವಲ್ಲ ಎಂದು ಭಾವಿಸುವುದು ತುಂಬಾ ತಪ್ಪು.
ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತೆ: ಮೊಮೊಸ್ ತಯಾರಿಸಲು ಮೈದಾ ಬಳಸಲಾಗುತ್ತದೆ. ಮೈದಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಪಿಷ್ಟದಿಂದಾಗಿ ಸ್ಥೂಲಕಾಯದ ಅಪಾಯ ಹೆಚ್ಚಾಗುತ್ತದೆ. ಇದಲ್ಲದೆ, ಮೈದಾ ತಿನ್ನುವುದರಿಂದ ರಕ್ತದಲ್ಲಿ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ (ಕೆಟ್ಟ ಕೊಲೆಸ್ಟ್ರಾಲ್) ಮಟ್ಟವನ್ನು ಹೆಚ್ಚಿಸಬಹುದು.
ಮೇದೋಜ್ಜೀರಕ ಗ್ರಂಥಿಗೆ ಹಾನಿಕಾರಕ: ತಿನ್ನಲು ರುಚಿಕರವಾಗಿ ಕಾಣುವ ಮೊಮೊಗಳು ಸಹ ಸಾಕಷ್ಟು ಮೃದುವಾಗಿರುತ್ತವೆ. ವಾಸ್ತವವಾಗಿ, ಅದನ್ನು ಮೃದುವಾಗಿಸಲು, ಅಜೋಡಿಕಾರ್ಬೋನಾ ಮೆಡಿ ಮತ್ತು ಬೆಂಜೊಯಿಲ್ ಪೆರಾಕ್ಸೈಡ್ ಇತ್ಯಾದಿಗಳನ್ನು ಹಿಟ್ಟಿಗೆ ಸೇರಿಸಲಾಗುತ್ತೆ. ಈ ಎರಡೂ ಪದಾರ್ಥಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಮತ್ತು ಅವು ಮೇದೋಜ್ಜೀರಕ ಗ್ರಂಥಿಗೆ ಅಪಾಯಕಾರಿ ಎಂದು ತಿಳಿದು ಬಂದಿದೆ.
ಏನೇನೋ ಬಳಸ್ತಾರೆ: ಮೊಮೊಸ್ ಒಳಗೆ ಸ್ಟಫಿಂಗ್ ಮಾಡಲು ತರಕಾರಿಗಳು ಮತ್ತು ಚಿಕನ್ ಇತ್ಯಾದಿಗಳನ್ನು ಬಳಸಲಾಗುತ್ತದೆ. ಆದರೆ ದೀರ್ಘಕಾಲದವರೆಗೆ ಇದನ್ನು ಇರಿಸೋದ್ರಿಂದ, ಅದು ಹದಗೆಡುತ್ತದೆ, ಇದರ ಸೇವನೆಯು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಇಷ್ಟೇ ಅಲ್ಲ, ಚಿಕನ್ ಇತ್ಯಾದಿಗಳಲ್ಲಿರುವ ಇ.ಕೋಲಿ ಬ್ಯಾಕ್ಟೀರಿಯಾಗಳು ಸಹ ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಬಹುದು.
ಮಸಾಲೆಯುಕ್ತ ಚಟ್ನಿಯಿಂದ ಸಮಸ್ಯೆ: ಮೊಮೊಸ್ ಜೊತೆ ಸವಿಯಲು ಖಾರ-ಕೆಂಪು ಚಟ್ನಿ ಸಿಗುತ್ತೆ ಇದನ್ನು ಜನರು ಮೊಮೊಗಳೊಂದಿಗೆ ತಿನ್ನಲು ಇಷ್ಟಪಡ್ತಾರೆ. ಆದರೆ ಈ ಚಟ್ನಿಯಲ್ಲಿ ಕೆಂಪು ಮೆಣಸಿನಕಾಯಿಯ ಪ್ರಮಾಣವು ತುಂಬಾ ಹೆಚ್ಚಾಗಿರುತ್ತೆ, ಇದು ನಿಮ್ಮ ಆರೋಗ್ಯಕ್ಕೆ ವಿಷದಂತೆ ಕೆಲಸ ಮಾಡುತ್ತೆ. ಹೆಚ್ಚು ಮಸಾಲೆಯುಕ್ತ ಆಹಾರ ಸೇವಿಸುವುದು ಸಹ ಮೂಲವ್ಯಾಧಿ ಇತ್ಯಾದಿ ಸಮಸ್ಯೆಗಳನ್ನು ಉಂಟುಮಾಡಬಹುದು.
ಮಧುಮೇಹದ ಅಪಾಯ ಹೆಚ್ಚಾಗುವುದು: ಮೊಮೊಗಳನ್ನು ಮೃದುವಾಗಿಸಲು ಬಳಸುವ ವಸ್ತುಗಳು ಮೇದೋಜ್ಜೀರಕ ಗ್ರಂಥಿಗೆ ಸಾಕಷ್ಟು ಹಾನಿಕಾರಕವಾಗಿವೆ. ಮೇದೋಜ್ಜೀರಕ ಗ್ರಂಥಿ ಹಾನಿಗೊಳಗಾದಾಗ ಇನ್ಸುಲಿನ್ ಹಾರ್ಮೋನ್ ಸ್ರವಿಸುವಿಕೆಯನ್ನು ಸರಿಯಾಗಿ ಮಾಡಲಾಗುವುದಿಲ್ಲ, ಇದು ಜನರಲ್ಲಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚು ಮೊಮೊ ತಿನ್ನುವವರಲ್ಲಿ ಮಧುಮೇಹದ ಅಪಾಯ ಅನೇಕ ಪಟ್ಟು ಹೆಚ್ಚಾಗುತ್ತದೆ.