ಮಳೆಗಾಲ ಶುರುವಾದರೆ ಸಾಕು ಸಾಕಷ್ಟು ಮಂದಿ ನಾನಾ ರೀತಿಯ ಅನಾರೋಗ್ಯಗಳಿಗೆ ಒಳಗಾಗುತ್ತಾರೆ. ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಬೇಗ ಜ್ವರ, ಶೀತ, ಸೋಂಕುಗಳು ಹರಡುತ್ತದೆ. ಈಗಾಗಲೇ ಮಳೆಗಾಲ ಹಿನ್ನೆಲೆ ಬಹುತೇಕ ಮಂದಿ ಮಲೇರಿಯಾ, ಡೆಂಗ್ಯೂ, ಟೈಫಾಯ್ಡ್ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಅದರಲ್ಲೂ ಮುಖ್ಯವಾಗಿ ಕಳೆದ ಮೂರು ನಾಲ್ಕು ತಿಂಗಳಿಂದ ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಅದ್ರಲ್ಲೂ ಹೆಚ್ಚಿನವರಿಗೆ ಡೆಂಗ್ಯೂ ಬಗ್ಗೆ ಅನೇಕ ಪ್ರಶ್ನೆಗಳಿದೆ. ಡೆಂಗ್ಯೂ ಹೇಗೆ ಹರಡುತ್ತದೆ? ಅದು ನೀರಿನಲ್ಲಿ ಬೆಳೆಯುತ್ತಾ? ಹೀಗೆ ಹತ್ತು ಹಲವು ಪ್ರಶ್ನೆಗಳು ಜನರಲ್ಲಿದೆ. ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಯಾವ ಸಮಯದಲ್ಲಿ ಡೆಂಗ್ಯೂ ಸೊಳ್ಳೆ ಕಚ್ಚುತ್ತದೆ
ಈ ಜಾತಿಯ ಡೆಂಗ್ಯೂ ಸೊಳ್ಳೆಗಳು ಸೂರ್ಯೋದಯದ ಎರಡು ಗಂಟೆಗಳ ನಂತರ ಮತ್ತು ಸೂರ್ಯಾಸ್ತದ ಹಲವಾರು ಗಂಟೆಗಳ ಮೊದಲು ಹೆಚ್ಚು ಸಕ್ರಿಯವಾಗಿರುತ್ತದೆ. ಆದರೆ ರಾತ್ರಿಯಲ್ಲಿ ನಿಮ್ಮ ಮನೆಯಲ್ಲಿ ಉತ್ತಮ ಬೆಳಕು ಇದ್ದರೂ ಕೂಡ ಅದು ನಿಮ್ಮನ್ನು ಕಚ್ಚುತ್ತದೆ.
ಇಷ್ಟೇ ಅಲ್ಲದೇ, ಕೆಲವು ಸಂಶೋಧನೆಗಳ ಪ್ರಕಾರ ಕೀಲುಗಳು ಮತ್ತು ಮೂಳೆಗಳ ಮೇಲೆ ಹೆಚ್ಚು ಕಚ್ಚುತ್ತವೆ ಎಂದು ಪತ್ತೆ ಹಚ್ಚಲಾಗಿದೆ.
ಡೆಂಗ್ಯೂ ಸೊಳ್ಳೆಗಳು ನೋಡೋದಕ್ಕೆ ಹೇಗಿರುತ್ತದೆ
ಡೆಂಗ್ಯೂ ಸೊಳ್ಳೆಯ ಹೆಸರು ಈಡಿಸ್ ಈಜಿಪ್ಟಿ. ಈ ಸೊಳ್ಳೆಗಳು ಗಾಢ ಬಣ್ಣ ಹೊಂದಿರುತ್ತವೆ. ಅದರ ಕಾಲುಗಳ ಸುತ್ತಲೂ ಇರುವ ಬಿಳಿ ಪಟ್ಟಿ ಮತ್ತು ಅದರ ದೇಹದ ಮೇಲೆ ಮಾಪಕಗಳಂತೆ ಕಾಣುವ ಬೆಳ್ಳಿಯ ಬಿಳಿ ಮಾದರಿಯಿಂದ ನೀವು ಅದನ್ನು ಗುರುತಿಸಬಹುದು. ಈ ರೀತಿಯ ಸೊಳ್ಳೆಗಳು ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಹಾಗೂ ಹೆಚ್ಚಾಗಿ ನೀರಿ ನಿಂತಿರುವ ಸ್ಥಳಗಳಲ್ಲಿ ಕಂಡು ಬರುತ್ತದೆ.
ಡೆಂಗ್ಯೂ ಸೊಳ್ಳೆ ಕಚ್ಚಿ ಎಷ್ಟು ದಿನಗಳ ನಂತರ ಜ್ವರ ಬರುತ್ತದೆ
WHO ಪ್ರಕಾರ ಡೆಂಗ್ಯೂ ಜ್ವರವು ಸಾಮಾನ್ಯವಾಗಿ ಸೋಂಕಿತ ಸೊಳ್ಳೆ ಕಚ್ಚಿದ 4-10 ದಿನಗಳ ನಂತರ ಸಂಭವಿಸುತ್ತದೆ. ಈ ಸಂದರ್ಭದಲ್ಲಿ 40 ಡಿಗ್ರಿ ಸೆಲ್ಸಿಯಸ್ ಅಥವಾ 104 ಡಿಗ್ರಿ ಎಫ್ ವರೆಗೆ ಹೋಗಬಹುದಾದ ಅತಿ ಹೆಚ್ಚು ಜ್ವರವಿರುವ ಸಾಧ್ಯತೆಯಿದೆ. ಸಾಮಾನ್ಯವಾಗಿ ತಲೆನೋವು ಅಥವಾ ಕಣ್ಣುಗಳ ಹಿಂದೆ ನೋವು ಕಾಣಿಸಿಕೊಳ್ಳೋದು ಡೆಂಗ್ಯೂ ಜ್ವರದ ಲಕ್ಷಣಗಳಲ್ಲಿ ಒಂದಾಗಿದೆ
ಡೆಂಗ್ಯೂ ಸೊಳ್ಳೆ ಹೇಗೆ ಸಂತಾನೋತ್ಪತ್ತಿ ಮಾಡುತ್ತದೆ?
ಡೆಂಗ್ಯೂ ಸೊಳ್ಳೆಗಳು ಮನೆ ಮತ್ತು ಅಂಗಳದಲ್ಲಿ ನೀರು ತುಂಬಿದ ಪಾತ್ರೆಗಳು, ಗೋಡೆಗಳ ಮೇಲೆ ಮೊಟ್ಟೆಗಳನ್ನು ಇಡುತ್ತವೆ. ನೀರಿನಲ್ಲಿ ಮುಳುಗಿದಾಗ ಮೊಟ್ಟೆಗಳು ಹೊರಬರುತ್ತವೆ. ಮೊಟ್ಟೆಗಳು ತಿಂಗಳುಗಳ ಕಾಲ ಬದುಕಬಲ್ಲವು. ಅಲ್ಲದೆ 1 ಹೆಣ್ಣು ಡೆಂಗ್ಯೂ ಸೊಳ್ಳೆಯು ತನ್ನ
ಜೀವನದಲ್ಲಿ 5 ಬಾರಿ ಡಜನ್ಗಟ್ಟಲೆ ಮೊಟ್ಟೆಗಳನ್ನು ಇಡುತ್ತದೆ. ಮತ್ತು ಈ ಮೊಟ್ಟೆಗಳು ಸಾವಿರಾರು ಜನರಿಗೆ ಸೋಂಕು ತಗುಲಿಸಬಹುದು.
ಡೆಂಗ್ಯೂ ಸೊಳ್ಳೆಗಳು ಶುದ್ಧ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆಯೇ?
ಡೆಂಗ್ಯೂ ಸೊಳ್ಳೆಗಳು ಅಶುದ್ಧ ನೀರಿನಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಸೊಳ್ಳೆಗಳು ಹೆಚ್ಚು ಎತ್ತರಕ್ಕೆ ಹಾರಲು ಸಾಧ್ಯವಿಲ್ಲ. ಸೊಳ್ಳೆಗಳು ಮೊಟ್ಟೆ ಇಡಲು ನೀರು ತುಂಬಿದ ಪಾತ್ರೆಗಳ ಹುಡುಕಾಟದಲ್ಲಿ 400 ಮೀಟರ್ಗಳವರೆಗೆ ಮಾತ್ರ ಹಾರಬಲ್ಲವು. ಮತ್ತು ಇಲ್ಲಿಯೇ ಅವು ತಮ್ಮ ಸೋಂಕನ್ನು ಹರಡಲು ಪ್ರಾರಂಭಿಸುತ್ತವೆ.
- ಅನೇಕ ಮಂದಿ ರಾತ್ರಿ ಹೊತ್ತು ಸೊಳ್ಳೆಗಳ ಕಾಟದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸೊಳ್ಳೆ ಪರದೆಗಳನ್ನು ಬಳಸುತ್ತೇವೆ. ನೀವು ಸೊಳ್ಳೆ ಪರದೆ ಬಳಸದೇ ಇರುವವರಾಗಿದ್ದರೆ, ಇನ್ಮುಂದೆ
- ಸೊಳ್ಳೆ ಪರದೆ ಉಪಯೋಗಿಸಲು ಶುರು ಮಾಡಿ. ಇದರಿಂದ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಬಹುದು. ಜೊತೆಗೆ ಯಾವುದೇ ಡೆಂಗ್ಯೂ ರೋಗ ಸಹ ಹರಡುವುದಿಲ್ಲ.
- ಡೆಂಗ್ಯೂ ಜ್ವರವು ಕಂದು ಬಣ್ಣದ ಹೆಣ್ಣು ಈಡಿಸ್ ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತದೆ. ಇದು ಮುಂಜಾನೆಯಿಂದ ಸಂಜೆಯವರೆಗೆ ಕಚ್ಚುತ್ತದೆ. ಹಾಗಾಗಿ ಬಹಳಷ್ಟು ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ.
- ಡೆಂಗ್ಯೂ ವೈರಸ್ ನಿಂದ ಮಕ್ಕಳನ್ನು ರಕ್ಷಿಸಲು ಪೋಷಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು: ಡೆಂಗ್ಯೂ ಸೊಳ್ಳೆಗಳು ನೀರನ್ನು ಪ್ರೀತಿಸುತ್ತವೆ. ಹಾಗಾಗಿ ವಸತಿ ಪ್ರದೇಶ, ಮಕ್ಕಳು ಆಟವಾಡುವ ಸ್ಥಳಗಳಲ್ಲಿ ನೀರು ಇಡಬಾರದು. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಸೊಳ್ಳೆ ನಿವಾರಕ ಬಟ್ಟೆ ಮತ್ತು ಕಾಲು ಚೀಲ (ಸಾಕ್ಸ್ ಇರುವ ಶೂ) ಧರಿಸಬೇಕು.
- ಸೊಳ್ಳೆ ವಿರೋಧಿ ಸ್ಪ್ರೇಗಳೊಂದಿಗೆ ಮನೆಯನ್ನು ಸಿಂಪಡಿಸಿ. ಮಕ್ಕಳಿಗೆ ಸರಿಯಾದ ಪೋಷಣೆ ನೀಡುವುದು ಒಳ್ಳೆಯದು. ಕಿಟಕಿಗಳು ಮತ್ತು ಬಾಗಿಲುಗಳನ್ನು ಸಂಜೆ ಹೊತ್ತು ಮುಚ್ಚಬೇಕು. ಫಿಲ್ಟರ್ ಮಾಡಿದ ಅಥವಾ ಬಿಸಿ ಮಾಡಿದ ನೀರನ್ನು ಮಾತ್ರ ಕುಡಿಯಿರಿ. ಮನೆಯ