ನವದೆಹಲಿ: ಪ್ರಧಾನಿಯಾಗಿ ಒಂಬತ್ತು ವರ್ಷಗಳ ಅಧಿಕಾರಾವಧಿಯಲ್ಲಿ ನರೇಂದ್ರ ಮೋದಿಯವರು ಇಲ್ಲಿಯವರೆಗೆ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ಎಂದು ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಪ್ರಕಟಿಸಿದೆ. ಪುಣೆ ಮೂಲದ ಉದ್ಯಮಿ ಪ್ರಫುಲ್ ಪಿ ಸರ್ದಾ ಸಲ್ಲಿಸಿರುವ ಮಾಹಿತಿ ಹಕ್ಕು (RTI) ಪ್ರಶ್ನೆಗೆ ಪಿಎಂಒ ಉತ್ತರಿಸಿದೆ. 2014 ರಲ್ಲಿ ಭಾರತದ ಪ್ರಧಾನಿಯಾದ ನಂತರ ಪಿಎಂ ಮೋದಿ ಎಷ್ಟು ದಿನ ಕಚೇರಿಗೆ ಹಾಜರಾಗಿದ್ದರು? ಅಲ್ಲದೇ ಅವರು ಎಷ್ಟು ದಿನಗಳು ರಜೆ ಪಡೆದಿದ್ದಾರೆ? ಎಂದು ಅರ್ಜಿಯಲ್ಲಿ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿರುವ ಪಿಎಂಒ, ಪ್ರಧಾನಿ ಮೋದಿಯವರು ಯಾವಾಗಲೂ ಕರ್ತವ್ಯದಲ್ಲಿರುತ್ತಾರೆ.
ಅವರು ಅಧಿಕಾರ ವಹಿಸಿಕೊಂಡ ನಂತರ ಯಾವುದೇ ರಜೆಯನ್ನೂ ಪಡೆದಿಲ್ಲ ಎಂದು ಹೇಳಿದೆ. ಎರಡನೇ ಪ್ರಶ್ನೆಯಾಗಿ ಎಷ್ಟು ದಿನಗಳ ಹಾಜರಾತಿ, ವಿವಿಧ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ ಎಂಬ ವಿವರಗಳನ್ನು ಕೇಳಲಾಗಿತ್ತು. ಇದಕ್ಕೆ ಪಿಎಂಒ ವೆಬ್ಸೈಟ್ ಲಿಂಕ್ನ್ನು ಒದಗಿಸಲಾಗಿದೆ. ಮೇ 2014 ರಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದೇಶ ಹಾಗೂ ವಿದೇಶಗಳಲ್ಲಿನ 3,000 ಕ್ಕೂ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಈ ಉತ್ತರಗಳು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಹಲವಾರು ಜನ ಶ್ರೇಷ್ಠ ಮತ್ತು ಆದರ್ಶ ಪ್ರಧಾನಿ, ರಾಷ್ಟ್ರದ ಅಭಿವೃದ್ಧಿ ಕಡೆಗೆ ಅವರ ಸಹಕಾರ, ಸಮರ್ಪಣಾ ಮತ್ತು ಜವಾಬ್ದಾರಿಗಾಗಿ ಯಾವಾಗಲೂ ಗೌರವಿಸುತ್ತೇವೆ ಮತ್ತು ಪ್ರಶಂಸಿಸುತ್ತೇವೆ. ನಿಮ್ಮ ಕೊಡುಗೆಗಾಗಿ ಧನ್ಯವಾದಗಳು ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಬರೆದು ಕೊಂಡಿದ್ದಾರೆ. ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು ರಾಷ್ಟ್ರದ ಸೇವೆಗಾಗಿ ದಣಿವರಿಯದೆ ತನ್ನನ್ನು ಸಮರ್ಪಿಸಿಕೊಳ್ಳುವ ನಾಯಕ, ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.