ಮಾರುಕಟ್ಟೆಯಲ್ಲಿ ಸೊಳ್ಳೆಗಳನ್ನು ಓಡಿಸಲೆಂದೇ ಹಲವು ರೀತಿಯ ಮಾಸ್ಕಿಟೋ ಕಾಯಿಲ್ಗಳು ಲಭ್ಯವಿದೆ. ಇವು ಸೊಳ್ಳೆಗಳ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುವುದು ಮಾತ್ರ ಖಂಡಿತ. ಹೀಗಾಗಿಯೇ ಈ ಸೊಳ್ಳೆ ಕಾಯಿಲ್ಗಳನ್ನು ಬಳಸುವ ಮುನ್ನ ಒಂದಷ್ಟು ವಿಚಾರಗಳನ್ನು ತಿಳಿದುಕೊಳ್ಳಬೇಕು. ಕಾಯಿಲ್ ಹಚ್ಚಿಡೋದ್ರಿಂದ, ಅಥವಾ ಸೊಳ್ಳೆಬತ್ತಿಗಳಿಂದ ಹೊರಹೊಮ್ಮುವ ಹೊಗೆಯಿಂದ ಏನೆಲ್ಲಾ ತೊಂದ್ರೆಯಿದೆ ತಿಳಿದುಕೊಳ್ಳೋಣ.
ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ: ಒಂದು ಅಧ್ಯಯನವು ಒಂದು ಸೊಳ್ಳೆ ಸುರುಳಿಯನ್ನು ಸುಡುವುದರಿಂದ ಉತ್ಪತ್ತಿಯಾಗುವ ಕಣಗಳು 75-137 ಸಿಗರೇಟ್ಗಳನ್ನು ಸುಡುವುದಕ್ಕೆ ಸಮನಾಗಿರುತ್ತದೆ ಎಂದು ಅಂದಾಜಿಸಿದೆ. ಸೊಳ್ಳೆ ಕಾಯಿಲ್ ಹೊಗೆಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕ್ಯಾನ್ಸರ್ನಂತಹ ಹೆಚ್ಚು ಗಂಭೀರವಾದ ಆರೋಗ್ಯ ಪರಿಣಾಮಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ.
ಉಸಿರಾಟ ಸಂಬಂಧಿ ಸಮಸ್ಯೆ: ಸೊಳ್ಳೆ ಬತ್ತಿ ಹಚ್ಚಿಡುವುದರಿಂದ ಇದರ ರಾಸಾಯನಿಕಯುಕ್ತ ಹೊಗೆಗೆ ಉಸಿರಾಟ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಅದರಲ್ಲೂ ಅಸ್ತಮಾ, ಒಣಕೆಮ್ಮು ಮೊದಲಾದ ಆರೋಗ್ಯ ಸಮಸ್ಯೆ ಇರುವವರು ದೀರ್ಘಕಾಲ ಮೊಸ್ಕಿಟೋ ಕಾಯಿಲ್ಗೆ ಒಡ್ಡಿಕೊಳ್ಳುವುದು ಆರೋಗ್ಯಕ್ಕೆ ತುಂಬಾ ಮಾರಕವೆಂದು ಪರಿಗಣಿಸಲಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಸೊಳ್ಳೆ ನಿವಾರಕ ಯಂತ್ರಗಳು ಕೂಡಾ ನಮ್ಮ ಆರೋಗ್ಯಕ್ಕೂ ಹಾನಿಕಾರಕ. ಎಲ್ಲೋ ಒಂದು ಕಡೆ ನಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡುವ, ಮುಚ್ಚಿದ ಕೋಣೆಯಲ್ಲಿ ಯಂತ್ರದಿಂದ ಹೊರಬರುವ ವಾಸನೆಯನ್ನೂ ನಾವು ಉಸಿರಾಡುತ್ತೇವೆ.
ಅಲರ್ಜಿಯನ್ನುಂಟು ಮಾಡುವ ಸಾಧ್ಯತೆಯಿದೆ: ಈ ಉತ್ಪನ್ನಗಳು ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು ಅಥವಾ ಉಲ್ಬಣಗೊಳಿಸಬಹುದು. ಅವರು ಕಣ್ಣುಗಳನ್ನು ಕೆರಳಿಸಬಹುದು ಅಥವಾ ಅಲರ್ಜಿಯನ್ನು ಉಂಟುಮಾಡಬಹುದು. ಸೊಳ್ಳೆ ಸುರುಳಿಗಳ ಹೊಗೆಗೆ ಒಡ್ಡಿಕೊಳ್ಳುವುದಕ್ಕೆ ಸಂಬಂಧಿಸಿದ ಅಡ್ಡಪರಿಣಾಮಗಳೆಂದರೆ ತಲೆನೋವು, ಕೆಮ್ಮು, ಗಂಟಲು ನೋವು, ವಾಕರಿಕೆ ಮತ್ತು ತಲೆತಿರುಗುವಿಕೆಯನ್ನು ಒಳಗೊಂಡಿರಬಹುದು. ಇದು ಆಸ್ತಮಾ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (COPD), ಮತ್ತು ತಲೆನೋವುಗಳಂತಹ ಉಸಿರಾಟದ ಪರಿಸ್ಥಿತಿಗಳನ್ನು ಸಹ ಪ್ರಚೋದಿಸಬಹುದು.