ಬೆಂಗಳೂರು:- ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬಳಸಲಾದ ಬಾಂಬ್ ಅನ್ನು ತಯಾರಿಸಲು ಶಂಕಿತ ಉಗ್ರರು 4500 ರಿಂದ 5 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ.
ಬಾಂಬ್ ತಯಾರಿಸಲು ಶಂಕಿತ ಉಗ್ರರು ಸುಮಾರು ಎರಡು ತಿಂಗಳು ಸಮಯ ತೆಗೆದುಕೊಂಡಿದ್ದರು. ಬಾಂಬ್ ತಯಾರಿಸಲು ಬೇಕಾದ ಕಚ್ಚಾವಸ್ತುಗಳನ್ನು ಕೆಲವನ್ನು ಆನ್ ಲೈನ್ ಮೂಲಕ ಮತ್ತು ಇನ್ನು ಕೆಲವುಗಳನ್ನು ಅಂಗಡಿಯಲ್ಲಿ ಖರೀದಿಸಿದ್ದರು ಎಂದು ಮಾಹಿತಿ ಲಭ್ಯವಾಗಿದೆ.
ಡೆಟೋನೇಟರ್, ಟೈಮರ್, ಬ್ಯಾಟರಿ ಹಾಗೂ ರಂಜಕವನ್ನು ಆನ್ ಲೈನ್ ಮೂಲಕ ಖರೀದಿ ಮಾಡಿದ್ದಾರೆ. ಉಳಿದಂತೆ ನಟ್, ಬೋಲ್ಟ್, ಕೆಲ ವೈಯರ್ಗಳನ್ನು ಅಂಗಡಿಯಲ್ಲಿ ಖರೀದಿ ಮಾಡಿದ್ದಾರೆ. ಈ ಸಾಮಾಗ್ರಿಗಳನ್ನು ಬಂಧಿತ ಆರೋಪಿ ಮುಜಾಮಿಲ್ ಶರೀಫ್ ಖರೀದಿಸಿ, ಬಾಂಬ್ ತಯಾರಿಸುತ್ತಿದ್ದ ಶಂಕಿತ ಅಬ್ದುಲ್ ಮತೀನ್ ತಾಹ ಮತ್ತು ಮುಸಾವೀರ್ ನೀಡುತ್ತಿದ್ದನು ಎಂಬ ಶಂಕೆ ವ್ಯಕ್ತವಾಗಿದೆ