ಬೆಂಗಳೂರು: 2023ಕ್ಕೆ ವಿದಾಯ ಹೇಳಿ, 2024 ಅನ್ನು ಭರ್ಜರಿಯಾಗಿ ಸ್ವಾಗತ ಮಾಡಿದ್ದೇವೆ.. ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನ ಎಂದಿನಂತೆ ಹೊಸವರ್ಷವನ್ನು ಕಲ್ರ್ ಫುಲ್ಲಾಗೇ ಬರಮಾಡಿಕೊಂಡ್ರು. ಹಾಗಾದ್ರೆ 31 ರಾತ್ರಿ ಬೆಂಗಳುರಿನ ಜಿ ರೋಡ್ , ಬ್ರಿಗೇಡ್ ರೋಡ್ , ಕೋರಮಂಗಲ, ಇಂದ್ರಾನಗರಗಳಲ್ಲಿ ಸಂಭ್ರಮ ಹೇಗಿತ್ತು. ಏನೆಲ್ಲಾ ಯಡವಟ್ಟುಗಳಾಯ್ತು ಅನ್ನೋದನ್ನ ತೋರಿಸ್ತೀವಿ ನೋಡಿ…
ಪ್ರತಿ ವರ್ಷದಂತೆ ಈ ವರ್ಷವೂ ಹೊಸವರ್ಷಾಚರಣೆಯ ಹಾಟ್ ಸ್ಪಾಟ್ ಎಂದು ಬಿಂಬಿತವಾಗಿರುವ ಎಂ ಜಿ ರೋಡ್ ಬ್ರಿಗೇಡ್ ರೋಡ್, ಕೋರಮಂಗಲ ಹಾಗು ಇಂದ್ರಾನಗರ ಪ್ರದೇಶಗಳು ಮಿರಿ ಮಿರಿ ಅಂತ ಮಿಂಚುತಿದ್ವು. ಎಲ್ಲಾ ಪಬ್ಬು ಕ್ಲಬ್ಬು ಬಾರ್ ಗಳು ಜನರಿಂದ ತುಂಬಿ ತುಳುಕುತಿದ್ವು. ರಸ್ತೆಗಳೆಲ್ಲಾ ತುಂಬಿ ಹೋಗಿದ್ವು. ಬೆಂಗಳೂರು ನಗರ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ರು.. 12 ಗಂಟೆ ಗಡಿಯಾರದ ಮುಳ್ಳು ಮುತ್ತಿಕ್ಕುತ್ತಿದ್ದಂತೆ ಹ್ಯಾಪಿ ನ್ಯೂ ಇಯರ್ ಹರ್ಷೋದ್ಘಾರ ಮುಗಿಲು ಮಟ್ಟಿತ್ತು. 2023ಕ್ಕೆ ವಿದಾಯ ಹೇಳಿದ ಯುವ ಜನರು ಕುಣಿದು ಕುಪ್ಪಳಿಸಿ 2024ರ ಹೊಸವರ್ಷದ ಶುಭಾಶಯಗಳು ವಿನಿಮಯ ಮಾಡಿಕೊಂಡ್ರು..
2024ರ ಹೊಸ ವರ್ಷದ ಸಡಗರ- ಸಂಭ್ರಮದ ವೇಳೆ ಮಾಮೂಲಿಯಂತೆ ಬೆಂಗಳೂರಿನ ಹಲವು ಕಡೆಗಳಲ್ಲಿ ಯವಜನರು ಹುಚ್ಚಾಟಗಳು ಮಾಡಿದ್ರು. ಇದರಿಂದಾಗಿ ಕೆಲವರು ಪೊಲೀಸರ ಬೆತ್ತದ ರುಚಿಯನ್ನೂ ಅನುಭವಿಸ ಬೇಕಾಯಿತು. ರಾತ್ರಿಯಾಗುತ್ತಿದ್ದಂತೆಯೇ ಪಬ್ಗಳಲ್ಲಿ ಕುಡಿದು ಮತ್ತೇರಿಸಿಕೊಂಡಿದ್ದ ಯುವಕ-ಯುವತಿಯರು ಬೀದಿಗೆ ಇಳಿದಿದ್ದರು. ಪ್ರಮುಖವಾಗಿ ಉತ್ತರ ಭಾರತದ ಯುವತಿಯರಂತೂ ಮೈಮೇಲೆ ಪರಿವೆಯೇ ಇಲ್ಲದಂತೆ ಓಲಾಡುತ್ತಿದ್ದರು. ಕೆಲವು ಯುವತಿಯರು ಕುಡಿದು ಹೆಚ್ಚಾಗಿ ನಡೆಯಲೂ ಆಗದಂತೆ ಕುಳಿತು ಬಿಟ್ಟಿದ್ರು… ಕಡೆಗೆ ಅಂತವರನ್ನು ಮಹಿಳಾ ಪೊಲೀಸರ ಸಹಾಯದಿಂದ ಕರೆದುಕೊಂಡು ಹೋಗಬೇಕಾಯಿತು. ಇನ್ನು ಗುಂಪುಗುಂಪಾಗಿ ಬಂದಿದ್ದ ಕೆಲ ಯುವಕರು ಯುವತಿಯರನ್ನು ಮುಟ್ಟುವು ಅಸಬ್ಯವಾಗಿ ವರ್ತಿಸಿದ ಘಟನೆಗಳೂ ನೆಡೆಯಿತು.. ತನ್ನ ಗರ್ಲ್ಫ್ರೆಮಡನ್ನು ಮುಟ್ಟಿದ್ದಕ್ಕೆ ಯುವಕನೊಬ್ಬ ಪ್ರತಿಯಕರನಿಂದ ಧರ್ಮದೇಟೂ ತಿನ್ನಬೇಕಾಯಿತು… ಇನ್ನು ಬೆಂಗಳೂರು ನಮಗರ ಪೊಲೀಸ್ ಕಮೀಷನರ್ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು ಕೋರಿದ್ರು
ಹೊಸವರ್ಷವನ್ನು ಮತ್ತೇರಿಸಿಕೊಂಡು ಚನ್ನಾಗಿ ಎಂಜಾಯ್ ಮಾಡಿದ್ದ ಜನ ಮತ್ತೆ ಮನೆಗೇ ಹಾಓಗ ಬೇಕಲ್ಲ. ಮಧ್ಯ ರಾತ್ರಿ ತಾನೆ ಪೊಲೀಸ್ ಯಾರು ಇರಲ್ಲ ಅಂತ ಕುಡಿದು ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿದ್ದವರಿಗೆ ಬೆಂಗಳೂರು ಸಂಚಾರಿ ಪೊಲೀಸರು ಶಾಕ್ ಕೊಟ್ಟಿದ್ರು. ಹೊಸ ವರ್ಷದ ಹಿನ್ನಲೆ ಸ್ಪೆಷಲ್ ಡ್ರೈವ್ ಮಾಡಿ ಸಂಚಾರಿ ಪೊಲೀಸರು 7620 ವಾಹನಗಳನ್ನ ತಪಾಸಣೆ ಮಾಡಿ 330 ಡ್ರಂಕ್ ಡ್ರೈವ್ ಕೇಸ್ ದಾಖಲಿಸಿದ್ರು.. ಮಧ್ಯರಾತ್ರಿ 12 ರಿಂದ ಮುಂಜಾನೆವರೆಗೂ ನಗರದ ಎಂಭತ್ತಕ್ಕೂ ಹೆಚ್ಚು ಕಡೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಿದ್ರು…
ಒಟ್ಟಿನಲ್ಲಿ ಬೆಂಗಳೂರು ಪೊಲೀಸರ ಬಿಗಿ ಬಂದೋಸ್ತ್ ನಿಂದಾಗಿ ನಗರದಲ್ಲಿ ಯಾವುದೇ ದೊಡ್ಡ ಮಟ್ಟದ ಅವಘಡಗಳು ಸಂಭವಿಸದೆ ಬೆಂಗಳೂರಿನ ಜನ 2023ಕ್ಕೆ ವಿದಾಯ ಹೇಳಿ 2024ನ್ನು ಭರ್ಜರಿಯಾಗಿ ಸ್ವಾಗತ ಮಾಡಿದರು. ವಿನಾ ಕಾರಣ ಕಿರಿಕ್ ಮಾಡಿದ ಯುವಕರು ಬೆತ್ತದ ರುಚಿ ನೋಡಿದ್ರ,ಸಂಚಾರಿ ನಿಯಮ ಉಲ್ಲಂಘಿಸಿದವರು ದಂಡ ಕಟ್ಟಿ ಹಣ ಕಳೆದುಕೊಂಡು…ಎನಿ ವೇ ನಾಡಿನ ಸಮಸ್ತ ಜನತೆಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು..