ಬದನೆಯನ್ನು ಮಕ್ಕಳು ಸೇರಿದಂತೆ ಅನೇಕರು ಮೂಗು ಮುರಿಯುತ್ತಾರೆ. ಆದರೆ ಅದರ ನಿಜವಾದ ಅಭಿರುಚಿ ವಿವಿಧ ರೀತಿಯಲ್ಲಿ ಅಡುಗೆ ಮಾಡಿ ತಿಂದವರಿಗೆ ಮಾತ್ರ ಗೊತ್ತಿರುತ್ತೆ. ನಾವಿಂದು ರುಚಿಕರ ಹಾಗೂ ಸುಲಭವಾದ ಬದನೆ ಫ್ರೈ ರೆಸಿಪಿಯನ್ನು ತಿಳಿಯೋಣ. ಬದನೆ ಇಷ್ಟ ಪಡದವರು ಕೂಡಾ ಖಂಡಿತಾ ಇಷ್ಟಪಟ್ಟು ಸವಿಯುತ್ತಾರೆ. ಊಟದೊಂದಿಗೆ ಸೈಡ್ ಡಿಶ್ ಆಗಿಯೂ ಇದನ್ನು ಸವಿಯಬಹುದು. ಟೇಸ್ಟಿ ಬದನೆ ಫ್ರೈ ರೆಸಿಪಿ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವಪದಾರ್ಥಗಳು:
ಬದನೆ – 2
ಅರಿಶಿನ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 4 ಟೀಸ್ಪೂನ್
ಮೆಣಸಿನ ಪುಡಿ – ಒಂದೂವರೆ ಟೀಸ್ಪೂನ್
ಮಾಡುವವಿಧಾನ:
ಮೊದಲಿಗೆ ಬದನೆಯನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿಕೊಳ್ಳಿ.
* ಒಂದು ಬೌಲ್ನಲ್ಲಿ ಮೆಣಸಿನ ಪುಡಿ, ಅರಿಶಿನ ಪುಡಿ ಮತ್ತು ಉಪ್ಪನ್ನು ಹಾಕಿ ಮಿಶ್ರಣ ಮಾಡಿ.
* ಬಳಿಕ ಬದನೆ ಹೋಳುಗಳಿಗೆ ಮೆಣಸಿನ ಪುಡಿ ಮಿಶ್ರಣವನ್ನು ಚೆನ್ನಾಗಿ ಕೋಟ್ ಆಗುವಂತೆ ಲೇಪಿಸಿಕೊಳ್ಳಿ.
* ಈಗ ಪ್ಯಾನ್ನಲ್ಲಿ ಎಣ್ಣೆ ಸುರಿದು, ಬಿಸಿಯಾದ ಬಳಿಕ ಬದನೆ ಹೋಳುಗಳನ್ನು ಅದರಲ್ಲಿ ಇಟ್ಟು ಕಡಿಮೆ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ.
* ಬದನೆ ಹೋಳುಗಳ ಎರಡೂ ಬದಿ ಚೆನ್ನಾಗಿ ಬೇಯುವವರೆ ಫ್ರೈ ಮಾಡಿಕೊಳ್ಳಿ. ಬಳಿಕ ಅದನ್ನು ಪ್ಯಾನ್ನಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಇದೀಗ ರುಚಿಕರ ಬದನೆ ಫ್ರೈ ತಯಾರಾಗಿದ್ದು, ಊಟದೊಂದಿಗೆ ಅಥವಾ ಹಾಗೆಯೇ ಸವಿಯಿರಿ.