ಪತಿ-ಪತ್ನಿ ಸಂಬಂಧದಲ್ಲಿ ಲೈಂಗಿಕತೆಯು ಒಂದು ಪ್ರಮುಖ ಸ್ತಂಭವಾಗಿದೆ. ಇಬ್ಬರ ನಡುವೆ ಉತ್ತಮ ಕೆಮೆಸ್ಟ್ರೀ ಇದ್ದರಷ್ಟೇ ಲೈಂಗಿಕ ಜೀವನ ಉತ್ತಮವಾಗಬಲ್ಲದು.
ಲೈಂಗಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಮುನ್ನ, ಭಾಗಿಯಾದ ನಂತರ ಮಹಿಳೆಯರಲ್ಲಿ ಮತ್ತು ಪುರುಷರಲ್ಲಿ ಕೆಲವು ಹಾರ್ಮೋನುಗಳ ಬದಲಾವಣೆಯಿಂದ ದಂಪತಿಗಳಲ್ಲಿ ನಾನಾ ರೀತಿಯ ಬದಲಾವಣೆಗಳು ಕಂಡುಬರುತ್ತವೆ.
ಇನ್ನೂ ನನ್ನಿಂದ ಪತ್ನಿಗೆ ಸಂಭೋಗ ಸುಖ ಸಿಕ್ಕಿಲ್ಲ ಎಂಬುದು ಪುರುಷರಿಗೆ ಸಾಮಾನ್ಯ ಸಂಗತಿಯಾಗಿರುವುದಿಲ್ಲ. ಇದನ್ನು ಪುರುಷರು ಗಂಭೀರವಾಗಿ ತೆಗೆದುಕೊಳ್ತಾರೆ. ಇದು ಅವರ ಸಂಬಂಧದ ಮೇಲೂ ಪರಿಣಾಮ ಬೀರುತ್ತದೆ.
ಹಾಗಾಗಿಯೇ ಮಹಿಳೆಯರು ಪರಾಕಾಷ್ಠೆ ವಿಷ್ಯದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಪತ್ನಿಗೆ ಪರಾಕಾಷ್ಠೆ ಸಿಕ್ಕಿದೆಯೇ ಇಲ್ಲವೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ಇದಕ್ಕೆ ಕೆಲ ದಾರಿಗಳಿವೆ. ಇಂದು ನಿಮ್ಮ ಸಂಗಾತಿ, ಸಂಭೋಗದಲ್ಲಿ ಪರಾಕಾಷ್ಠೆ ತಲುಪಿದ್ದಾರೆಯೇ ಎಂಬುದನ್ನು ಹೇಗೆ ಪತ್ತೆ ಮಾಡ್ಬೇಕೆಂಬುದನ್ನು ನಾವು ಹೇಳ್ತೆವೆ.
ಸಂಭೋಗದ ನಂತ್ರ ಬದಲಾಗುವ ವರ್ತನೆ : ಪರಾಕಾಷ್ಠೆ ತಲುಪಿದ ಸಂದರ್ಭದಲ್ಲಿ ಹಾಗೂ ಪರಾಕಾಷ್ಠೆ ಸಿಗದ ಸಮಯದಲ್ಲಿ ಮಹಿಳೆಯ ವರ್ತನೆ ಭಿನ್ನವಾಗಿರುತ್ತದೆ. ಅದನ್ನು ನೀವು ಸೂಕ್ಷ್ಮವಾಗಿ ಗಮನಿಸಬೇಕು. ಪರಾಕಾಷ್ಠೆ ಪಡೆದ ಮಹಿಳೆ ಹೆಚ್ಚು ದಣಿಯುತ್ತಾಳೆ.
ಯೋನಿ ಕಿರಿದಾಗುತ್ತದೆ : ನಿಮ್ಮ ಸಂಗಾತಿ, ನೈಟ್ ಲೈಫಲ್ಲಿ ಉತ್ತುಂಗಕ್ಕೆ ತಲುಪಿದ್ದಾರೆಯೇ ಎಂಬುದನ್ನು ಖಾಸಗಿ ಅಂಗವೂ ಹೇಳುತ್ತದೆ. ಪರಾಕಾಷ್ಠೆ ನಂತ್ರ ಯೋನಿ ಕಿರಿದಾಗುತ್ತದೆ. ಉತ್ತೇಜನಗೊಂಡಾಗ ಪುರುಷರ ಖಾಸಗಿ ಅಂಗ ಗಟ್ಟಿಯಾದಂತೆ, ಪರಾಕಾಷ್ಠೆ ತಲುಪಿದ ಮಹಿಳೆಯ ಯೋನಿ ಕಿರಿದಾಗುತ್ತದೆ.
ಏಕಾಗ್ರತೆ ಸಾಧ್ಯವಾಗುವುದಿಲ್ಲ : ನಿಮ್ಮ ಸಂಗಾತಿಯನ್ನು ನೋಡಿಯೇ ನೀವು ಸಂಭೋಗ ಸುಖ ಪ್ರಾಪ್ತಿಯಾಗಿದೆಯೇ ಎಂಬುದನ್ನು ಪತ್ತೆ ಮಾಡಬಹುದು. ಅವರಿಗೆ ಏಕಾಗ್ರತೆ ಸಾಧ್ಯವಾಗುವುದಿಲ್ಲ. ಮನಸ್ಸನ್ನು ಒಂದು ಕಡೆ ಕೇಂದ್ರೀಕರಿಸಲು ವಿಫಲವಾಗ್ತಾರೆ. ಕಣ್ಣುಗಳನ್ನು ಅವರು ತೆರೆಯಲು ಇಷ್ಟಪಡುವುದಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ನಿಮ್ಮನ್ನು ನೋಡಲು ಬಯಸುವುದಿಲ್ಲ.
ದೇಹವು ಹೆಚ್ಚು ಸೂಕ್ಷ್ಮವಾಗುತ್ತದೆ : ಸಂಗಾತಿ ದೇಹವು ಹೆಚ್ಚು ಸೂಕ್ಷ್ಮವಾಗುವುದನ್ನು ನೀವು ಗಮನಿಸಬಹುದು. ಪರಾಕಾಷ್ಠೆಯ ನಂತರವೂ ನೀವು ಲೈಂಗಿಕ ಕ್ರಿಯೆ ಮುಂದುವರೆಸಿದಾಗ ಅವಳು ಹೆಚ್ಚು ಪ್ರತಿಕ್ರಿಯಿಸುತ್ತಾಳೆ. ಪ್ರತಿಯೊಂದರಲ್ಲೂ ಆಕೆ ಸುಖ ಅನುಭವಿಸುತ್ತಾಳೆ. ಇದು ಅವಳ ಸಂತೋಷವನ್ನು ಹೆಚ್ಚಿಸುತ್ತದೆ. ಆದರೆ ಈ ಸಮಯದಲ್ಲಿ ನೋವಾಗುವ ಸಾಧ್ಯತೆಯೂ ಇದೆ.
ಬದಲಾಗುವ ಮೂಡ್ : ಪರಾಕಾಷ್ಠೆ ಸಿಗದಿರುವಾಗ ತೃಪ್ತಿ ಹೊಂದಲು ಸಾಧ್ಯವಿಲ್ಲ. ಆಗ ಪತ್ನಿ ನಿಮ್ಮ ಬಳಿಗೆ ಬರದೆ ಇರಬಹುದು. ಅನವಶ್ಯಕ ಜಗಳ ಮಾಡಬಹುದು. ಆದ್ರೆ ಪರಾಕಾಷ್ಠೆ ಪ್ರಾಪ್ತಿಯಾದಾಗ ಮೂಡ್ ಬದಲಾಗಿರುತ್ತದೆ. ನಿಮಗೆ ಮತ್ತಷ್ಟು ಆತ್ಮೀಯರಾಗುತ್ತಾರೆ. ಇಬ್ಬರ ಮಧ್ಯೆ ಹೆಚ್ಚಿನ ಸಂತೋಷ ಕಾಣಬಹುದು.