ಸೌಂದರ್ಯದ ಹೊಳಪನ್ನು ಹೆಚ್ಚಿಸಲು ಆಲೂಗಡ್ಡೆ ರಾಮಭಾಣ ಎಂದು ಹೇಳುತ್ತಾರೆ. ಸ್ಕಿನ್ ಮೇಲಿರುವ ಕಲೆ ಹಾಗೂ ಡಾರ್ಕ್ ಸರ್ಕಲ್ ತೆಗೆಯಲು ಮಾತ್ರ ಆಲೂಗಡ್ಡೆ ಉಪಯೋಗಿಸಬಹುದು ಎಂದು ಸಾಕಷ್ಟು ಜನ ಅಂದುಕೊಂಡಿದ್ದಾರೆ. ಆದರೆ ಸ್ಕಿನ್ ಹೊಳಪನ್ನು ಹೆಚ್ಚಿಸಲು ಆಲೂ ವಿವಿಧ ರೀತಿಯಲ್ಲಿ ಉಪಯೋಗಿಸಬಹುದು.
- ಆಲೂ ಹಾಗೂ ಮೊಸರಿನ ಫೇಸ್ಪ್ಯಾಕ್:ಒಂದು ದೊಡ್ಡ ಚಮಚದಲ್ಲಿ ಅಲೂಗಡ್ಡೆಯ ಪೇಸ್ಟ್ ತೆಗೆದುಕೊಳ್ಳಬೇಕು. ನಂತರ ಅದರಲ್ಲಿ ಒಂದು ದೊಡ್ಡ ಚಮಚದಲ್ಲಿ ಮೊಸರು ತೆಗೆದುಕೊಂಡು ಅದನ್ನು ಮಿಕ್ಸ್ ಮಾಡಬೇಕು. ಮಿಕ್ಸ್ ಮಾಡಿದ ಇದನ್ನು ಪೇಸ್ಟ್ ಮಾಡಿ ಅರ್ಧ ಗಂಟೆ ಇಡಬೇಕು. ಬಳಿಕ ನಿಮ್ಮ ಮುಖಕ್ಕೆ ಈ ಪೇಸ್ಟ್ ಹಚ್ಚಿಕೊಳ್ಳಿ. ಈ ಪೇಸ್ಟ್ ಹಚ್ಚಿಕೊಳ್ಳುವುದರಿಂದ ನಿಮ್ಮ ಸ್ಕಿನ್ ರಿಫ್ರೇಶ್ ಮಾಡಿ, ಸ್ಕಿನ್ ಟೈಟ್ ಆಗಿ ಇರಿಸಲು ಸಹಾಯ ಮಾಡುತ್ತದೆ.
- ಆಲೂ ಹಾಗೂ ಅರಿಶಿಣ ಫೇಸ್ಪ್ಯಾಕ್:ಆಲೂ ಹಾಗೂ ಹಳದಿಯ ಫೇಸ್ಪ್ಯಾಕ್ ನಿಮ್ಮ ತ್ವಚೆಯ ಬಣ್ಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಆಲೂವನ್ನು ಚಿಕ್ಕದಾಗಿ ಕಟ್ ಮಾಡಿ ಅದಕ್ಕೆ ಒಂದು ಚಿಟಿಕೆ ಹಳದಿ ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಬಿಡಬೇಕು. ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆ ಒಂದು ಬಾರಿ ಈ ರೀತಿಯ ಫೇಸ್ಪ್ಯಾಕ್ ಹಾಕಬಹುದು.
- ಆಲೂ ಹಾಗೂ ಮೊಟ್ಟೆಯ ಫೇಸ್ಪ್ಯಾಕ್:ಆಲೂ ಹಾಗೂ ಮೊಟ್ಟೆಯ ಫೇಸ್ಪ್ಯಾಕ್ ತಯಾರಿಸಲು ಅರ್ಧ ಆಲೂವನ್ನು ಚಿಕ್ಕದಾಗಿ ಕಟ್ ಮಾಡಿ ಅದರ ರಸವನ್ನು ತೆಗೆಯಬೇಕು. ನಂತರ ಮೊಟ್ಟೆಯ ಬಿಳಿ ಭಾಗವನ್ನು ಅದರಲ್ಲಿ ಮಿಕ್ಸ್ ಮಾಡಿ. ತಯಾರಾದ ಮಿಶ್ರಣವನ್ನು ನಿಮ್ಮ ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿ 20 ನಿಮಿಷ ಬಿಡಬೇಕು. ನಂತರ ತಣ್ಣೀರಿನಲ್ಲಿ ನಿಮ್ಮ ಮುಖವನ್ನು ತೊಳೆಯಿರಿ. ಈ ರೀತಿ ಮಾಡುವುದರಿಂದ ನಿಮಗೆ ಬೇಗ ವ್ಯತ್ಯಾಸ ತಿಳಿಯುತ್ತದೆ. ಆಲೂ ಹಾಗೂ ಮೊಟ್ಟೆಯ ಫೇಸ್ಪ್ಯಾಕ್ ಹಾಕಿಕೊಳ್ಳುವುದರಿಂದ ನಿಮ್ಮ ತ್ವಚೆ ಹೊಳೆಯುತ್ತದೆ. ಅಲ್ಲದೇ ನಿಮ್ಮ ಮುಖದ ಪೋರ್ಸ್ ಅನ್ನು ಟೈಟ್ ಮಾಡಲು ಸಹಾಯ ಮಾಡುತ್ತದೆ.
- ಆಲೂ ಹಾಗೂ ನಿಂಬೆಯ ಫೇಸ್ಪ್ಯಾಕ್:ಆಲೂಗಡ್ಡೆಯ ಪೇಸ್ಟ್ ಮಾಡಿಕೊಳ್ಳಿ. ನಂತರ ಅದರಲ್ಲಿ ಒಂದು ಚಮಚ ನಿಂಬೆಯ ರಸವನ್ನು ಸೇರಿಸಿ ಮಿಕ್ಸ್ ಮಾಡಿದ ನಂತರ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷದ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಇದು ನ್ಯಾಚೂರಲ್ ಫೇಶಿಯಲ್ ಬ್ಲೀಚ್ನ ಕೆಲಸ ಮಾಡುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಡಾರ್ಕ್ ಸ್ಕೀನ್ ಕಾಂಪ್ಲೇಶನ್ನನ್ನು ದೂರ ಮಾಡಲು ಸಹಾಯ ಮಾಡುತ್ತದೆ.
- ಆಲೂ, ನಿಂಬೆ ಹಾಗೂ ಮುಲ್ತಾನಿ ಮಿಟ್ಟಿಯ ಫೇಸ್ಪ್ಯಾಕ್:ಒಂದು ದೊಡ್ಡ ಚಮಚದಲ್ಲಿ ಆಲೂವಿನ ರಸದಲ್ಲಿ ಎರಡು ಚಮಚ ನಿಂಬೆಯ ರಸ ಹಾಗೂ ಎರಡು ಚಮಚ ಮುಲ್ತಾನಿ ಮಿಟ್ಟಿಯನ್ನು ಹಾಕಿ ಮಿಕ್ಸ್ ಮಡಿ ಪ್ಯಾಕ್ ತಯಾರಿಸಿ. ನಂತರ ಆ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಾಕಿ 10 ರಿಂದ 15 ನಿಮಿಷ ಬಿಡಿ. ಬಳಿಕ ತಣ್ಣೀರಿನಲ್ಲಿ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ಈ ರೀತಿ ಮಾಡುವುದರಿಂದ ನಿಮ್ಮ ಮುಖದ ಮೇಲಿರುವ ಕಲೆಗಳು ಹೋಗಿ ನಿಮ್ಮ ಸ್ಕಿನ್ ಹೊಳೆಯುವಂತೆ ಮಾಡುತ್ತದೆ.
ವಿಶೇಷ ಸೂಚನೆ: ಆಲೂ ಗಡ್ಡೆಯನ್ನು ಯಾವುದೇ ಕಾರಣಕ್ಕೂ ಬೇಯಿಸಬೇಡಿ. ಅಲ್ಲದೇ ಪೇಸ್ಟ್ ಮಾಡುವಾಗ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆಯಲೇ ಬೇಕು. ಫೇಸ್ಪ್ಯಾಕ್ ಹಾಕಿ ತೊಳೆಯುವಾಗ ತಣ್ಣೀರಿನಲ್ಲೇ ಮುಖವನ್ನು ತೊಳೆಯಬೇಕು. ಅಲ್ಲದೇ ಮನೆಯಲ್ಲೇ ಸಿದ್ಧಪಡಿಸಿದ ಅರಿಶಿಣ ಬಳಸಿದರೆ ಉತ್ತಮ.