ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆಯಲು ನಾವು ನಮ್ಮ ಆಹಾರ ಪದ್ಧತಿಯಲ್ಲಿ ಬೇರೆ ಬೇರೆ ರೀತಿಯ ಆಹಾರಗಳನ್ನು ಇಷ್ಟಪಟ್ಟು ಸೇವಿಸಬೇಕಾಗುತ್ತದೆ. ಈ ಎಲ್ಲಾ ಆಹಾರದಲ್ಲಿರುವ ಪೌಷ್ಟಿಕ ಸತ್ವಗಳು ಆರೋಗ್ಯದ ಮೇಲೆ ತನ್ನದೇ ಆದ ಪರಿಣಾಮಗಳನ್ನು ಬೀರುತ್ತವೆ. ಸೊಪ್ಪು, ತರಕಾರಿ, ಧಾನ್ಯ, ಮಾಂಸ ಹಾಗು ಡೈರಿ ಪದಾರ್ಥ ಎಲ್ಲವೂ ದೇಹಕ್ಕೆ ಬೇಕಾದ ಅಗತ್ಯ ಆಹಾರಗಳು.
ಅದರಲ್ಲೂ ಡೈರಿ ಉತ್ಪನ್ನಗಳನ್ನು ನೋಡುವುದಾದರೆ ಅದರಲ್ಲಿ ಮುಖ್ಯವಾದದ್ದು ಹಾಲು. ಸಾಮಾನ್ಯವಾಗಿ ಚಿಕ್ಕ ವಯಸ್ಸಿನಿಂದಲೂ ಎಲ್ಲರೂ ಹಾಲನ್ನು ಕುಡಿಯುತ್ತಾರೆ. ಆದರೆ ಹಾಲಿಗೆ ನಮ್ಮ ದೇಹದ ಶಕ್ತಿ ಮತ್ತು ಚೈತನ್ಯವನ್ನು ಹೆಚ್ಚು ಮಾಡುವ ಸಾಮರ್ಥ್ಯವಿದೆ.
ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಹಾಗಾದರೆ ಪ್ರತಿದಿನ ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲು ಕುಡಿಯುವುದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಮಲಗುವ ಮುನ್ನ ಹಾಲು ಕುಡಿಯುವುದರಿಂದ ರಾತ್ರಿಯಲ್ಲಿ ಹೆಚ್ಚು ಶಾಂತವಾದ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ಕಂಡುಹಿಡಿದಿದೆ. ಆದರೆ, ಇದು ಏಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅನೇಕ ಆರೋಗ್ಯ ತಜ್ಞರು ಹಾಲಿನಲ್ಲಿ ನಿದ್ರೆಯನ್ನು ಉತ್ತೇಜಿಸುವ ರಾಸಾಯನಿಕ ಸಂಯುಕ್ತಗಳಿವೆ ಎಂದು ವರದಿ ಮಾಡುತ್ತಾರೆ.
ಜೀರ್ಣಕ್ರಿಯೆ:
ಹಾಲು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಬಹಳಷ್ಟು ಸಹಾಯ ಮಾಡುತ್ತದೆ. ಅಲ್ಲದೆ, ಇದು ಬೆಳಗಿನ ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ. ರಾತ್ರಿ ಹಾಲು ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
ಸಂತಾನೋತ್ಪತ್ತಿ:
ರಾತ್ರಿ ಹಾಲು ಕುಡಿಯುವುದರಿಂದ ಶುಕ್ರ ಧಾತು ಬಲಗೊಳ್ಳುತ್ತದೆ. ಇದು ನಿಮ್ಮ ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಗರ್ಭಾಶಯಕ್ಕೆ ಸರಿಯಾದ ಪೋಷಣೆಯನ್ನು ಒದಗಿಸುತ್ತದೆ ಮತ್ತು ನಿಮ್ಮ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ