ದಿನನಿತ್ಯದ ಆರೋಗ್ಯಯುತ ಆಹಾರದೊಂದಿಗೆ ಬ್ಲ್ಯಾಕ್ ಟೀ ಯನ್ನು ಕುಡಿಯುವು ದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಈ ಟೀಯಲ್ಲಿರುವ ಆಕ್ಸಿಡೆಶನ್ ನ ಅಧಿಕ ಪ್ರಮಾಣ ಓದನು ಫ್ಲೇವರ್ ಅನ್ನು ಹೆಚ್ಚಿಸುತ್ತದೆ. ಇತರ ಟೀಗಳಿಗೆ ಹೋಲಿಸಿದರೆ ಬ್ಲ್ಯಾಕ್ ಟೀಯಲ್ಲಿರುವ ಫ್ಲೇವರ್ ಹೆಚ್ಚು ಸಮಯ ಉಳಿಯುತ್ತದೆ.ಬ್ಲ್ಯಾಕ್ ಟೀ ಯಿಂದಾಗುವ ಅನೇಕ ಆರೋಗ್ಯಯುತ ಅನುಕೂಲಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ.
ಜೀರ್ಣಕ್ರಿಯೆಗೆ ಸಹಾಯಕ
ಬ್ಲ್ಯಾಕ್ ಟೀಯಲ್ಲಿರುವ ಟೆನಿನ್ ಜೀರ್ಣಕ್ರಿಯೆಗೆ ಸಹಾಯಕ. ಗ್ಯಾಸ್ ಮುಂತಾದ ಸಣ್ಣ ಪುಟ್ಟ ತೊಂದರೆಗಳನ್ನು ಕೂಡ ನಿವಾರಿಸುವ ಅಂಶ ಇದರಲ್ಲಿದೆ. ದೇಹ ನಿರ್ಜಲೀಕರಣಗೊಳ್ಳುವುದನ್ನು ಕೂಡ ಇದು ತಡೆಯುವ ಗುಣ ಹೊಂದಿದೆ. ಹೊಟ್ಟೆ ತೊಳೆಸುವಂತೆ ಮಾಡುವ ಕರುಳಿನ ಉರಿಯೂತವನ್ನು ಕೂಡ ಬ್ಲ್ಯಾಕ್ ಟೀಯಲ್ಲಿರುವ ಪೋಲಿಪೆನಾಲ್ಸ್ ಅಂಶದಿಂದ ಕಡಿಮೆಮಾಡಿಕೊಳ್ಳಬಹುದು.
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಟ್ರೈಗ್ಲಿಸೆರೈಡ್ ಅಂಶವನ್ನು ಕಡಿಮೆ ಮಾಡುವ ಗುಣ ಬ್ಲ್ಯಾಕ್ ಟೀಯಲ್ಲಿದೆ. ಹೃದಯ ರೋಗಗಳನ್ನು ನೀಡಬಹುದಾದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆಯುತ್ತದೆ. ಅಪಧಮನಿಗಳ ಕಾರ್ಯವನ್ನು ಕೂಡ ಸುಲಭವಾಗಿಸುತ್ತದೆ.
ಚರ್ಮದ ಉರಿಯೂತ ಹೋಗುತ್ತದೆ
ಬ್ಲ್ಯಾಕ್ ಟೀಯನ್ನ ಸೇವನೆ ಮಾಡೋದ್ರಿಂದ ಚರ್ಮದ ಉರಿಯೂತವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಚರ್ಮವು ಉರಿಯೋದು ಸರ್ವೇ ಸಾಮಾನ್ಯ ಜೊತೆಗೆ ಚರ್ಮ ಕೆಲವೊಮ್ಮೆ ಊದುಕೊಳ್ಳುತ್ತಿದ್ದರೆ ಅಂತವರು ಈ ಬ್ಲ್ಯಾಕ್ ಟೀಯನ್ನ ಕುಡಿಯೋದ್ರಿಂದ ಊತವನ್ನ ಕಡಿಮೆ ಮಾಡಲು ಸಹಕಾರಿಯಾಗಿದೆ.
ಸುಕ್ಕುಗಳ ಸಮಸ್ಯೆಯನ್ನು ನಿವಾರಿಸುತ್ತದೆ
ಬ್ಲ್ಯಾಕ್ ಟೀ ಸೇವನೆ ಮಾಡೊದ್ರಿಂದ ಚರ್ಮಕ್ಕೆ ಸಂಬಂಧ ಪಟ್ಟಂತೆ ಅನೇಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಜೊತೆಗೆ ಈ ಬ್ಲ್ಯಾಕ್ ಟೀ ಸೇವನೆ ಮಾಡೋದ್ರಿಂದ ನಿಮ್ಮ ಚರ್ಮದ ಸುಕ್ಕುಗಳನ್ನ ಹೋಗಲಾಡಿಸಬಹುದು. ಬ್ಲ್ಯಾಕ್ ಟೀಯು ಪಾಲಿಫಿನಾಲ್ಗಳನ್ನು ಹೊಂದಿರುವ ಕಾರಣ ನಿಮ್ಮ ಏಜಿಂಗ್ ಮಾಕ್ಸ್ಗಳನ್ನ ಕಡಿಮೆ ಮಾಡಬಹುದು.
ಚರ್ಮದ ತುರಿಗೆ & ಅಲರ್ಜಿ ತೊಡೆದುಹಾಕಲು
ಕೆಲವರಿಗೆ ಚರ್ಮದ ಸಮಸ್ಯೆ ಕಾಡುತ್ತಾ ಇರುತ್ತೆ. ಧೂಳಿನಲ್ಲಿ ಓಡಾಡೋದ್ರಿಂದ ಚರ್ಮದ ಮೇಲೆ ದೂಳು ಕೂರೋದ್ರಿಂದ ಚರ್ಮ ತುರಿಯೋಕೆ ಶುರು ಮಾಡುತ್ತೆ ಇನ್ನು ಕೆಲವರಿಗೆ ಬೇಸಿಗೆಯಲ್ಲಿ ಬೆವರಿನಿಂದ ಚರ್ಮದ ಅಲರ್ಜಿ ಹೆಚ್ಚಾಗಿ ಕಾಡುತ್ತೆ ಅಂತವರು ಬ್ಯಾಕ್ ಟೀ ಸೇವನೆ ಮಾಡೋದ್ರಿಂದ ಚರ್ಮದ ಸಮಸ್ಯೆಯನ್ನ ಕಡಿಮೆ ಮಾಡಿಕೊಳ್ಳಬಹುದು. ಇದು ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಕೆಲಸ ಮಾಡುತ್ತದೆ, ಆದ್ದರಿಂದ ಬ್ಲ್ಯಾಕ್ ಟೀ ಸೇವನೆಯಿಂದ ಹಲವಾರು ರೀತಿಯ ಸೋಂಕುಗಳನ್ನು ನಿವಾರಿಸಬಹುದು.
ಕ್ಯಾನ್ಸರ್ ತಡೆಯುತ್ತದೆ
ಬ್ಲ್ಯಾಕ್ ಟೀಯಲ್ಲಿ ಕಂಡುಬರುವ ಪೋಲಿಪೆನಾಲ್ ಎಂಬ ಉತ್ಕರ್ಷಣವು ಕೊಲೊರೆಕ್ಟಲ್, ಪ್ರಾಸ್ಟೇಟ್, ಅಂಡಾಶಯ, ಶ್ವಾಸಕೋಶ ಮತ್ತು ಮೂತ್ರಕೋಶದ ಕ್ಯಾನ್ಸರ್ ಬರದಂತೆ ತಡೆಯುತ್ತದೆ.ಬ್ಲ್ಯಾಕ್ ಟೀ ಸ್ತನ ಮತ್ತು ಕರುಳು ಕ್ಯಾನ್ಸರ್ ಅನ್ನು ಕೂಡ ತಡೆಯಬಲ್ಲದು. ಟೀಯಲ್ಲಿ ಕಂಡು ಬರುವ ಟಿ ಎಫ್ 2 ಎಂಬ ಸಂಯುಕ್ತವು ಕ್ಯಾನ್ಸರ್ ಕಣಗಳನ್ನು ಕೊಳ್ಳುತ್ತದೆ. ಜೊತೆಗೆ ಸಿಗರೇಟ್ ಮತ್ತು ತಂಬಾಕನ್ನು ಬಳಸುವವರಿಗೆ ಸಂಭವಿಸುವ ಬಾಯಿ ಕ್ಯಾನ್ಸರ್ ಅನ್ನು ಕೂಡ ತಡೆಗಟ್ಟುತ್ತದೆ. ಬ್ಲ್ಯಾಕ್ ಟೀ ಕುಡಿಯುವದರಿಂದ ಗಡ್ಡೆಗಳಾಗುವುದನ್ನು ತಡೆಯಬಹುದು.
ರೇಡಿಕಲ್ಸ್ ಕಡಿಮೆ ಮಾಡುತ್ತದೆ
ರೆಡಿಕಲ್ಸ್ ದೇಹಕ್ಕೆ ಕ್ಯಾನ್ಸರ್,ಎಥೆರೋಜೆನಿಕ್,ರಕ್ತ ಹೆಪ್ಪುಗಟ್ಟುವಿಕೆ ಹೀಗೆ ಸಾಕಷ್ಟು ಸಮಸ್ಯೆ ತರುತ್ತದೆ. ಅನಾರೋಗ್ಯಕರ ಆಹಾರಗಳ ಸೇವನೆ ಹೆಚ್ಚಿದಾಗ ರಾಡಿಕಲ್ಸ್ ಕೂಡ ಹೆಚ್ಚುತ್ತದೆ. ಬ್ಲ್ಯಾಕ್ ಟೀ ಕುಡಿಯುವುದರಿಂದ ಇದನ್ನು ಸಂಪೂರ್ಣವಾಗಿ ತಡೆಯಬಹುದು. ಈ ರೀತಿಯ ರೋಗಗಳನ್ನು ತಡೆಯಲು ಬ್ಲ್ಯಾಕ್ ಟೀ ಉತ್ತಮವಾದುದು.
ಇಮ್ಯುನಿಟಿ ಹೆಚ್ಚಿಸುತ್ತದೆ
ವೈರಸ್ ಮತ್ತು ಬ್ಯಾಕ್ಟೀರಿಯದ ವಿರುದ್ಧ ಹೋರಾಡಲು ಇಮ್ಯೂನಿಟಿ ಹೆಚ್ಚಿಸಿಕೊಳ್ಳುವ ಅಗತ್ಯವಿರುತ್ತದೆ. ಬ್ಲ್ಯಾಕ್ ಟೀಯಲ್ಲಿರುವ ಟೆನಿನ್ ಅಂಶ ಹೆಪಟೈಸಿಸ್,ಫ್ಲೂ, ಕೋಲ್ಡ್ ಮತ್ತಿತರ ಬ್ಯಾಕ್ಟೀರಿಯ ಇರುದ್ಧ ಹೋರಾಡುವ ಗುಣವನ್ನು ಹೊಂದಿದೆ.ಗಡ್ಡೆಗಳನ್ನು ತಡೆಗಟ್ಟಲು ಬ್ಲ್ಯಾಕ್ ಟೀಯಲ್ಲಿರುವ ಕ್ಯಟೆಚಿನ್ ಎಂಬ ಟೆನಿನ್ ಅಂಶ ಸಹಾಯಕ.ಬ್ಲ್ಯಾಕ್ ಟೀಯಲ್ಲಿರುವ ಅಲ್ಕಿಲಾಮಿನ್ ಅಂಶವು ಇಮ್ಯೂನಿಟಿ ಹೆಚ್ಚಿಸುತ್ತದೆ.ಉರಿಯೂತ ಮತ್ತು ರೋಗಗಳನ್ನು ತಡೆಯಲು ದಿನದಲ್ಲಿ 3-4 ಲೋಟ ಬ್ಲ್ಯಾಕ್ ಟೀ ಸೇವಿಸಬೇಕು.