ಒಣದ್ರಾಕ್ಷಿಯಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಹಾಗೂ ಹೆಚ್ಚುವರಿ ಆಹಾರದ ರೂಪದಲ್ಲಿ ಅಳವಡಿಸಿಕೊಳ್ಳಲು ಅತ್ಯುತ್ತಮ ಆಯ್ಕೆಯಾಗಿದೆ. ಸತತ ಕೆಲವಾರು ದಿನಗಳವರೆಗೆ ಸೇವಿಸುವ ಮೂಲಕ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ಇಲ್ಲವಾಗಿ ಹಸಿವು ಹೆಚ್ಚುತ್ತದೆ ಹಾಗೂ ದೇಹಕ್ಕೆ ಹೆಚ್ಚು ಹೆಚ್ಚಿನ ಶಕ್ತಿ ದೊರಕುತ್ತದೆ.
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ ಒಣದ್ರಾಕ್ಷಿ ನೆನೆಸಿಟ್ಟ ನೀರನ್ನು ಸೇವಿಸುವು ದರಿಂದ ಹೃದಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನವಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ಈ ವಿಧಾನದಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ದೇಹದಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ಸಹಾ ಆರೋಗ್ಯಕರ ಮಟ್ಟದಲ್ಲಿರಿಸುತ್ತದೆ. ವಾಸ್ತವದಲ್ಲಿ ಒಣದ್ರಾಕ್ಷಿಯನ್ನು ಹಾಗೇ ಸೇವಿಸುದುದಕ್ಕಿಂತಲೂ ನೆನೆಸಿಟ್ಟ ನೀರಿನ ಸೇವನೆಯಿಂದ ದೇಹಕ್ಕೆ ಲಭಿಸುವ ಸಕ್ಕರೆಯ ಶೇಖಡಾವಾರು ಪ್ರಮಾಣ ಕಡಿಮೆಯಾಗಿ ಉಳಿದ ಪೋಷಕಾಂಶಗಳು ಹೆಚ್ಚಾಗಿ ದೊರಕುವುದೇ ಈ ನೀರಿನ ಮಹತ್ವವಾಗಿದೆ.
ಒಣದ್ರಾಕ್ಷಿ ಪ್ರಕೃತಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ. ಮೂಲತಃ ದ್ರಾಕ್ಷಿಯನ್ನು ಬಿಸಿಲಿನಲ್ಲಿ ಒಣಗಿಸಿದ ಬಳಿಕ ಇದರಲ್ಲಿರುವ ಬಯೋಫ್ಲೇವನಾಯ್ಡುಗಳು ಹೆಚ್ಚು ಸಾಂದ್ರಗೊಳ್ಳುತ್ತವೆ. ಈ ಸಾಂದ್ರತೆ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ದೇಹವನ್ನು ವಿವಿಧ ಬಗೆಯ ಕ್ಯಾನ್ಸರ್ ಕಾರಕ ಫ್ರೀ ರ್ಯಾಡಿಕಲ್ ಎಂಬ ಕಣಗಳ ಧಾಳಿಯಿಂದ ರಕ್ಷಿಸುತ್ತದೆ.
ಒಣದ್ರಾಕ್ಷಿ ಒಣದ್ರಾಕ್ಷಿ ನೆನೆಸಿಟ್ಟ ನೀರಿನ ಸೇವನೆಯಿಂದ ರಕ್ತ ಶುದ್ದೀಕರಣಗೊಳ್ಳುವ ಜೊತೆಗೇ ಯಕೃತ್ ನ ಕಾರ್ಯಕ್ಷಮತೆಯೂ ಉತ್ತಮಗೊಳ್ಳುವ ಮೂಲಕ ಜೀರ್ಣಶಕ್ತಿಯೂ ಉತ್ತಮಗೊಳ್ಳುತ್ತದೆ. ಈ ನೀರು ಜೀರ್ಣರಸಗಳನ್ನು ಪ್ರತ್ಯೇಕಿಸಿ ಆಹಾರ ಸುಲಭವಾಗಿ ಜೀರ್ಣವಾಗುವಂತೆ ಹಾಗೂ ಪೋಷಕಾಂಶಗಳು ರಕ್ತಕ್ಕೆ ಲಭಿಸುವಂತೆ ಮಾಡುತ್ತದೆ. ಇದರ ಪರಿಣಾಮವನ್ನು ಈ ನೀರನ್ನು ಸೇವಿಸತೊಡಗಿದ ಎರಡು ದಿನಗಳಲ್ಲಿಯೇ ಕಾಣಬಹುದು.
ರಕ್ತಪರಿಚಲನೆಯ ಶುದ್ಧೀಕರಣದ ಹೊರತಾಗಿ, ಒಣದ್ರಾಕ್ಷಿ ನೆನೆಸಿಟ್ಟ ನೀರಿನ ಸೇವನೆಯಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ದೇಹದಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ ಅಲ್ಲದೇ ಕಲ್ಮಶರಹಿತ ಕರುಳು ಹಾಗೂ ಉತ್ತಮಗೊಂಡ ಜೀರ್ಣಕ್ರಿಯೆ ಲಭಿಸುವ ಜೊತೆಗೇ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಿಸಲೂ ಸಹಾಯ ಮಾಡುತ್ತದೆ. ಇವೆಲ್ಲವೂ ಆರೋಗ್ಯಕರ ಹೃದಯಕ್ಕೆ ಪೂರಕ ಅಂಶಗಳಾಗಿವೆ.