ಎಲ್ಲರ ಮನೆಯ ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಆಹಾರ ಪದಾರ್ಥವೆಂದರೆ ಅದು ಈರುಳ್ಳಿ. ಕೇವಲ ಅಡುಗೆಯ ಸ್ವಾದವನ್ನು ಹೆಚ್ಚಿಸಲು ಉಪಯೋಗಿಸುವ ಈರುಳ್ಳಿ ಪರೋಕ್ಷವಾಗಿ ಜನರ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಪ್ರಯೋಜನಕಾರಿ ಎನಿಸಿಕೊಂಡಿದೆ.
ಮುಖ್ಯವಾಗಿ ಕೂದಲು ಮತ್ತು ಚರ್ಮದ ಹಲವಾರು ಸಮಸ್ಯೆಗಳಿಗೆ ಆನಿಯನ್ ಆಯಿಲ್ ಉಪಯೋಗ ವಾಗುತ್ತದೆ. ಈರುಳ್ಳಿ ಎಣ್ಣೆಯಲ್ಲಿ ಸಲ್ಫರ್ ಅಂಶ ಹೆಚ್ಚಾಗಿದ್ದು ವಿಟಮಿನ್ ‘ ಎ ‘, ವಿಟಮಿನ್ ‘ ಬಿ ಕಾಂಪ್ಲೆಕ್ಸ್ ‘, ವಿಟಮಿನ್ ‘ ಸಿ ‘, ವಿಟಮಿನ್ ‘ ಇ ‘ ಅಂಶಗಳು ಕೂಡ ಸಾಕಷ್ಟಿವೆ. ಆಂಟಿ – ಬ್ಯಾಕ್ಟೀರಿಯಲ್, ಆಂಟಿ – ಸೆಪ್ಟಿಕ್ ಮತ್ತು ಆಂಟಿ – ಇನ್ಫಾಮೇಟರಿ ಗುಣ ಲಕ್ಷಣಗಳು ಈರುಳ್ಳಿಯಲ್ಲಿ ಕಂಡು ಬಂದಿದ್ದು, ಕೆಮ್ಮು, ಕಫ, ಮೊಡವೆ ಗುಳ್ಳೆಗಳು ಮತ್ತು ಗಾಯಗಳ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಈರುಳ್ಳಿಯಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುತ್ತದೆ. ಇವೆಲ್ಲವೂ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಕ್ವೆರ್ಸೆಟಿನ್ ಮತ್ತು ಸಲ್ಬರ್ ಅಂಶವು ಮೂಳೆಯ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಮೂಳೆ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ.
ಈರುಳ್ಳಿಯನ್ನು ಆಹಾರದಲ್ಲಿ ಸೇರಿಸುವುದರಿಂದ ಮೂಳೆಗಳ ಆರೋಗ್ಯವನ್ನು ಕಾಪಾಡಬಹುದು.
ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ. ಈರುಳ್ಳಿಯನ್ನು ನಿಮ್ಮ ಆಹಾರದ ಭಾಗವನ್ನಾಗಿ ಮಾಡಿಕೊಂಡರೆ ಅದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಮತೋಲನಗೊಳಿಸುತ್ತದೆ