ಬೇಸಿಗೆಯಲ್ಲಿ ನಮ್ಮ ದೇಹ ತಂಪಾಗಿರಿಸಲು ನಾವು ಹಲವಾರು ಆಹಾರಗಳನ್ನು ಸೇವನೆ ಮಾಡುತ್ತೇವೆ. ಕಲ್ಲಂಗಡಿ, ಬಾಳೆ ಹಣ್ಣು, ಕಿತ್ತಳೆ ಹಣ್ಣು ಇತ್ಯಾದಿ ಹಣ್ಣುಗಳ ಜೊತೆಗೆ, ಎಳನೀರನ್ನ ಸೇವಿಸುತ್ತೇವೆ. ಇದರ ಜೊತೆಗೆ ಬೇಸಿಗೆಯಲ್ಲಿ ತಾಳೆ ಹಣ್ಣು ಸೇವಿಸುವುದು ಕೂಡಾ ತುಂಬಾ ಉತ್ತಮ ಅಂತಾ ಹೇಳಲಾಗುತ್ತದೆ. ಹಾಗಾದ್ರೆ ತಾಳೆ ಹಣ್ಣು ಸೇವಿಸುವುದರ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ತಾಳೆಹಣ್ಣನ್ನ ಈರೋಳ್ ಅಂತಾನೂ ಕರೆಯಲಾಗುತ್ತದೆ. ಇದನ್ನ ಹೆಚ್ಚಾಗಿ ಕರಾವಳಿ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಹಾಗಾಗಿ ನಗರ ಪ್ರದೇಶಗಳಲ್ಲಿ ಇದು ಸಿಗೋದು ತುಂಬಾ ವಿರಳ ಅಂತಾನೇ ಹೇಳಬಹುದು. ಇದು ತೆಂಗಿನ ಕಾಯಿಯ ರೀತಿಯೇ ಕಾಣುತ್ತದೆ. ಇದರೊಳಗಿನ ಹಣ್ಣು ಕೂಡ ಕೊಂಚ ಪೇಪರ್ ಗಂಜಿಯಲ್ಲಿರುವ ತೆಂಗಿನ ಕಾಯಿಯಂತೆ ಕಾಣುತ್ತದೆ. ಆದ್ರೆ ಇದರ ರುಚಿಯೇ ಬೇರೆ.
ಈ ಹಣ್ಣಿನಲ್ಲಿ ಹೆಚ್ಚಿನ ಪೌಷ್ಠಿಕಾಂಶಗಳಿದ್ದು, ಬೇಸಿಗೆಯ ಧಗೆಯನ್ನ ಕಡಿಮೆಗೊಳಿಸಿ, ದೇಹವನ್ನು ತಂಪು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯವಾಗಿರುವುದರ ಜೊತೆಗೆ ದಪ್ಪವಾಗಬೇಕೆನ್ನುವವರು ಕೂಡ ತಾಳೆ ಹಣ್ಣನ್ನ ಸೇವಿಸಬಹುದು. ಅಲ್ಲದೇ, ಪ್ರತಿದಿನ ಅಥವಾ ವಾರಕ್ಕೆ ಮೂರು ಬಾರಿ ತಾಳೆ ಹಣ್ಣಿನ ಸೇವನೆ ಮಾಡುವುದು ಉತ್ತಮವಾಗಿದೆ.
ದೇಹದ ತಾಪಮಾನವನ್ನು ನಿರ್ವಹಣೆ ಮಾಡುತ್ತವೆ
- ಬೇಸಿಗೆ ಕಾಲದಲ್ಲಿ ಪ್ರತಿಯೊಬ್ಬರಿಗೂ ತಮ್ಮ ದೇಹದ ತಾಪಮಾನ ಅಧಿಕವಾಗಿ ಕಂಡುಬರುತ್ತದೆ. ಆದರೆ ಕೆಲವರು ಇದನ್ನು ತಪ್ಪಾಗಿ ಜ್ವರ ಎಂದು ಭಾವಿಸುತ್ತಾರೆ. ಏಕೆಂದರೆ ಅಷ್ಟರಮಟ್ಟಿಗೆ ಬೇಸಿಗೆಯ ಬಿಸಿಲಿನಿಂದ ಬಳಲಿ ಸುಸ್ತಾಗಿರುತ್ತಾರೆ.
- ತಾಟಿ ಹಣ್ಣಿನಲ್ಲಿ ದೇಹದ ತಾಪಮಾನವನ್ನು ತಂಪು ಮಾಡುವ ಗುಣ ಲಕ್ಷಣಗಳು ಹೆಚ್ಚಾಗಿವೆ. ಹಾಗಾಗಿ ಇವುಗಳಿಂದ ಜ್ಯೂಸ್ ತಯಾರು ಮಾಡಿ ಸವಿಯಬಹುದು.
ಪೌಷ್ಟಿಕ ಸತ್ವಗಳು ಅಪಾರ ಪ್ರಮಾಣದಲ್ಲಿ ಕಂಡುಬರುತ್ತವೆ
- ಮೊದಲೇ ಹೇಳಿದಂತೆ ತಾಟಿ ಹಣ್ಣಿನಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಕೆಲವು ಬಗೆಯ ಪೌಷ್ಟಿಕ ಸತ್ವಗಳು ಎನ್ನಲಾದ ಸೋಡಿಯಂ ಮತ್ತು ಪೊಟಾಶಿಯಂ ಅಂಶಗಳು ಹೆಚ್ಚಾಗಿ ಕಂಡುಬರುತ್ತವೆ.
- ಬೇಸಿಗೆ ಕಾಲದಲ್ಲಿ ಕೆಲವರಿಗೆ ರಕ್ತದ ಒತ್ತಡದಲ್ಲಿ ಏರುಪೇರು ಉಂಟಾಗುತ್ತದೆ. ಇದರಿಂದ ಆರೋಗ್ಯದಲ್ಲಿ ಸುಸ್ತು, ಆಯಾಸ ಜೊತೆಗೆ ಹೃದಯದ ತೊಂದರೆಗಳು ಸಹ ಕಾಣಿಸಿಕೊಳ್ಳುತ್ತವೆ. ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಲು ತಾಟಿ ಹಣ್ಣಿನ ಸೇವನೆ ಮಾಡಬಹುದು.
- ನಮ್ಮ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗದಂತೆ ನೋಡಿಕೊಂಡು ದೇಹದಲ್ಲಿರುವ ಎಲ್ಲಾ ಬಗೆಯ ಎಲೆಕ್ಟ್ರೋಲೈಟ್ ಅಂಶಗಳ ಸಮತೋಲನವನ್ನು ಕಾಯ್ದುಕೊಂಡು ಅತ್ಯುತ್ತಮ ಆರೋಗ್ಯ ನಿರ್ವಹಣೆಯನ್ನು ಮಾಡಿಕೊಳ್ಳಬಹುದು.
ನಿರ್ಜಲೀಕರಣ ಸಮಸ್ಯೆಯಿಂದ ದೂರವಾಗಬಹುದು
- ಬೇಸಿಗೆ ಕಾಲದಲ್ಲಿ ಈ ದೇಹದಿಂದ ನೀರಿನ ಅಂಶ ಸಾಕಷ್ಟು ಪ್ರಮಾಣದಲ್ಲಿ ಬೆವರಿನ ರೂಪದಲ್ಲಿ ಹರಿದು ಹೊರಬರುತ್ತದೆ. ಇದರ ಜೊತೆಗೆ ನಾವು ಸೇವನೆ ಮಾಡುವ ಆಹಾರ ಜೀರ್ಣ ಮಾಡುವ ಪ್ರಕ್ರಿಯೆಯಲ್ಲಿ ಸಾಕಷ್ಟು ನೀರಿನ ಅಂಶ ಬಳಕೆಯಾಗುತ್ತದೆ.
- ಮೂತ್ರ ವಿಸರ್ಜನೆಯಲ್ಲಿ ಅಪಾರ ಪ್ರಮಾಣದ ನೀರಿನ ಅಂಶ ನಮ್ಮ ದೇಹದಿಂದ ನಷ್ಟವಾಗುತ್ತದೆ. ಆದರೆ ಈ ಎಲ್ಲಾ ವಿಚಾರಗಳಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತದೆ. ಇಂತಹ ಸಮಯದಲ್ಲಿ ಬೇರೆ ಹಣ್ಣಿನ ಜ್ಯೂಸ್ ಗಳನ್ನು ಸೇವನೆ ಮಾಡುವ ಜೊತೆಗೆ ತಾಟಿ ಹಣ್ಣಿನ ರಸ ಸೇವನೆ ಕೂಡ ತುಂಬಾ ಅತ್ಯಗತ್ಯ ಎಂದು ಹೇಳಬಹುದು.
ದೇಹಕ್ಕೆ ಹೆಚ್ಚು ಶಕ್ತಿ ಸಿಗಲಿದೆ
- ತಾಟಿ ಹಣ್ಣಿನಲ್ಲಿ ಅಪಾರ ಪ್ರಮಾಣದಲ್ಲಿ ಕ್ಯಾಲೊರಿ ಅಂಶಗಳು ಇರುವ ಕಾರಣ ದೇಹದ ಶಕ್ತಿ ಮತ್ತು ಸದೃಢತೆಗೆ ಯಾವುದೇ ಕೊರತೆ ಉಂಟಾಗುವುದಿಲ್ಲ.
- ಬೇಸಿಗೆ ಕಾಲದಲ್ಲಿ ವಿಪರೀತ ಆಯಾಸ ಸುಸ್ತು ಎದುರಿಸುವವರು ಈ ಹಣ್ಣಿನ ತೊಳೆಗಳನ್ನು ಆಗಾಗ ನಿಯಮಿತವಾಗಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬಹುದು. ಇದರಿಂದ ದೀರ್ಘ ಕಾಲದವರೆಗೆ ದೇಹದಲ್ಲಿ ಚೈತನ್ಯ ಹಾಗೆ ಉಳಿಯುತ್ತದೆ. ಬೇಸಿಗೆಯಲ್ಲಿ ಕಂಡುಬರುವ ಆರೋಗ್ಯದ ಸಾಕಷ್ಟು ಸಮಸ್ಯೆಗಳು ಇದರಿಂದ ದೂರವಾಗುತ್ತವೆ.
ದೇಹದ ತೂಕದ ವಿಷ್ಯದಲ್ಲಿ
- ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಗಮನಿಸಬೇಕಾದ ಒಂದು ಅಂಶ
- ತಾಟಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಮತ್ತು ಕ್ಯಾಲೊರಿ ಅಂಶಗಳು ಇರುವ ಕಾರಣ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಸ್ವಲ್ಪ ಆಲೋಚನೆ ಮಾಡಬೇಕು.
- ಏಕೆಂದರೆ ಇದರಿಂದ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣಿನ ರಸ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಸಾಧ್ಯವಾದಷ್ಟು ನಿಮ್ಮ ಆಹಾರ ಪದ್ಧತಿಯಲ್ಲಿ ಸಕ್ಕರೆಯನ್ನು ನಿಯಮಿತವಾಗಿ ಬಳಕೆ ಮಾಡಿ.