ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಹಲವಾರು ಮುನ್ನೆಚ್ಚರಿಕೆಗಳನ್ನು ನಾವು ಕಡ್ಡಾಯವಾಗಿ ಇಂದು ಪಾಲಿಸಲೇಬೇಕಿದೆ. ಹೀಗಾಗಿ ಆರೋಗ್ಯಕರ ಆಹಾರ, ಹಣ್ಣುಗಳು ಮತ್ತು ಒಣ ಹಣ್ಣುಗಳಿಗೆ ಆದ್ಯತೆಯನ್ನು ನೀಡಬೇಕಿದೆ.
ಅಂದಹಾಗೆ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಪ್ರತಿದಿನ ಪಿಸ್ತಾ ಅಥವಾ ಪಿಸ್ತಾಶಿಯೋ ತಿನ್ನುವುದು ಬಹಳ ಪ್ರಯೋಜನಕಾರಿಯಾಗಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಜೊತೆಗೆ ವಿಟಮಿನ್ ಎ, ಬಿ ಮತ್ತು ಇ ಹೊಂದಿರುತ್ತದೆ. ಇವುಗಳ ಜೊತೆಗೆ ಫಾಸ್ಫರಸ್, ಮೆಗ್ನೀಷಿಯಂ, ಫೈಬರ್, ಪ್ರೊಟೀನ್ ಮತ್ತು ಆಯಂಟಿಆಕ್ಸಿಡೆಂಟ್ಗಳು ದೇಹಕ್ಕೆ ಹೇರಳವಾಗಿ ಒದಗುತ್ತವೆ.
ಪ್ರತಿದಿನ ಪಿಸ್ತಾ ತಿನ್ನುವುದರಿಂದ ಮೆದುಳಿನ ಕಾರ್ಯವೂ ಸುಧಾರಿಸುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದರಲ್ಲಿ ವಿಟಮಿನ್ ಎ ಅಧಿಕವಾಗಿದ್ದು, ಪ್ರತಿದಿನ ಸೇವಿಸುವುದರಿಂದ ದೃಷ್ಟಿಯನ್ನು ಸುಲಭವಾಗಿ ಸುಧಾರಿಸಬಹುದು ಮತ್ತು ಎಲ್ಲ ರೀತಿಯ ಕಣ್ಣಿನ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ. ವಯಸ್ಸಾದ ಮಹಿಳೆಯರಲ್ಲಿ ಮೂಳೆ ಸಮಸ್ಯೆಗಳು ಸಾಮಾನ್ಯವಾಗಿದೆ. ಆದರೆ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವಲ್ಲಿ ಪಿಸ್ತಾ ತುಂಬಾ ಪರಿಣಾಮಕಾರಿಯಾಗಿದೆ.
ವಿವಾಹಿತ ಪುರುಷರು ದಿನನಿತ್ಯ ಪಿಸ್ತಾ ಸೇವನೆ ಮಾಡುವುದರಿಂದ ತಮ್ಮ ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದಲ್ಲದೆ, ಇದರಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. ಪಿಸ್ತಾ ಸೇವನೆಯಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
ವಾಯುಮಾಲಿನ್ಯದಿಂದ ಚರ್ಮದ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಪಿಸ್ತಾ ಪರಿಣಾಮಕಾರಿ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.