ಮಲೆನಾಡು ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಸಿಗುವ ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡ ಒಂದು. ಇದೀಗ ನೇರಲೆ ಹಣ್ಣು ಕೂಡ ಮಾರುಕಟ್ಟೆ ಸೃಷ್ಟಿಸಿದೆ. ನಗರ ಪ್ರದೇಶದ ಮಾರ್ಕೆಟ್ಗಳಲ್ಲಿ ನೇರಲೆ ಹಣ್ಣುಗಳು ಸಿಗುತ್ತಿವೆ. ಈ ಹಣ್ಣಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮೆಗ್ನೀಷಿಯಂ, ಪ್ರೊಟೀನ್, ಐರನ್, ವಿಟಮಿನ್ ಸಿ,ಬಿ, ಗ್ಲುಕೋಸ್ ಸೇರಿದಂತೆ ಮೊದಲಾದ ದೇಹಕ್ಕೆ ಬೇಕಾದ ಹಲವು ಪೋಷಕಾಂಶಗಳಿವೆ. ಹೀಗಾಗಿ ಇದನ್ನು ತಿನ್ನುವುದರಿಂದ ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹುದು.
ನೇರಳೆ ಹಣ್ಣಿನ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗೆಯೇ ಮೂಳೆಗಳು ಬಲಗೊಳ್ಳುತ್ತವೆ. ನಿಯಮಿತವಾಗಿ ನೇರಳೆ ಹಣ್ಣಿನ ಸೇವನೆಯಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಬಹುದು.
ಈ ಹಣ್ಣಿನಲ್ಲಿ ಐರನ್ ಅಂಶ ಇರುವುದರಿಂದ ಇದು ರಕ್ತ ಶುದ್ಧ ಮಾಡುವಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಈ ಹಣ್ಣಿನ ರಸವನ್ನು ಕುಡಿಯವುದರಿಂದ ಕೆಮ್ಮು ಮತ್ತು ಉಬ್ಬಸವನ್ನು ನಿಯಂತ್ರಿಸಬಹುದು. ಹಾಗೆಯೇ ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ನೇರಳೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಕೆಟ್ಟ ಉಸಿರಾಟದ ಸಮಸ್ಯೆಯನ್ನು ದೂರ ಮಾಡಬಹುದು.
ಹಾಗೆಯೇ ಚರ್ಮದ ಉರಿ ಸಮಸ್ಯೆಗೆ ನೇರಳೆ ಹಣ್ಣಿನ ಪೇಸ್ಟ್ಗೆ ಸಾವಿಸಿ ಎಣ್ಣೆ ಮಿಶ್ರ ಮಾಡಿ ಉರಿ ಇರುವ ಜಾಗಕ್ಕೆ ಲೇಪನ ಮಾಡಿದ್ರೆ ಉರಿ ಶಮನವಾಗುತ್ತದೆ. ನಿಯಮಿತವಾಗಿ ನೇರಳೆ ಹಣ್ಣನ್ನು ಸೇವಿಸುವುದರಿಂದ ಅಜೀರ್ಣ ಸಮಸ್ಯೆಯನ್ನು ದೂರ ಮಾಡಬಹದು.
ಹಾಗೆಯೇ ಇದರಿಂದ ಚರ್ಮ ಸುಕ್ಕುಗಟ್ಟುವಿಕೆ ಕೂಡ ಕಡಿಮೆಯಾಗುತ್ತದೆ. ನೇರಳೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಕರುಳಿನ ಸಮಸ್ಯೆ ಮತ್ತು ಕ್ಯಾನ್ಸರ್ ರೋಗದಿಂದ ಮುಕ್ತಿ ಪಡೆಯಬಹುದು. ಅದೇ ರೀತಿ ಇದರ ಎಲೆಗಳನ್ನು ಅಗಿದು ರಸ ಕುಡಿದ್ರೆ ಅಲ್ಸರ್ ನಿವಾರಣೆಯಾಗುತ್ತದೆ.