ಮುಖಕ್ಕೆ ಅರಿಶಿಣದ ಸ್ಕ್ರಬ್ ಮಾಡಿಕೊಳ್ಳುವುದರಿಂದ ನಿಮ್ಮನ್ನು ಸುಂದರವಾಗಿ ಕಾಣಿಸಲು ಸಹಾಯ ಮಾಡುತ್ತದೆ. ಅರಿಶಿಣದಲ್ಲಿ ಆಂಟಿಕ್ಸೆಸಿಂಡಸ್, ಆಂಟಿ ಮೈಕ್ರೊಬಿಬಲ್ ಹಾಗೂ ಆಂಟಿ ಇಂಫ್ಲೆಮೆಂಟರಿ ಅಂಶವಿರುತ್ತದೆ. ಇದು ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಅರಿಶಿಣ ಉಪಯೋಗಿಸುವುದರಿಂದ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುವುದಲ್ಲದೇ ಇನ್ಫೆಕ್ಷನ್ ಆಗುವುದರಿಂದ ತಡೆಯುತ್ತದೆ. ಅರಿಶಿಣದ ಫೇಸ್ ಸ್ಕ್ರಬ್ ಬಳಸುವುದರಿಂದ ತ್ವಚೆಯ ಕೊಳೆಯನ್ನು ಹೋಗಲಾಡಿಸುತ್ತದೆ.
ಸ್ಕ್ರಬ್ ತಯಾರಿಸಲು ಏನೇನ್ ಬೇಕು?
* ಅರಿಶಿಣ
* ಜೇನು
* ಸಕ್ಕರೆ
ಸ್ಕ್ರಬ್ ತಯಾರಿಸುವುದು ಹೇಗೆ:
ಒಂದು ಕಪ್ನಲ್ಲಿ 2 ದೊಡ್ಡ ಚಮಚದಲ್ಲಿ ಅರಿಶಿಣಕ್ಕೆ 2 ದೊಡ್ಡ ಚಮಚ ಜೇನು ಹಾಕಿ ದಪ್ಪವಾಗಿ ಪೇಸ್ಟ್ ತಯಾರಿಸಬೇಕು. ಪೇಸ್ಟ್ ತಯಾರಿಸಿದ ನಂತರ 1 ದೊಡ್ಡ ಚಮಚದಲ್ಲಿ ಸಕ್ಕರೆ ಹಾಕಿ ಮಿಕ್ಸ್ ಮಾಡಬೇಕು. ನಿಮ್ಮ ಸ್ಕಿನ್ ಡ್ರೈ ಆಗಿದ್ದಲ್ಲಿ ಜೇನು ಸ್ವಲ್ಪ ಜಾಸ್ತಿ ಹಾಕಿ.
ಉಪಯೋಗಿಸುವುದು ಹೇಗೆ?
ಮುಖಕ್ಕೆ ಸ್ಕ್ರಬ್ ಹಾಕುವ ಮೊದಲು ನಿಮ್ಮ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಅರಿಶಿಣದ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಾಗೂ ಕುತ್ತಿಗೆಗೆ ಹಾಕಿಕೊಳ್ಳಿ. ಸ್ಕ್ರಬ್ ಮುಖಕ್ಕೆ ಹಾಕಿದ ನಂತರ 2-3 ನಿಮಿಷದವರೆಗೂ ಅದನ್ನು ಉಜ್ಜಿ. ಸ್ವಲ್ಪ ಸಮಯದ ನಂತರ ನೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿ ಅರಿಶಿಣದ ಸ್ಕ್ರಬ್ ಉಪಯೋಗಿಸುವುದರಿಂದ ನಿಮ್ಮ ತ್ವಚೆಯ ವ್ಯತ್ಯಾಸ ನಿಮಗೆ ಗೊತ್ತಾಗುತ್ತದೆ.