ನಮ್ಮ ಅಡುಗೆ ಮನೆಯಲ್ಲಿರುವ, ಕೆಲವು ಮಸಾಲೆ ಪದಾರ್ಥಗಳೇ ಔಷಧಿಯ ರೀತಿ ಕೆಲಸ ಮಾಡುತ್ತದೆ. ಅವುಗಳನ್ನ ಹಾಗೆ ಸೇವಿಸಿದರೆ, ಅಥವಾ ಅಡುಗೆಯಲ್ಲಿ ಬಳಸಿ ಸೇವಿಸುವುದರಿಂದಲೇ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಆದ್ದರಿಂದಲೇ, ಭಾರತದ ಮಸಾಲೆ ಪದಾರ್ಥಗಳಿಗೆ, ವಿದೇಶದಲ್ಲಿ ಬೇಡಿಕೆ ಇರುವುದು. ನಾವಿಂದು ಆ ಮಸಾಲೆ ಪದಾರ್ಥಗಳಲ್ಲಿ ಒಂದಾದ ಓಮ ಕಾಳು ಸೇವನೆಯ ಪ್ರಯೋಜನದ ಬಗ್ಗೆ ಹೇಳಲಿದ್ದೇವೆ.
ಪ್ರತಿದಿನ ರಾತ್ರಿ ಊಟವಾದ ಬಳಿಕ, ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿನೊಂದಿಗೆ ಕೊಂಚ ಓಮ ಕಾಳನ್ನ ಚೆನ್ನಾಗಿ ಜಗಿದು ಸೇವಿಸಿದರೆ, ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಇಂದಿನ ಕಾಲದ ಜನರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಅಂಥವರು ಪ್ರತಿದಿನ ರಾತ್ರಿ ಈ ರೀತಿಯಾಗಿ ಓಮ ಸೇವಿಸಿದರೆ, ಆರಾಮವಾಗಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಎರಡನೇಯದಾಗಿ ಮುಟ್ಟಿನ ಹೊಟ್ಟೆ ನೋವಿಗೂ ಇದು ಪರಿಹಾರವಾಗಿದೆ. ಮುಟ್ಟಿನ ಹೊಟ್ಟೆನೋವು ಇದ್ದವರು ರಾತ್ರಿ ಬಿಸಿ ನೀರು ಕುಡಿದು, ಓಮ ಕಾಳು ಸೇವಿಸಿದರೆ, ಮುಟ್ಟಿನ ಹೊಟ್ಟೆನೋವು ಕ್ರಮೇಣ ವಾಸಿಯಾಗುತ್ತದೆ. ತೂಕ ಕಡಿಮೆ ಮಾಡಲು ಕೂಡ ಈ ನೀರು ಸಹಕಾರಿಯಾಗಿದೆ. ಒಂದು ಲೋಟ ನೀರು ಕುದಿಸಿ, ಅದಕ್ಕೆ ಚಿಟಿಕೆ ಓಮ ಕಾಳು ಹಾಕಿ. ಚೆನ್ನಾಗಿ ಕುದಿಸಬೇಕು. ಈಗ ಓಮದ ಕಶಾಯ ರೆಡಿ. ಈ ಕಶಾಯ ಕುಡಿದರೂ ನಿಮ್ಮ ತೂಕ ಕಡಿಮೆಯಾಗುತ್ತದೆ. ನಿಮಗೆ ಪ್ರತಿದಿನ ಓಮ ತಿಂದರೆ, ಅಲರ್ಜಿಯಾದರೆ, ವಾರಕ್ಕೆ ಎರಡು ಬಾರಿ ಈ ಕಶಾಯ ಕುಡಿಯಿರಿ.