ಟ್ರಾಫಿಕ್ ರೂಲ್ಸ್ ಬ್ರೇಕ್ ಹಿನ್ನೆಲೆ, ರಾಜಧಾನಿ ಬೆಂಗಳೂರಿನ 3 ಲಕ್ಷ ವಾಹನಗಳ ಮೇಲೆ ಬರೋಬ್ಬರಿ 19 ಕೋಟಿ ದಂಡವಿದೆ. ಹೀಗಾಗಿ ವಾಹನಗಳ ಮಾಲೀಕರಿಗೆ ನೋಟಿಸ್ ಕೊಟ್ಟು ದಂಡ ವಸೂಲಿ ಮಾಡಲು ಮುಂದಾಗಿದ್ದಾರೆ.ಟ್ರಾಫಿಕ್ ರೂಲ್ಸ್ ಬ್ರೇಕ್ ಹಿನ್ನೆಲೆ, ರಾಜಧಾನಿ ಬೆಂಗಳೂರಿನ 3 ಲಕ್ಷ ವಾಹನಗಳ ಮೇಲೆ ಬರೋಬ್ಬರಿ 19 ಕೋಟಿ ದಂಡವಿದೆ. ಹೀಗಾಗಿ ವಾಹನಗಳ ಮಾಲೀಕರಿಗೆ ನೋಟಿಸ್ ಕೊಟ್ಟು ದಂಡ ವಸೂಲಿ ಮಾಡಲು ಮುಂದಾಗಿದ್ದಾರೆ.
ಇದರ ಹೊರತಾಗಿಯೂ ದಂಡ ಕಟ್ಟದಿದ್ದರೆ, ಅಂತವರ ವಿರುದ್ಧ ಕೋರ್ಟ್ನಲ್ಲಿ ಚಾರ್ಜ್ ಶೀಟ್ ಹಾಕಲು ಸಿದ್ದವಾಗಿದ್ದಾರೆ. ಈ ಬಗ್ಗೆ ಮಾತಾನಾಡಿದ ಟ್ರಾಫಿಕ್ ತಜ್ಞ ಚಂದ್ರಶೇಖರ್ “ಇಂತಹ ವಾಹನ ಮಾಲೀಕರ ಡಿಎಲ್ ರದ್ದುಗೊಳಿಸಬೇಕು, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
2742 ಬೈಕ್ಗಳು 3,61,294 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದು, ಇದರ ಮೇಲೆ 18,76,34,300 ರೂ. ದಂಡ ಇದೆ. 100 ಕಾರುಗಳು 8603 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದರಿಂದ 69,00,900 ರೂ. ದಂಡ ಕಟ್ಟಬೇಕಾಗಿದೆ. 09 ವ್ಯಾನ್ 848 ಬಾರಿ ಟ್ರಾಫಿಕ್ಸ್ ರೂಲ್ಸ್ ಬ್ರೇಕ್ ಮಾಡಿದ್ದರಿಂದ 4,67,500 ದಂಡ ಕಟ್ಟಬೇಕಾಗಿದೆ. 2 ಸ್ಕೂಲ್ ಬಸ್ ಗಳು 156 ಸಂಚಾರಿ ನಿಯಮ ಗಾಳಿಗೆ ತೂರಿದ್ದರಿಂದ 88,000, ರೂ. 01 ಮ್ಯಾಕ್ಸಿ ಕ್ಯಾಬ್ 82 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದರಿಂದ 56,000 ರೂ. ದಂಡ ಕಟ್ಟಬೇಕಾಗಿದೆ. ಅಲ್ಲದೆ ಇತರೆ 04 ವಾಹನಗಳು 433 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದು, 2,43,100 ರೂಪಾಯಿ ದಂಡ ಕಟ್ಟಬೇಕಿವೆ.