ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಜೀರಿಗೆ (Cumin) ಪಾತ್ರ ದೊಡ್ಡದು. ಅನಾದಿಕಾಲದಿಂದಲೂ ಸಾಂಪ್ರದಾಯಿಕ ಔಷಧವಾಗಿ ಜೀರಿಗೆ ಬಳಕೆಯಲ್ಲಿದೆ. ಜೀರ್ಣಕ್ರಿಯೆಯನ್ನು ಉತ್ತಮಪಡಿಸಲು ಜತೆಗೆ ಆಹಾರದಿಂದ ಹರಡುವ ಸೋಂಕನ್ನು ತಡೆಯಲು ಜೀರಿಗೆ ನೆರವಾಗುತ್ತದೆ.
ಸಂಶೋಧನೆಯಲ್ಲಿಯೂ ಜೋರಿಗೆಯಲ್ಲಿ ಆರೋಗ್ಯ ಗುಣಗಳು ಸಾಬೀತಾಗಿದೆ. ಹೌದು ಜೀರಿಗೆಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ ಹಾಗೂ ಕೊಲೆಸ್ಟ್ರಾಲ್(Cholesterol) ಮಟ್ಟವನ್ನೂ ಸುಧಾರಿಸುತ್ತದೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಹೀಗಾಗಿ ಜೀರಿಗೆ ದೇಹದ ಸಂಪೂರ್ಣ ಆರೋಗ್ಯಕ್ಕೆ ಉತ್ತಮ ಎನ್ನಬಹುದು. ಇನ್ನುಳಿದಂತೆ ಜೀರಿಗೆಯ ಆರೋಗ್ಯ ಗುಣಗಳಿ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ:
ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ: ಅಜೀರ್ಣ ಸಮಸ್ಯೆಗೆ ಜೀರಿಗೆ ರಾಮಬಾಣವಾಗಿದೆ. ಆಧುನಿಕ ಸಂಶೋಧನೆಯಲ್ಲಿಯೂ ಜೀರಿಗೆ ಚಯಾಪಯ ಕ್ರಿಯೆಯನ್ನು ಉತ್ತಮಪಡಿಸುತ್ತದೆ ಎಂದು ಸಾಬೀತಾಗಿದೆ. ಜೀರಿಗೆ ಪಿತ್ತಜನಕಾಂಗದಿಂದ ಬಿಡುಗಡೆಯಾಗುವ ಪಿತ್ತರಸವನ್ನು ಹೆಚ್ಚಿಸುತ್ತದೆ. ಇದು ಕರುಳಿನಲ್ಲಿರುವ ಕೊಬ್ಬು ಮತ್ತು ಕೆಲವು ಅನಗತ್ಯ ಪೋಷಕಾಂಶಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.
ಕಬ್ಬಿಣ ಅಂಶವನ್ನು ಹೆಚ್ಚಿಸುತ್ತದೆ: ಜೀರಿಗೆಯಲ್ಲಿ ಯಥೇಚ್ಛವಾದ ಕಬ್ಬಿಣದ ಅಂಶವಿದೆ. ಒಂದು ಚಮಚ ಜೀರಿಗೆಯಲ್ಲಿ ಸುಮಾರು 1.4 ಮಿಗ್ರಾಂ ಕಬ್ಭಿಣದ ಅಂಶವನ್ನು ಹೊಂದಿರುತ್ತದೆ ಎನ್ನುತ್ತಾರೆ ತಜ್ಞರು. ಮಹಿಳೆಯರ ಮುಟ್ಟಿನ ಸಮಸ್ಯೆಗೆ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಬ್ಬಿಣದ ಅಂಶ ಅತಿ ಮುಖ್ಯವಾಗಿದೆ. ಅದು ಜೀರಿಗೆಯಿಂದ ದೊರಕುತ್ತದೆ.
ಮಧುಮೇಹಿಗಳಿಗೂ ಸಹಾಯಕ: ಜೀರಿಗೆಯಲ್ಲಿನ ಕೆಲವು ಅಂಶಗಳು ಮಧುಮೇಹ ನಿಯಂತ್ರಣಕ್ಕೆ ನೆರವಾಗುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಮಧುಮೇಹವನ್ನು ಒಂದ ಹಂತದವರೆಗೆ ನಿಯಂತ್ರಣದಲ್ಲಿಡಲು ಜೀರಿಗೆ ಸಹಾಯಕವಾಗಿದೆ. ಅಲ್ಲದೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.
ತೂಕ ನಷ್ಟಕ್ಕೆ ಸಹಾಯಕ: ಜೀರಿಗೆಯಲ್ಲಿನ ಪೂರಕಗಳು ದೇಹದ ಅತಿಯಾದ ತೂಕ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನದಲ್ಲಿ ಸಾಬೀತಾಗಿದೆ. ರಕ್ದಲ್ಲಿನ ಕೊಬ್ಬನ್ನು ಕಡಿಮೆ ಮಾಡಿ, ದೇಹವನ್ನು ಸುರಕ್ಷಿತವಾಗಿರಿಸಿಕೊಳ್ಳಲು ಜೀರಿಗೆ ಸಹಾಯಕವಾಗಿದೆ.
ಆಹಾರದಿಂದ ಹರಡುವ ಕಾಯಿಲೆಗೆ ತಡೆ: ಮಸಾಲೆಯಲ್ಲಿ ಜೀರಿಗೆಯನ್ನು ಆಹಾರದ ಸುರಕ್ಷತೆಯ ದೃಷ್ಟಿಯಿಂದಲು ಬಳಸುತ್ತಾರೆ. ಜೀರಿಗೆಯಲ್ಲಿನ ಹಲವು ಅಂಶಗಳು ಆಹಾರದಿಂದ ಹರಡುವ ವ್ಯಾಕ್ಟೀರಿಯಾ ಮತ್ತು ಕೆಲವು ರೀತಿಯ ಸಾಂಕ್ರಾಮಿಕ ಶೀಲೀಂದ್ರಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ.
ಉರಿಯೂತದ ಸಮಸ್ಯೆಗೆ ಪರಿಹಾರ: ಜೀರಿಗೆಯಲ್ಲಿನ ಸಾರಗಳು ದೇಹದಲ್ಲಿ ಕಾಣಿಸಿಕೊಳ್ಳುವ ಉರಿಯೂತದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಜೀರಿಗೆಯನ್ನು ಪುಡಿ ಮಾಡಿ ಅನ್ನದ ಜೊತೆಯೂ ಸೇವಿಸಬಹುದಾಗಿದೆ. ದೇಹವನ್ನು ತಂಪಾಗಿರಿಸಲು ಕೂಡ ಜೀರಿಗೆ ನೆರವಾಗುತ್ತದೆ. ಪ್ರತಿದಿನ ಜೀರಿಗೆಯನ್ನು ಕುದಿಸಿ ಅದರ ನಿರನ್ನು ಸೇವಿಸುವುದರಿಂದ ದೇಹವನ್ನು ತಂಪಾಗಿರಿಸಿ ಉರಿಯೂತದ ಸಮಸ್ಯೆಗಳನ್ನು ನಿವಾರಿಸುತ್ತದೆ.