ಎಲ್ಲಾ ರೀತಿಯ ಹಣ್ಣುಗಳು ವಿವಿಧ ಪೋಷಕಾಂಶಗಳಿಂದ ಕೂಡಿರುತ್ತವೆ. ಪ್ರತಿ ಹಣ್ಣಿನಲ್ಲಿರುವ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಪ್ರಯೋಜನಗಳನ್ನು ನೀಡುತ್ತದೆ. ಅದರಲ್ಲಿಯೂ ವಿಶೇಷವಾಗಿ ಸೀತಾಫಲವು ನಮ್ಮ ದೇಹಕ್ಕೆ ನಾನಾ ರೀತಿಯ ಪ್ರಯೋಜನಗಳನ್ನು ನೀಡುತ್ತದೆ.
ಈ ಸೀತಾಫಲವನ್ನು ಬಯಲು ಸೀಮೆ ಮಾತ್ರವಲ್ಲದೇ ಗುಡ್ಡಗಾಡು ಪ್ರದೇಶಗಳಲ್ಲೂ ಬೆಳೆಸಬಹುದು. ಪರ್ವತಗಳಲ್ಲಿ ಬೆಳೆಯುವ ಹಣ್ಣುಗಳು ಸ್ವಲ್ಪ ದೊಡ್ಡದಾಗಿರುತ್ತವೆ. ಸಾಮಾನ್ಯವಾಗಿ ಹಸಿರು ಅಥವಾ ನೇರಳೆ ಬಣ್ಣದ ಹಣ್ಣುಗಳು ಹಣ್ಣಾದಾಗ ತುಂಬಾ ಗಟ್ಟಿಯಾಗಿರುತ್ತವೆ. ಬೇಯಿಸಿದಾಗ ಅದು ತುಂಬಾ ಮೃದುವಾಗುತ್ತದೆ. ಸೀತಾಫಲ ನೋಡಲು ಮುಳ್ಳಿನಂತೆ ಕಾಣಿಸುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ 6, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಆಂಟಿಆಕ್ಸಿಡೆಂಟ್ಗಳಿವೆ. ಇದರಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ.
ಸೀತಾಫಲ ಉಷ್ಣವಲಯದ ಹಣ್ಣು. ಇದು ಬಹಳ ಸಿಹಿಯಾಗಿ ಪರಿಮಳಯುಕ್ತವಾಗಿರುತ್ತದೆ. ರುಚಿಗೆ ಮಾತ್ರವಲ್ಲ, ಇದನ್ನು ತಿಂದರೆ ಹಲವು ಆರೋಗ್ಯ ಪ್ರಯೋಜನಗಳೂ ಇವೆ. ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾದರೆ ಸೀತಾಫಲ ತಿನ್ನುವುದರಿಂದ ಏನೆಲ್ಲ ಆರೋಗ್ಯ ಪ್ರಯೋಜನವಿದೆ ಎಂಬುದು ಗೊತ್ತಿರಲಿ.
ಸೀತಾಫಲದಲ್ಲಿ ವಿಟಮಿನ್ ಸಿ ಸೇರಿದಂತೆ ಸಾಕಷ್ಟು ಆಂಟಿ ಆಕ್ಸಿಡೆಂಟ್ಗಳು ಇರುವುದರಿಂದ ಇವು ಚರ್ಮಕ್ಕೆ ರಕ್ಷಣೆಯನ್ನು ನೀಡುವಲ್ಲಿ ಸಹಾಯ ಮಾಡುತ್ತದೆ. ಚರ್ಮಕ್ಕೆ ಫ್ರೀ ರ್ಯಾಡಿಕಲ್ಸ್ನಿಂದಾಗುವ ಹಾನಿಯನ್ನು ತಪ್ಪಿಸಿ, ಬಹುಬೇಗ ಚರ್ಮ ಸುಕ್ಕಾಗದಂತೆ ನೋಡಿಕೊಳ್ಳುತ್ತದೆ. ಈ ಆಂಟಿ ಆಕ್ಸಿಡೆಂಟ್ಗಳು ಕ್ಯಾನ್ಸರ್ ಹಾಗೂ ಹೃದಯದ ಕಾಯಿಲೆಗಳಿಂದಲೂ ರಕ್ಷಿಸುತ್ತವೆ
ಸೀತಾಫಲವು ನಿಮ್ಮ ಕೆಟ್ಟ ಮೂಡನ್ನೂ ಸರಿಪಡಿಸುವ ಶಕ್ತಿ ಹೊಂದಿದೆ. ಅಂದರೆ, ಇದರಲಲ್ಲಿ ವಿಟಮಿನ್ ಬಿ೬ ಹೇರಳವಾಗಿದ್ದು, ಇವು ನ್ಯೂರೋ ಟ್ರಾನ್ಸ್ಮಿಟರ್ಗಳ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ. ಆ ಮೂಲಕ ಸೆರಟೋನಿನ್ ಹಾಗೂ ಡೋಪಮೈನ್ ಉತ್ಪತ್ತಿಯಾಗಿ ನಿಮ್ಮ ಮೂಡ್ ಉಲ್ಲಾಸದಾಯಕವಾಗಿಸುತ್ತದೆ. ಖಿನ್ನತೆಯಂತ ಸಮಸ್ಯೆ ಇರುವ ಮಂದಿಗೂ ಇದು ಬಹಳ ಒಳ್ಳೆಯದು
ಕಣ್ಣಿನ ಆರೋಗ್ಯಕ್ಕೂ ಸೀತಾಫಲ ಅತ್ಯಂತ ಉತ್ತಮ. ಇದರಲ್ಲಿ ಲುಟೈನ್ ಎಂಬ ಕೆರೋಟಿನಾಯ್ಡ್ ಇರುವುದರಿಂದ ಇದು ಕಣ್ಣನ್ನು ಆರೋಗ್ಯವಾಗಿರಿಸುತ್ತದೆ. ಕಣ್ಣಿನ ಪೊರೆ, ಮಂದ ದೃಷ್ಠಿ ಮತ್ತಿತರ ಸಮಸ್ಯೆ ಬಹುಬೇಗ ಬಾರದಂತೆ ಇದು ತಡೆಯುತ್ತದೆ
ಅಧಿಕ ರಕ್ತದೊತ್ತಡಕ್ಕೂ ಇದು ಅತ್ಯಂತ ಒಳ್ಳೆಯದು. ಇದರಲ್ಲಿ ಪೊಟಾಶಿಯಂ ಹಾಗೂ ಮೆಗ್ನೀಶಿಯಂ ಹೆಚ್ಚಿರುವುದರಿಂದ ಇವು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಸಮತೋಲನಗೊಳಿಸಲು ನೆರವಾಗುತ್ತದೆ
ಸೀತಾಫಲ ಹಣ್ಣಿನಲ್ಲಿ ನಾರಿನಂಶ ಅತ್ಯಂತ ಹೆಚ್ಚಿರುವುದರಿಂದ ಇದು ಜೀರ್ಣಕ್ರಿಯೆಯನ್ನೂ ಉತ್ತೇಜಿಸುತ್ತದೆ. ಮಲಬದ್ಧತೆ ಮತ್ತಿತರ ಜೀರ್ಣಕ್ರಿಯೆಯ ಸಮಸ್ಯೆ ಇರುವ ಮಂದಿಗೆ ಇದು ಅತ್ಯಂತ ಒಳ್ಳೆಯ ಹಣ್ಣು. ಇದು ಜೀರ್ಣಾಂಗವ್ಯೂಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯದ ಉತ್ಪತ್ತಿಯನ್ನು ಪ್ರಚೋದಿಸಿ, ಜೀರ್ಣಾಂಗವ್ಯೂಹವನ್ನು ಆರೋಗ್ಯಯುತವಾಗಿಸುತ್ತದೆ
ಸಂಶೋಧನೆಯ ಪ್ರಕಾರ, ಇದು ಮಹಿಳೆಯರಲ್ಲಿ ಸಾಮಾನ್ಯವಾಗಿರುವ ಸ್ತನ ಕ್ಯಾನ್ಸರ್ಗೆ ಬಹಳ ಪರಿಣಾಮಕಾರಿ ಆಹಾರವಾಗಿದ್ದು, ಸ್ತನ ಕ್ಯಾನ್ಸರ್ನ ಗಡ್ಡೆಯ ಬೆಳವಣಿಗೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ ಉದಾಹರಣೆಯಿದೆ. ಉಳಿದಂತೆ, ಜೀರ್ಣಾಂಗವ್ಯೂಹದ ಕೆಲವು ಕ್ಯಾನ್ಸರ್ಗಳಿಗೂ ಇದು ಅತ್ಯುತ್ತಮ ಹಣ್ಣು
ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ. ಇದರಲ್ಲಿ ಸಾಕಷ್ಟು ವಿಟಮಿನ್ ಸಿ ಇರುವುದರಿಂದ ದೇಹವನ್ನು ರೋಗಗಳಿಂದ ರಕ್ಷಿಸುವ ಹಾಗೂ ಬದಲಾಗುವ ಋತುಮಾನಗಳಲ್ಲಿ ಕಾಡುವ ಶೀತ, ನೆಗಡಿ ಕೆಮ್ಮುಗಳಂತ ತೊಂದರೆಗಳನ್ನು ಇವು ದೂರವಿರಿಸುತ್ತದೆ