ಬಾಲಿವುಡ್ ಬ್ಯೂಟಿ ನಟಿ ಪ್ರಿಯಾಂಕಾ ಚೋಪ್ರಾ ಇತ್ತಿಚೆಗೆ ಕಾರ್ಯಕ್ರಮವೊಂದರಲ್ಲಿ ಧರಿಸಿದ್ದ ನೆಕ್ಲೇಸ್ ಸಖತ್ ಸುದ್ದಿಯಾಗಿದೆ.
ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ದುಬಾರಿ ನೆಕ್ಲೇಸ್ ಸಖತ್ ಹೈಲೈಟ್ ಆಗಿದೆ.
2 ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಮಗಳು ಮಾಲ್ತಿ ಮೇರಿಯೊಂದಿಗೆ ಭಾರತಕ್ಕೆ ಬಂದಿದ್ದರು. ಈ ವೇಳೆ ಇಟಾಲಿಯನ್ ಆಭರಣ ಬ್ರ್ಯಾಂಡ್ ಬಲ್ಗೇರಿಯ ಸ್ಟೋರ್ ಲಾಂಚ್ ಗಾಗಿ ಪ್ರಿಯಾಂಕಾ ಆಗಮಿಸಿದ್ದು, ಕಾರ್ಯಕ್ರಮದಲ್ಲೂ ಭಾಗಿಯಾಗಿದ್ರು.
ಸ್ಟೋರ್ ಲಾಂಚ್ ಕಾರ್ಯಕ್ರಮದಲ್ಲಿ ನಟಿ ಪ್ರಿಯಾಂಕಾ ವೈಟ್ ಕಲರ್ ಡ್ರೆಸ್ ಗೆ ಬ್ಯೂಟಿಫುಲ್ ಸ್ನೇಕ್ ಡಿಸೈನ್ ಡೈಮಂಡ್ ನೆಕ್ಲೇಸ್ ಧರಿಸಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಿಯಾಂಕಾ ಚೋಪ್ರಾ, ಇಶಾ ಅಂಬಾನಿ ಅವರು ಆಯೋಜಿಸಿದ್ದ ಹೋಳಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅಲ್ಲೂ ಪ್ರಿಯಾಂಕಾ ಚೋಪ್ರಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಪ್ರಿಯಾಂಕಾ ಧರಿಸಿದ್ದ ನೆಕ್ಲೇಸ್ ಚರ್ಚೆಗೆ ಕಾರಣವಾಗಿದೆ.
ಹೋಳಿ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಹೈ ಸ್ಲಿಟ್ ಸೀರೆಯನ್ನು ಧರಿಸಿದ್ದರು, ಜೊತೆ ದೇಸಿ ಗರ್ಲ್ ತೊಟ್ಟ ನೆಕ್ಲೇಸ್ ಫುಲ್ ಹೈಲೈಟ್ ಆಗಿತ್ತು. ಪ್ರಿಯಾಂಕಾ ಚೋಪ್ರಾ ನೆಕ್ಲೇಸ್ ಡೈಮಂಡ್ ನಿಂದ ಮಾಡಲ್ಪಟ್ಟಿದೆ. ದೊಡ್ಡ ಡೈಮೆಂಡ್ ಕಲ್ಲುಗಳನ್ನು ಒಳಗೊಂಡಿದ್ದು ಇದು ಸಾಕಷ್ಟು ದುಬಾರಿ ಎಂದು ಹೇಳಲಾಗುತ್ತಿದೆ.
ಫ್ರೀ ಪ್ರೆಸ್ ಜನರಲ್ ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಪ್ರಿಯಾಂಕಾ ಧರಿಸಿದ ಈ ಡೈಮೆಂಡ್ ನೆಕ್ಲೇಸ್ ಬೆಲೆ 8 ಕೋಟಿ 33 ಲಕ್ಷದ 80 ಸಾವಿರ ರೂಪಾಯಿ ಎನ್ನಲಾಗ್ತಿದೆ.