ಕಿಲಾಡಿ ಕಿಟ್ಟು ಸಿನಿಮಾದ ಮೂಲಕ ಬಾಲ ನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ನಟಿ ಸುಧಾರಾಣಿ ಆ ಬಳಿಕ ಸ್ಟಾರ್ ನಟಿಯಾಗಿ ಮಿಂಚಿದ್ದರು.
ಪುನೀತ್ ರಾಜ್ ಕುಮಾರ್ ನಟನೆಯ ಆನಂದ್ ಸಿನಿಮಾದಲ್ಲಿ ಅಪ್ಪುಗೆ ಜೋಡಿಇಯಾಗುವ ಮೂಲಕ ಚಂದನವನಕ್ಕೆ ಕಾಲಿಟ್ಟ ಚೆಲುವೆ ನಟಿ ಸುಧಾರಾಣಿ.
ಸಂಪ್ರದಾಯಸ್ಥ ಬ್ರಹ್ಮಣ ಕುಟುಂಬದಲ್ಲಿ ಹುಟ್ಟಿ ಬೆಳೆದ ನಟಿ ಸುಧಾರಾಣಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅರಿವಳಿಕೆ ತಜ್ಞ ಡಾ.ಸಂಜಯ್ ಎಂಬುವವರನ್ನು ಮದುವೆಯಾದರು.
ಡಾ.ಸಂಜಯ್ ಜೊತೆ ಅಮೆರಿಕಾದಲ್ಲಿ ವಾಸವಾಗಿದ್ದು ಸುಧಾರಾಣಿ ಅವರಿಗೆ ಪತಿಯಿಂದಲೇ ಜೀವ ಭಯವಿತ್ತು.
ಕೆಮಿಕಲ್ ಜೀವದೊಳಗೆ ಇಂಜೆಕ್ಟ್ ಮಾಡ್ತೀನಿ ಎಂದು ಸುಧಾರಾಣಿಗೆ ಪತಿಯೇ ಹೆದರಿಸಿದ್ದರು. ಜೊತೆಗೆ ಸುಧಾರಾಣಿ ಅವರಿಗೆ ಸಂಜಯ್ ಸಾಕಷ್ಟು ಚಿತ್ರಹಿಂಸೆಯನ್ನು ನೀಡುತ್ತಿದ್ದರು.
ಕೈಯಲ್ಲಿ ದುಡ್ಡಿಲ್ಲದೆ, ತಿನ್ನೋಕೆ ಏನೂ ಸಿಗದೆ ಅದೆಷ್ಟೋ ಭಾರಿ ಸುಧಾರಾಣಿ ಹಸಿವಿನಿಂದ ನರಳಿದ್ದರು. ಅಲ್ಲದೆ ನಟಿಯ ಪಾಸ್ ಪೋರ್ಟ್ ಕೂಡ ಪತಿ ಕಿತ್ತಿಟ್ಟುಕೊಂಡಿದ್ದರು.
ಹಾಗೋ ಹೋಗೋ ಮಾಡಿ ಅಮೆರಿಕಾದಿಂದ ವಾಪಸ್ ಆದ ಸುಧಾರಾಣಿ ಅವರಿಗೆ ಮದುವೆಯ ಬಗ್ಗೆ ಆಸಕ್ತಿಯೇ ಹೊರಟು ಹೋಗಿತ್ತು. ಈ ವೇಳೆ ಸುಧಾರಾಣಿ ಅವರಿಗೆ ಭರವಸೆಯಾಗಿ ನಿಂತಿದ್ದು ಗೋವರ್ಧನ್.
ಗೋವರ್ಧನ್ ಅವರನ್ನು ಮದುವೆಯಾದ ಬಳಿಕ ಸುಧಾರಾಣಿ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ. ಮಗಳು ನಿಧಿ ಈಗಾಗಲೇ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ.