ಸಿಹಿ ಗೆಣಸು – ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಇದರ ಭರಾಟೆ ಎಲ್ಲಾ ಕಡೆ ಹೆಚ್ಚು. ಏಕೆಂದರೆ ಆ ಸಮಯದಲ್ಲಿ ಕಡಲೆಕಾಯಿ, ಅವರೆಕಾಯಿ ಮತ್ತು ಸಿಹಿ ಗೆಣಸಿನ ಮಾತು ಎಲ್ಲರ ಬಾಯಲ್ಲಿ ಕೇಳಿ ಬರುತ್ತದೆ. ಸುಗ್ಗಿಯ ಸಂಭ್ರಮದಲ್ಲಿರುವ ಪ್ರತಿಯೊಬ್ಬರಿಗೂ ಸಿಹಿ ಗೆಣಸು ದೇಹಕ್ಕೆ ತಂಪೆರೆಯುತ್ತದೆ. ಆದರೆ ಸಿಹಿ ಗೆಣಸನ್ನು ಕೇವಲ ಸಂಕ್ರಾಂತಿಯ ಸಂದರ್ಭದಲ್ಲಿ ಮಾತ್ರ ತಿನ್ನಬೇಕು ಎಂದೇನಿಲ್ಲ.
ಮಾರುಕಟ್ಟೆಯಲ್ಲಿ ಎಲ್ಲಾ ಕಾಲದಲ್ಲೂ ಸಿಹಿ ಗೆಣಸು ನಮಗೆ ತಿನ್ನಲು ಸಿಗುತ್ತದೆ. ಹಾಗಾಗಿ ಇದರ ಆರೋಗ್ಯ ಲಾಭಗಳನ್ನು ನಾವು ನಮಗೆ ಬೇಕಾದ ಸಂದರ್ಭದಲ್ಲಿ ಪಡೆದುಕೊಳ್ಳಬಹುದು. ಹಲವಾರು ಆರೋಗ್ಯ ಸಮಸ್ಯೆಗಳಿಗೆ ಸಿಹಿ ಗೆಣಸಿನಲ್ಲಿ ಪರಿಹಾರವಿದೆ.
ಸಿಹಿ ಗೆಣಸು ಅಥವಾ ಸಿಹಿ ಆಲೂಗಡ್ಡೆಯಲ್ಲಿ ಅಧಿಕ ಪ್ರಮಾಣದ ಕ್ಯಾರೋಟಿನ್ ಅಂಶ ಮತ್ತು ವಿಟಮಿನ್ ‘ ಬಿ6 ‘ ಅಂಶ ಇರುವ ಕಾರಣ ನಮ್ಮ ದೇಹದಲ್ಲಿ ಏರುಪೇರಾಗುವ ಇನ್ಸುಲಿನ್ ಅಂಶದ ಕಾರಣದಿಂದ ಹೆಚ್ಚು ಕಡಿಮೆಯಾಗುವ ಮಧುಮೇಹದ ಸಮಸ್ಯೆಯನ್ನು ಸರಿ ಪಡಿಸಿ ಮಧುಮೇಹಕ್ಕೆ ಸಂಬಂಧ ಪಟ್ಟ ಹೃದಯದ ಮತ್ತು ಹೃದಯ ರಕ್ತ ನಾಳದ ಆರೋಗ್ಯ ಸಮಸ್ಯೆಗಳಿಗೆ ಮುಕ್ತಿ ಹಾಡುತ್ತದೆ.
ನೈಸರ್ಗಿಕವಾದ ಸಕ್ಕರೆ ಅಂಶ ಸಿಹಿ ಗೆಣಸಿನಲ್ಲಿ ಕಂಡು ಬರುವುದರಿಂದ ನಮ್ಮ ದೇಹಕ್ಕೆ ಇದರ ಸೇವನೆಯಿಂದ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಎಂದು ಹೇಳುತ್ತಾರೆ.
ನಮ್ಮ ದೇಹದಲ್ಲಿ ಆರೋಗ್ಯಕರವಾಗಿ ಬೆಳವಣಿಗೆ ಕಾಣಬೇಕಾಗಿರುವ ನಮ್ಮ ಮೂಳೆಗಳು, ಹಲ್ಲುಗಳು ನರನಾಡಿಗಳು ಮತ್ತು ಥೈರಾಯ್ಡ್ ಗ್ರಂಥಿಗೆ ವಿಟಮಿನ್ ‘ ಡಿ ‘ ಅಂಶ ಬಹಳಷ್ಟು ಅಗತ್ಯವಾಗಿ ಬೇಕಾಗುತ್ತದೆ.
ಆದರೆ ಸಿಹಿ ಗೆಣಸಿನಲ್ಲಿ ಅತ್ಯಧಿಕ ಪ್ರಮಾಣದ ವಿಟಮಿನ್ ‘ ಡಿ ‘ ಅಂಶ ಇರುವ ಕಾರಣ ನಮ್ಮ ಮೂಳೆಗಳಿಗೆ ಮತ್ತು ನಮ್ಮ ದೇಹದ ಇತರ ಅಂಗಾಂಗಗಳಿಗೆ ಇದರ ಜ್ಯೂಸ್ ತಯಾರು ಮಾಡಿ ಸೇವನೆ ಮಾಡುವುದರಿಂದ ಒಳ್ಳೆಯ ಆರೋಗ್ಯಕರ ಲಾಭವಿದೆ.
ಸಿಹಿ ಆಲೂಗಡ್ಡೆಯ ಜ್ಯೂಸ್ ಅಥವಾ ಸಿಹಿ ಗೆಣಸಿನ ಜ್ಯೂಸ್ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಹೊಟ್ಟೆಗೆ ಸಂಬಂಧ ಪಟ್ಟ ಅಜೀರ್ಣತೆ, ಮಲಬದ್ಧತೆ, ವಾಕರಿಕೆ, ವಾಂತಿ, ಭೇದಿ ಇತ್ಯಾದಿ ಸಮಸ್ಯೆಗಳು ಸಿಹಿ ಗೆಣಸಿನಲ್ಲಿರುವ ಹೆಚ್ಚಿನ ಪ್ರಮಾಣದ ನಾರಿನ ಅಂಶದಿಂದ ಪರಿಹಾರಗೊಳ್ಳುತ್ತವೆ.
ನಮ್ಮ ಜೀರ್ಣ ನಾಳದ ಸ್ವಚ್ಛತೆಯ ಸಮೇತ ಆರೋಗ್ಯಕರವಾದ ಜೀರ್ಣ ಶಕ್ತಿಯನ್ನು ನಾವು ಸಿಹಿ ಗೆಣಸಿನ ಜ್ಯೂಸ್ ನಿಂದ ಪಡೆಯಬಹುದು. ದೀರ್ಘ ಕಾಲದಿಂದ ಮಲಬದ್ಧತೆಯ ಸಮಸ್ಯೆಯನ್ನು ಎದುರಿಸು ತ್ತಿರುವವರಿಗೆ ಸಿಹಿ ಗೆಣಸಿನ ಜ್ಯೂಸ್ ತುಂಬಾ ಪ್ರಯೋಜನಕಾರಿ.