ಬೆಂಗಳೂರು: ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದ ಸಿಎಂ ಸಿದ್ದರಾಮಯ್ಯ, ಬಜೆಟ್ನಲ್ಲಿ ಬೆಂಗಳೂರಿಗೆ ಬರೊಬ್ಬರಿ 45 ಸಾವಿರ ಕೋಟಿ ರೂ. ಅನುದಾನ. ಬೆಂಗಳೂರು ವೈಟ್ ಟಾಪಿಂಗ್, ರಸ್ತೆ ಅಭಿವೃದ್ಧಿ, ನಗರೋತ್ಥಾನ, ತಾಜ್ಯ ನಿರ್ವಹಣೆ, ರಾಜಕಾಲುವೆ ತೆರವು & ದುರಸ್ತಿಗೆ ಅನುದಾನ, ಮೆಟ್ರೋ, ಬೆಂಗಳೂರು ಉಪನಗರ ರೈಲ್ವೆ ಯೋಜನೆ, ಬ್ರ್ಯಾಂಡ್ ಬೆಂಗಳೂರಿಗೆ ಆಧ್ಯತೆ ನೀಡುವ ನಿಟ್ಟಿನಲ್ಲಿ 45 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ.
ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಿದ್ದು, 172 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ. 19 ಕೆರೆಗಳಿಗೆ ನೀರು ತುಂಬಿಸಲು 770 ಕೋಟಿ ಹಣ ಮೀಸಲು ಇಡಲಾಗಿದೆ. ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ, ಕಲಬುರಗಿ ಹಾಗೂ ಯಾದಗಿರಿ ಸೇರಿ ಒಟ್ಟು 823,99 ಕೆರೆಗಳನ್ನು ತುಂಬಿಸಲು ನಿರ್ಧಾರ ಮಾಡಲಾಗಿದೆ.
- ಬಜೆಟ್ನಲ್ಲಿ ಬೆಂಗಳೂರಿಗೆ ಸುಮಾರು 45 ಸಾವಿರ ಕೋಟಿ ರೂ. ಅನುದಾನ ಘೋಷಿಸಿದ ಸಿದ್ದರಾಮಯ್ಯ
- ಬೆಂಗಳೂರು ವೈಟ್ ಟಾಪಿಂಗ್ , ರಸ್ತೆ ಅಭಿವೃದ್ದಿ ನಗರೋತ್ಥನ, ರಸ್ತೆ, ತಾಜ್ಯ ನಿರ್ವಾಹಣೆ, ರಾಜಕಾಲುವೆ ತೆರವು ಮತ್ತು ದುರಸ್ಥಿಗೆ 30 ಸಾವಿರ ಕೋಟಿ ರೂ.
- ಮೆಟ್ರೋ , ಬೆಂಗಳೂರು ಉಪನಗರ ರೈಲು ಯೋಜನೆ, ಬ್ರ್ಯಾಂಡ್ ಬೆಂಗಳೂರಿಗೆ ಆಧ್ಯತೆ ನೀಡುವ ನಿಟ್ಟಿನಲ್ಲಿ ಯೋಜನೆ.
- ತಾಜ್ಯ ನಿರ್ವಾಹಣೆ 1411 ಕೋಟಿ ರೂ. ಮೀಸಲು.
- ಮೇಟ್ರೋ 3ನೇ ಹಂತದ ಯೋಜನೆಗೆ 16328 ಕೋಟಿ ಯೋಜನ ವೆಚ್ಚ, 45 ಕಿ.ಮೀ ಉದ್ದದ ವಿಸ್ತೃತ ಯೋಜನೆ ವರದಿ ಕೇಂದ್ರ ಸಲ್ಲಿಸಲಾಗುವುದು.
- ಬೈಯಪ್ಪನಹಳ್ಳಿಯಲ್ಲಿ ಮೇಲು ಸೇತುವೆ ನಿರ್ಮಾಣಗೆ 263 ಕೋಟಿ ರೂ.
- ಬೆಂಗಳೂರು ಸಂಚಾರ ದಟ್ಟಣೆ ನಿರ್ವಾಹಣೆಗೆ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಯೋಜನೆಗೆ ಪ್ಲ್ಯಾನ್.
- ಮಳೆ ಅನಾಹುತ ತಪ್ಪಿಸಲು ರಾಜಕಾಲುವೆ ಒತ್ತುವರಿ ತೆರವು