ಕೆಲವೊಂದು ಆಹಾರಗಳನ್ನು ಮಕ್ಕಳಿಗೆ ನೀಡಬಾರದು. ಇದರಲ್ಲಿ ಫಾಸ್ಟ್ ಫುಡ್, ಜಂಕಪ್ ಫುಡ್ ಗಳಾಗಿರುವಂತಹ ಚಿಪ್ಸ್, ಬಟಾಟೆ ಚಿಪತ್ಸ್, ಡಿಮ್ ಸಿಮ್, ಬರ್ಗರ್ ಮತ್ತು ಫಿಜ್ಜಾ ಇತ್ಯಾದಿಗಳು. ಕೇಕ್, ಚಾಕಲೇಟ್, ಬಿಸ್ಕಿಟ್, ಡೌನಟ್ ಇತ್ಯಾದಿಗಳು. ಈ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದ ಉಪ್ಪಿನಾಂಶ, ಪರ್ಯಾಪ್ತ ಕೊಬ್ಬು, ಸಕ್ಕರೆ ಇದೆ. ಇದರಲ್ಲಿ ನಾರಿನಾಂಶ ಮತ್ತು ಪೋಷಕಾಂಶಗಳು ತುಂಬಾ ಕಡಿಮೆ ಇದೆ. ಅತಿಯಾಗಿ ಇದನ್ನು ಸೇವಿಸಿದರೆ ಆಗ ಮಕ್ಕಳಲ್ಲಿ ಬೊಜ್ಜು ಮತ್ತು ಟೈಪ್-2 ಮಧುಮೇಹ ಕಾಣಿಸ ಬಹುದು
ಕೆಫಿನ್
ಕೆಫಿನ್ ಇರುವಂತಹ ಪಾನೀಯಗಳನ್ನು ಮಕ್ಕಳಿಗೆ ನೀಡಬಾರದು. ಯಾಕೆಂದರೆ ಕೆಫಿನ್ ದೇಹದಲ್ಲಿ ಕ್ಯಾಲ್ಸಿಯಂ ಹೀರುವಿಕೆ ತಡೆಯುತ್ತದೆ. ಕೆಫಿನ್ ಉತ್ತೇಜಕವಾಗಿದ್ದು. ಇದು ಮಗುವಿಗೆ ಕೃತಕ ಶಕ್ತಿ ನೀಡುವುದು. ಕಾಫಿ, ಚಾ, ಶಕ್ತಿ ಪೇಯ ಮತ್ತು ಚಾಕಲೇಟ್ ನಿಂದ ಮಕ್ಕಳನ್ನು ದೂರವಿಡಿ.
ತಿಂಡಿ ಮತ್ತು ಸಿಹಿಗೆ ಕೆಲವು ಪರ್ಯಾಯಗಳು
ಆರೋಗ್ಯಕಾರಿ ಆಗಿರುವಂತಹ ತಿಂಡಿಗಳ ಆಯ್ಕೆ ಮಾಡಲು ಮಕ್ಕಳನ್ನು ಪ್ರೇರೇಪಿಸಿ. ಮುಖ್ಯವಾಗಿ ಬೀಜಗಳು, ಚೀಸ್, ಕೊಬ್ಬು ಕಡಿಮೆ ಇರುವ ಮೊಸರು ಮತ್ತು ತಾಜಾ ತರಕಾರಿ ಹಾಗೂ ಹಣ್ಣುಗಳು.ಊಟದ ಬಳಿಕ ಹೆಚ್ಚಾಗಿ ನಾವೆಲ್ಲರೂ ಸಿಹಿ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದೇವೆ. ಈ ವೇಳೆ ಹಣ್ಣು ಅಥವಾ ಮೊಸರನ್ನು ನೀಡಿದರೆ, ಅದು ತುಂಬಾ ಆರೋಗ್ಯಕಾರಿ ಆಗಿರುತ್ತದೆ