ದೆಹಲಿ: ದೇಶದೆಲ್ಲೆಡೆ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿ, ದೇಶದ ಜನತೆಗೆ ಸ್ವಾತಂತ್ರೋತ್ಸವದ ಶುಭಕೋರಿದರು.2024ರಲ್ಲಿ ಪ್ರಧಾನಿ ಮೋದಿ ಬಿಳಿಯ ಬಣ್ಣ ಕುರ್ತಾ ಹಾಗೂ ಪ್ಯಾಂಟ್ ಧರಿಸಿದ್ದರು, ಅದರ ಮೇಲೆ ನೀಲಿ ಬಣ್ಣದ ಓವರ್ಕೋಟ್ ಧರಿಸಿದ್ದರು.
ಕಿತ್ತಳೆ, ಹಸಿರು ಪಟ್ಟಿ ಇರುವ ರಾಜಸ್ಥಾನಿ ಪೇಟ ಧರಿಸಿದ್ದರು
ಬಳಿಕ ಸ್ವಾತಂತ್ರ್ಯ ದಿನವನ್ನುದ್ದೇಶಿಸಿ ಮಾತನಾಡಿದ ಮೋದಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಸ್ಮರಿಸಿದರು. ಈ ವೇಳೆ ಗಮನ ಸೆಳೆದಿದ್ದು ಅವರ ಪೇಟ. ಪ್ರತಿ ವರ್ಷವೂ ವೇಷಭೂಷಣಗಳಿಂದಲೇ ಗಮನ ಸೆಳೆಯುವ ನಮೋ, ಗುರುವಾರ ಕೆಂಪು ಕೋಟೆಯಲ್ಲಿ ರಾಜಸ್ಥಾನಿ ಲೆಹರಿಯಾ ಪ್ರಿಂಟ್ ಪೇಟಾ ಧರಿಸಿ ಗಮನ ಸೆಳೆದರು. ಶಿರಸ್ತ್ರಾಣವು ಉದ್ದವಾದ ಬಾಲದೊಂದಿಗೆ ಕಿತ್ತಳೆ, ಹಳದಿ ಮತ್ತು ಹಸಿರು ಬಣ್ಣಗಳ ಮಿಶ್ರಣದಿಂದ ಕೂಡಿದ ಪೇಟ ಧರಿಸಿದ್ದರು. ಇದರೊಂದಿಗೆ ಬಿಳಿ ಕುರ್ತಾ, ತಿಳಿ ನೀಲಿ ಬಣ್ಣದ ಬಂಧಗಾಲಾ ಜಾಕೆಟ್ ಹೆಚ್ಚು ಗಮನ ಸೆಳೆಯಿತು.
ಲೆಹರಿಯಾ, ಜವಳಿ ಟೈಡೈ ವಿನ್ಯಾಸವು ರಾಜಸ್ಥಾನದ ಸಾಂಪ್ರದಾಯಿಕ ವೈಭವಕ್ಕೆ ಮತ್ತೊಂದು ಹೆಸರಾಗಿದೆ. ಥಾರ್ ಮರುಭೂಮಿಯಲ್ಲಿ ನೆಲೆಸಿರುವ ಜನರು ಹೆಚ್ಚಾಗಿ ಇದನ್ನು ಧರಿಸುತ್ತಾರೆ.
2014ರಲ್ಲಿ ಕ್ಲಾಸಿಕ್ ರಾಜಸ್ಥಾನಿ ಶೈಲಿ, 2015ರಲ್ಲಿ ಕ್ರಿಸ್-ಕ್ರಾಸ್ ರಾಜಸ್ಥಾನಿ, 2016ರಲ್ಲಿ ರೋಮಾಂಚಕ ಟೈ-ಡೈ ಟರ್ಬನ್, 2017ರಲ್ಲಿ ಜ್ಯಾಮಿತೀಯ ಹಳದಿ ಪೇಟ, 2018ರಲ್ಲಿ ಜ್ಯಾಮಿತೀ ಕೇರಸಿ ಪೇಟ, 2019ರಲ್ಲಿ ಓಡ್ ಟು ಇಂಡಿಯನ್ ಹೆರಿಟೇಜ್ ಪೇಟ, 2020ರಲ್ಲಿ ಸ್ಟ್ರೈಕಿಂಗ್ ಕೇಸರಿ ಮತ್ತು ಕೆನೆ ಪೇಟ, 2021ರಲ್ಲಿ ರಾಜಸ್ಥಾನದ ಸಂಪ್ರದಾಯ ಮತ್ತು ಸ್ಥಿತಿಸ್ಥಾಪಕತ್ವದ ಪೇಟ ಹಾಗೂ ವಸ್ತ್ರ ಧರಿಸಿದರು. 2022ರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕೆಂಪು, ಕೇಸರಿ ಮಿಶ್ರಿತ ಪೇಟ ಧರಿಸಿದ್ದ ನಮೋ, 2023ರಲ್ಲಿ ಹಳದಿ, ಹಸಿರು ಮತ್ತು ಕೆಂಪು ಮಿಶ್ರಿತ ರಾಜಸ್ಥಾನಿ ಬಂಧನಿ ಮುದ್ರಣ ಪೇಟ ಧರಿಸಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು