ಕೆಲವು ಜನರಿಗೆ ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಬರುವುದಿಲ್ಲ. ಈ ಅನುಭವ ನಿಮಗೂ ಆಗಿರಬಹುದು. ಇದಕ್ಕೆ ಕಾರಣವೇನೆಂಬುದನ್ನು ವಿದುರರು ತಮ್ಮ ವಿದುರ ನೀತಿಯಲ್ಲಿ ತಿಳಿಸಿದ್ದಾರೆ. ಅದರಲ್ಲೂ ಈ ನಾಲ್ಕು ಜನರಿಗೆ ನಿದ್ರೆಯೆಂಬುದೇ ಬರುವುದಿಲ್ಲ. ಆ 4 ಜನರು ಯಾರೆಂಬುದನ್ನು ಇಲ್ಲಿ ತಿಳಿದುಕೊಳ್ಳೋಣ..
ಯಾರ ಮೇಲಾದರೂ ಅತಿಯಾದ ಭಯವನ್ನು ಹೊಂದಿರುವವರು:
ಯಾವುದಾದರೂ ವ್ಯಕ್ತಿ ತನಗಿಂತ ಶಕ್ತಿಶಾಲಿಯಾದ ಅಥವಾ ಅತ್ಯಂತ ಶಕ್ತಿಶಾಲಿಯಾದ ವ್ಯಕ್ತಿಯೊಂದಿಗೆ ದ್ವೇಷವನ್ನು ಹೊಂದಿದ್ದರೆ ಅವನು ನಿದ್ರೆಯನ್ನು ಕಳೆದುಕೊಳ್ಳುತ್ತಾನೆ. ಅವನಿಗೆ ಸರಿಯಾದ ಸಮಯಕ್ಕೆ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ದಿನದ ಪ್ರತಿಯೊಂದು ಕ್ಷಣವೂ ಆತ ತನ್ನ ಶತ್ರುಗಳ ಕುರಿತು ಯೋಚಿಸುತ್ತಲೇ ಇರುತ್ತಾನೆ. ಅವನ ಮನಸ್ಸು ಕೂಡ ಯಾವಾಗಲೂ ವಿಚಲಿತ ಸ್ಥಿತಿಯಲ್ಲಿರುತ್ತದೆ. ಅವನು ಯಾವುದೇ ಕೆಲಸವನ್ನು ಮಾಡಬೇಕಾದರೂ ಅವನ ಗಮನ ಕೇವಲ ಶತ್ರುವಿನ ಕಡೆಗೆ ಇರುತ್ತದೆ. ಎಲ್ಲಿಗೆ ಹೋದರೂ ಅವನ ಮನಸ್ಸಿನಲ್ಲಿ ಯಾರೋ ತನ್ನನ್ನು ಹಿಂಬಾಲಿಸಿಕೊಂಡು ಬರುತ್ತಿದ್ದಾರೆ ಎನ್ನುವ ಭಾವನೆ ಮೂಡುತ್ತದೆ.
2. ಎಲ್ಲವನ್ನೂ ಕಳೆದುಕೊಂಡವನು:
ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಮನೆ, ಆಸ್ತಿ, ಕುಟುಂಬ, ಹಣ, ಹೆಂಡತಿ ಎಲ್ಲವನ್ನೂ ಕಳೆದುಕೊಂಡವನಿಗೆ ರಾತ್ರಿ ಸಮಯದಲ್ಲಿ ನಿದ್ರೆ ಎನ್ನುವುದು ಬರುವುದಿಲ್ಲ. ಇಂತಹ ಜನರು ತಾವು ಕಳೆದುಕೊಂಡಿರುವ ವಸ್ತುಗಳನ್ನು ಮರಳಿ ಪಡೆಯುವುದರ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಅವುಗಳನ್ನು ಪಡೆದುಕೊಳ್ಳಲು ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನಿಸುತ್ತಲೇ ಇರುತ್ತಾರೆ. ಈ ದೊಡ್ಡ ಚಿಂತೆಯಿಂದಾಗಿ ಅವರಿಗೆ ರಾತ್ರಿ ಸಮಯದಲ್ಲಿ ನಿದ್ರೆ ಎನ್ನುವುದು ಬರುವುದಿಲ್ಲ ಎಂದು ವಿದುರರು ತಿಳಿಸಿದ್ದಾರೆ
ಕಾಮ ಭಾವನೆಗಳನ್ನು ಹೊಂದಿರುವವನು:
ಯಾರು ಹೆಚ್ಚಾಗಿ ತಮ್ಮನ್ನು ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೋ ಅವರಿಗೆ ರಾತ್ರಿ ಸಮಯದಲ್ಲಿ ನಿದ್ರೆ ಬರುವುದಿಲ್ಲ. ಅವರು ಯಾವಾಗಲೂ ಲೈಂಗಿಕ ಕ್ರಿಯೆಯ ಕುರಿತಾಗಿಯೇ ಯೋಚನೆ ಮಾಡುತ್ತಿರುತ್ತಾರೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಬಯಕೆಯಿಂದ ಅವರ ಮನಸ್ಸು ವಿಚಲಿತಗೊಂಡಿರುತ್ತದೆ. ಈ ಕಾಮ ಭಾವನೆಯು ಅವನಿಗೆ ಮಲಗಲು ಬಿಡುವುದಿಲ್ಲ.
4. ಕಳ್ಳತನ ಮಾಡಲು ಬಯಸುವವರು:
ಪರರ ಅಥವಾ ಇತರರ ಹಣ, ಚಿನ್ನ ಮತ್ತು ಬೆಲೆಬಾಳುವ ವಸ್ತುಗಳನ್ನು ಕದ್ದು ಮಾರಿಕೊಂಡು ಅದರಿಂದ ಜೀವನವನ್ನು ಸಾಗಿಸುವ ವ್ಯಕ್ತಿ ನಿದ್ರೆಯನ್ನು ಮಾಡುವುದಿಲ್ಲ. ರಾತ್ರಿಯಾಗುತ್ತಿದ್ದಂತೆ ಆ ವ್ಯಕ್ತಿಯ ಮನಸ್ಸಿನಲ್ಲಿ ಕಳ್ಳತನ ಭಾವನೆ ಜಾಗೃತಗೊಳ್ಳುತ್ತದೆ. ಈ ಭಾವನೆಯು ಅವನಿಗೆ ಮಲಗಲು ಅವಕಾಶ ಮಾಡಿಕೊಡುವುದಿಲ್ಲ. ಕಳ್ಳನಾದವನು ರಾತ್ರಿಯಿಡೀ ಜಾಗರಣೆ ಮಾಡಬೇಕಾಗುತ್ತದೆ ಎಂದು ಮಹಾತ್ಮ ವಿದುರರು ಹೇಳಿದ್ದಾರೆ.