ಬೆಂಗಳೂರು:- ಸಿಲಿಕಾನ್ ಸಿಟಿಯಲ್ಲಿ ನೀರಿನ ಅಭಾವ ಹೆಚ್ಚಾದ ಹಿನ್ನೆಲೆ ಜನರು ಯಾವೆಲ್ಲ ರೀತಿಯಲ್ಲಿ ನೀರನ್ನು ಉಳಿಸಬಹುದೋ, ಮಿತ ಬಳಕೆ ಮಾಡಬಹುದೋ ಆ ಎಲ್ಲ ವಿಧಾನಗಳನ್ನು ಅನುಸರಿಸಲು ಮುಂದಾಗುತ್ತಿದ್ದಾರೆ.
ಜನರು ಯಾವೆಲ್ಲ ರೀತಿಯಲ್ಲಿ ನೀರನ್ನು ಉಳಿಸಬಹುದೋ, ಮಿತ ಬಳಕೆ ಮಾಡಬಹುದೋ ಆ ಎಲ್ಲ ವಿಧಾನಗಳನ್ನು ಅನುಸರಿಸಲು ಮುಂದಾಗುತ್ತಿದ್ದಾರೆ.
ನಗರದಾದ್ಯಂತ ಹಲವಾರು ಅಪಾರ್ಟ್ಮೆಂಟ್ಗಳು ಮತ್ತು ಪ್ರದೇಶಗಳು ಜಲ ಮಂಡಳಿಯ ಮಾರ್ಗಸೂಚಿಗೆ ಅನುಸಾರವಾಗಿ ತಾತ್ಕಾಲಿಕವಾಗಿ ಈಜುಕೊಳಗಳನ್ನು ತಾತ್ಕಾಲಿಕವಾಗಿ ಮುಚ್ಚಿವೆ. ಅಲ್ಲದೆ, ನಲ್ಲಿಗಳಿಗೆ ಏರಿಯೇಟರ್ಗಳನ್ನು ಸ್ಥಾಪಿಸುವ ಮೂಲಕ ನೀರನ್ನು ಉಳಿಸಲು ಕ್ರಮಗಳನ್ನು ಕೈಗೊಂಡಿವೆ.
ಆರ್ಟಿ ನಗರದ ಅಪಾರ್ಟ್ಮೆಂಟ್ ಸಮುಚ್ಛಯ ವೈಟ್ಹೌಸ್ ನೀರನ್ನು ಸಂರಕ್ಷಿಸಲು ಮತ್ತು ಕುಡಿಯುವ ನೀರಿನ ವಿವೇಚನಾರಹಿತ ಬಳಕೆಯನ್ನು ತಪ್ಪಿಸಲು ಹೂವಿನ ದಳಗಳನ್ನು ಬಳಸಿ ನೀರಿಲ್ಲದ ಹೋಳಿಯನ್ನು ಆಚರಿಸಿದೆ.
ನಮ್ಮ ಅಪಾರ್ಟ್ಮೆಂಟ್ನಲ್ಲಿ ಹಲವಾರು ವರ್ಷಗಳಿಂದ ಮಳೆ ನೀರು ಕೊಯ್ಲು ಮಾಡಲಾಗುತ್ತಿದೆ. ಇದರಿಂದಾಗಿಯೇ ನಮ್ಮ ಅಪಾರ್ಟ್ಮೆಂಟ್ ನೀರಿನ ವಿಚಾರದಲ್ಲಿ ಸ್ವಾವಲಂಬಿಯಾಗಲು ಸಾಧ್ಯವಾಯಿತು. ಹೀಗಾಗಿ ಇನ್ನೂ ತೀವ್ರವಾದ ನೀರಿನ ಕೊರತೆಯನ್ನು ಎದುರಿಸುವಂತಾಗಿಲ್ಲ ಎಂದು ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಶನ್ (ಬಿಎಎಫ್) ಸದಸ್ಯೆ ವಿದ್ಯಾ ಗೊಗ್ಗಿ ತಿಳಿಸಿದ್ದಾರೆ.
ಈ ಮಧ್ಯೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮುಂದಿನ ಮುಂಗಾರಿನಲ್ಲಿಯಾದರೂ ಮಳೆನೀರು ಕೊಯ್ಲು ಅಳವಡಿಸುವಂತೆ ನಾಗರಿಕರಿಗೆ ಸೂಚಿಸಿದೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನೂ ಮಾಡುತ್ತಿದೆ.