ಪಾರ್ಟಿ, ಶಾಪಿಂಗ್ ಮತ್ತು ಆಫೀಸ್ಗಳಲ್ಲಿ ಹೈ ಹೀಲ್ಸ್ ಧರಿಸಲು ಯುವತಿಯರು ಹೆಚ್ಚು ಇಷ್ಟ ಪಡುತ್ತಾರೆ. ಹೀಗಿರುವಾಗ ತುಂಬಾ ಹೊತ್ತು ಹೈ ಹೀಲ್ಸ್ ಧರಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಯಾವೆಲ್ಲಾ ತೊಂದರೆಗಳು ಕಾಣಿಸಿಕೊಳ್ಳಬಹುದು ಎಂಬುದು ಈ ಕೆಳಗಿನಂತಿದೆ. ಎಚ್ಚರವಿರಲಿ.
ಹೈ ಹೀಲ್ಸ್ ಧರಿಸಿ ನಿರಂತರ ಓಡಾಡುವುದರಿಂದ ಪಾದಗಳಿಗೆ ಒತ್ತಡ ಉಂಟಾಗುತ್ತದೆ. ಹಿಮ್ಮಡಿ ನೋವು, ಜತೆಗೆ ಕಾಲುಗಳ ನೋವು ಕಾಣಿಸಿಕೊಳ್ಳುತ್ತದೆ. ನಿಮ್ಮ ಮೃದುವಾದ ಪಾದಗಳು ಊದಿಕೊಳ್ಳುತ್ತವೆ ಇದು ಹೆಚ್ಚು ನೋವನ್ನು ಉಂಟು ಮಾಡುತ್ತದೆ. ಆರೋಗ್ಯಕ್ಕೆ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿಯಿರಿ.
ಕಾಲುಗಳಲ್ಲಿ ನೋವು ಹೈ ಹೀಲ್ಸ್ಅನ್ನು ಗಂಟೆಗಳ ಕಾಲ ಧರಿಸುವುದರಿಂದ ಸೊಂಟ, ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಕಾರಣದಿಂದ ಸ್ನಾಯುಗಳಲ್ಲಿ ಒತ್ತಡ ಉಂಟಾಗುತ್ತದೆ. ಮೊಣಕಾಲುಗಳು ಮತ್ತು ಸೊಂಟದ ನೋವು ಅತಿರೇಕಕ್ಕೂ ಹೋಗಬಹುದು. ಹಾಗಾಗಿ ಆದಷ್ಟು ಹೈ ಹೀಲ್ಸ್ ಧರಿಸುವುದನ್ನು ತಪ್ಪಿಸಿ.
ಮಂಡಿ ನೋವು ಎತ್ತರದ ಹಿಮ್ಮಡಿಯ ಪಾದರಕ್ಷೆಗಳನ್ನು ಧರಿಸುವುದರಿಂದ ಬೆನ್ನು ಮೂಳೆಯ ಮೇಲೆ ಒತ್ತಡ ಉಂಟಾಗುತ್ತದೆ. ಅದು ಮಂಡಿಗಳ ನೋವನ್ನೂ ಉಂಟು ಮಾಡಬಹುದು. ಜತೆಗೆ ಸ್ನಾಯುಗಳ ಸೆಳೆತ, ರಕ್ತದ ಒತ್ತಡಂದತಹ ಸಮಸ್ಯೆಯನ್ನು ಉಂಟು ಮಾಡಬಹುದು.
ಉಗುರು ಬೆಚ್ಚಗಿನ ನೀರಿಲ್ಲಿ ಕೆಲಹೊತ್ತು ಪಾದಗಳನ್ನು ಒಟ್ಟುಕೊಳ್ಳಿ. ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ. ಇದು ನಿಮ್ಮ ಪಾದದ ಉರಿಯನ್ನು ಮತ್ತು ಪಾದದ ಊತವನ್ನು ಕಡಿಮೆ ಮಾಡುತ್ತದೆ. ಇದರಿಂದ ನಿಮ್ಮ ಕಾಲಿನ ಉಗುರು ಸ್ವಚ್ಛವಾಗಲು ಜತೆಗೆ ಉಗುರುಗಳು ಹೊಳಪು ಪಡೆಯಲು ಸಹಾಯಕವಾಗಿದೆ.