ತುಮಕೂರು: ಆ ಬಾಲಕಿ ಹೆಸರು ಜೀವಿತಾ ಮೊನ್ನೆಯಷ್ಟೆ ಪಿಯುಸಿ ಮುಗಿಸಿದ್ದಾಳೆ. ಪಿಯುಸಿ ಮುಗಿಸಿ ಊರಿನಲ್ಲಿದ್ದ ಈಕೆಗೆ ಯುವಕನೋರ್ವ ಪ್ರೀತಿ ಮಾಡುತ್ತಿದ್ದನಂತೆ. ಜೊತೆಗೆ ಪ್ರೀತಿ ಮಾಡು ಎಂದು ಪದೇ ಪದೇ ಪೀಡಿಸುತ್ತಿದ್ದನಂತೆ. ಇದಕ್ಕೆ ಒಲ್ಲೆ ಎಂದಿದ್ದಕ್ಕೆ ಪ್ರೀಯಕರ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಹೌದು ತುಮಕೂರು(Tumakuru) ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಭಟ್ಟರಹಳ್ಳಿ ಗ್ರಾಮದಲ್ಲಿ ಸಿದ್ದರಾಮೇಶ್ವರ ದೇವಾಲಯ ಪೂಜಾರಿಯಾಗಿರುವ ವಿನಯ್, ಗ್ರಾಮದ ಅಪ್ರಾಪ್ತ ಬಾಲಕಿಯಾಗಿರುವ ಜೀವಿತಾಳನ್ನ ಒಂದು ವರ್ಷದಿಂದ ಲವ್ ಮಾಡುತ್ತಿದ್ದನಂತೆ. ಹೀಗಾಗಿ ನಿನ್ನೆ(ಮೇ.11) ಬೆಳಿಗ್ಗೆ ‘ನಾನು ನಿನ್ನ ಇಷ್ಟಪಡ್ತಿನಿ, ನೀನು ನನ್ನ ಪ್ರೀತಿಸು ಎಂದು ಹಿಂಸೆ ನೀಡಿದ್ದನಂತೆ. ಆಗ ಹುಡುಗಿ ಬೇಡ ಎಂದು ನಿರಾಕರಿಸಿದ್ದಕ್ಕೆ ಕಪಾಳಕ್ಕೆ ಹೊಡೆದನಂತೆ. ಬಳಿಕ ಅಲ್ಲಿಂದ ಏನಾದರೂ ಮಾಡ್ತಾನೆಂದು ತಪ್ಪಿಸಿಕೊಂಡು ಓಡಿದಾಗ ಹಿಂಬಾಲಿಸಿ ಬಂದು ಅಟ್ಯಾಕ್ ಮಾಡಿದ್ದಾನಂತೆ.
ಇನ್ನು ಅಟ್ಯಾಕ್ ಮಾಡಿದ ಕೂಡಲೇ ಮನೆಯವರು ಗಮನಿಸಿ, ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ಆ ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ವಿನಯ್ ಮಚ್ಚಿನಿಂದ ಕತ್ತಿನ ಭಾಗಕ್ಕೆ ಹಲ್ಲೆ ಮಾಡಿದ್ದು, ಸ್ವಲ್ಪ ಮಟ್ಟಿಗೆ ಗಂಭೀರ ಗಾಯವಾಗಿದೆ. ಸದ್ಯ ಚಿಕಿತ್ಸೆ ಮುಂದುವರೆದಿದೆ.