PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

Bombay jayashree: ಪ್ರಜ್ಞಾಹೀನ ಸ್ಥಿತಿಯಲ್ಲಿ ಖ್ಯಾತ ಗಾಯಕಿ ಬಾಂಬೆ ಜಯಶ್ರೀ ಪತ್ತೆ

March 24, 2023

Ajith Kumar: ತಮಿಳು ನಟ ಅಜಿತ್ ಕುಮಾರ್ ತಂದೆ ಸುಬ್ರಮಣಿಯಂ ನಿಧನ

March 24, 2023

ಹಿಂಡೆನ್ ಬರ್ಗ್ ವರದಿ ಬಳಿಕ ಜಾಕ್ ಡೋರ್ಸಿ ಸಂಪತ್ತಿನ ಮೌಲ್ಯ ಭಾರೀ ಕುಸಿತ

March 24, 2023
Facebook Twitter Instagram
Friday, March 24
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » ಟೀ ಬಿಸಿ ಇಲ್ಲ ಎಂದಿದ್ದಕ್ಕೆ ಅತ್ತೆಯನ್ನು ಸೊಸೆ ಏನು ಮಾಡಿದ್ದಾಳೆ ಗೊತ್ತಾ..?
ರಾಷ್ಟ್ರೀಯ Prajatv KannadaBy Prajatv KannadaMarch 14, 2023

ಟೀ ಬಿಸಿ ಇಲ್ಲ ಎಂದಿದ್ದಕ್ಕೆ ಅತ್ತೆಯನ್ನು ಸೊಸೆ ಏನು ಮಾಡಿದ್ದಾಳೆ ಗೊತ್ತಾ..?

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಚೆನ್ನೈ: ಬಿಸಿ ಟೀ (Tea) ತಂದುಕೊಡದ್ದಕ್ಕೆ ಗದರಿದ ಅತ್ತೆಯನ್ನೇ ಸೊಸೆ ರಾಡ್‍ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಕೊಲೆಯಾದವರನ್ನು ವಿರಾಲಿಮಲೈ ಮೂಲದ ಪಳನಿಯಮ್ಮಾಳ್ ಎಂದು ಗುರುತಿಸಲಾಗಿದೆ. ಇವರು ತಮಿಳುನಾಡಿನ ಪುದುಕೋಟೆ (Pudukote Tamilnadu) ಜಿಲ್ಲೆಯವರು. ಇವರನ್ನು ಸೊಸೆ ಕನಕು ಕೊಲೆ ಮಾಡಿದ್ದಾಳೆ.

ನಡೆದಿದ್ದೇನು..?: ಪಳನಿಯಮ್ಮಾಳ್‍ಗೆ ಟೀ ತರಲು ಸೊಸೆಯನ್ನು ಅಂಗಡಿಗೆ ಕಳುಹಿಸುತ್ತಿದ್ದಳು. ಹಿಂದಿನ ದಿನವೂ ಇದೇ ರೀತಿಯಲ್ಲಿ ಪಳನಿಯಮ್ಮಾಳ್ ತನ್ನ ಸೊಸೆಯನ್ನು ಟೀ ತರಲು ಕಳುಹಿಸಿದ್ದರು. ಆದರೆ ಅಂದು ಅತ್ತೆ ಪಳನಿಯಮ್ಮಾಳ್ ಬಿಸಿ ಟೀ ತಂದಿಲ್ಲ ಎಂದು ಗದರಿಸಿದ್ದಾಳೆ. ಇದರಿಂದ ಕೋಪಗೊಂಡ ಸೊಸೆ ಕನಕು ಸೈಕಲ್ ರಿಪೇರಿಗೆ ಬಳಸುವ ಕಬ್ಬಿಣದ ರಾಡ್‍ನಿಂದ ಪಳನಿಯಮ್ಮಾಳ್ ತಲೆಗೆ ಜೋರಾಗಿ ಹೊಡೆದಿದ್ದಾಳೆ. ಇದರಿಂದ ಪಳನಿಯಮ್ಮಾಳ್ ತೀವ್ರ ರಕ್ತಸ್ರಾವದಿಂದಾಗಿ ಮೂರ್ಛೆ ಹೋಗಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಅತ್ತೆ ಪಳನಿಯಮ್ಮಾಳ್‍ಳನ್ನು ನೆರೆಹೊರೆಯವರು ಸೇರಿ ಸ್ಥಳೀಯ ವಿರಾಲಿಮಲೈ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇಲ್ಲಿ ಚಿಕಿತ್ಸೆ ಫಲಿಸಿದ ಪರಿಣಾಮ ಸಂಬಂಧಿಕರು ಪಳನಿಮ್ಮಾಳ್ ಅವರನ್ನು ತಿರುಚ್ಚಿ ಆಸ್ಪತ್ರೆಗೆ ದಾಖಲಿದ್ದಾರೆ. ಅಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಅಸ್ವಸ್ಥ ಸೊಸೆ: ಮಾನಸಿಕ ಅಸ್ವಸ್ಥೆಯಾಗಿರುವ ಕನಕುಗೆ ಪ್ರತಿನಿತ್ಯ ಔಷಧಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ಆಕೆ ಮಾತ್ರೆ ತೆಗದುಕೊಂಡಿರಲಿಲ್ಲ. ಹೀಗಾಗಿ ಅತ್ತೆ ಗದರಿದ್ದಕ್ಕೆ ಸಿಟ್ಟು ಬಂದು ಕಬ್ಬಿಣದ ರಾಡ್‍ನಿಂದ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ್ದಾಳೆ. ಘಟನೆ ಬಳಿಕ ಕನಕು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

 

Share. Facebook Twitter WhatsApp Pinterest LinkedIn Tumblr Telegram Email

Related Posts

ದೇಶದೆಲ್ಲೆಡೆ ಪವಿತ್ರ ರಂಜಾನ್ ಉಪವಾಸ ಆರಂಭ: ಟ್ವೀಟ್ ಮೂಲಕ ಶುಭ ಹಾರೈಸಿದ ಪ್ರಧಾನಿ ಮೋದಿ

March 24, 2023

5ನೇ ತರಗತಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – ಒಬ್ಬನ ಬಂಧನ

March 24, 2023

ಅದಾನಿ ಬಳಿಕ ಹೊಸ ವರದಿ ಬಿಡುಗಡೆಯ ಸೂಚನೆ ಕೊಟ್ಟ ಹಿಂಡೆನ್‍ಬರ್ಗ್.

March 23, 2023

ಎಸ್.ಎಂ.ಕೃಷ್ಣ ಸೇರಿದಂತೆ 54 ಗಣ್ಯರಿಗೆ ‘ಪದ್ಮ’ ಪ್ರಶಸ್ತಿ ಪ್ರದಾನ

March 23, 2023

ವಿಜಯ ಮಲ್ಯ ಆಸ್ತಿ ಮೌಲ್ಯ ಸಾಲ ತೀರಿಸುವಷ್ಟಿದೆ ಎಂದ ಸಿಬಿಐ

March 23, 2023

ತಮಿಳುನಾಡಿನ ಪಟಾಕಿ ಗೋದಾಮಿನಲ್ಲಿ ಭಾರಿ ಸ್ಫೋಟ: 7 ನಿಧನ

March 22, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.