ಅಕ್ಕಿಯು ಅನೇಕ ಜನರಿಗೆ, ವಿಶೇಷವಾಗಿ ಏಷ್ಯನ್ನರಿಗೆ ಪ್ರಮುಖ ಆಹಾರವಾಗಿದೆ ಮತ್ತು ಇದು ನಮ್ಮ ದೈನಂದಿನ ಆಹಾರದ ಅವಿಭಾಜ್ಯ ಅಂಗವಾಗಿದೆ. ಎಷ್ಟೋ ಜನ ಅನ್ನ ತಿನ್ನದೆ ಇರಲಾರರು. ಆದರೆ, ಅನ್ನದ ಮೇಲೆ ನಮ್ಮ ಅವಲಂಬನೆ ಯಾವಾಗಲೂ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.
ತೂಕ ಇಳಿಸಲು ಬಯಸುವವರು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಇಳಿಸಬೇಕೆಂದು ಬಯಸುವವರು ಅನ್ನವನ್ನು ದೂರವಿಟ್ಟರೆ ಒಳ್ಳೆಯದು. ಅನ್ನದಲ್ಲಿ ಕಾರ್ಬ್ಸ್ ಅಂಶವು ಹೆಚ್ಚಾಗಿರುವ ಕಾರಣದಿಂದಾಗಿ ಇದನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಆದರೆ ಇದನ್ನು ಸರಿಯಾದ ಸಮಯದಲ್ಲಿ ಸೇವನೆ ಮಾಡಿದರೆ, ಆಗ ಇದು ಆರೋಗ್ಯಕ್ಕೆ ಕೂಡ ಒಳ್ಳೆಯದು. ಅನ್ನವನ್ನು ತೂಕ ಇಳಿಸಿಕೊಳ್ಳಲು ಬಳಸಬಹುದೇ?
ಸಾಮಾನ್ಯವಾಗಿ ನಾವೆಲ್ಲರೂ ಕೂಡ ಅನ್ನವನ್ನು ಬೇಯಿಸುವ ಮೊದಲ ಅಕ್ಕಿಯ ಮೇಲ್ಭಾಗದಲ್ಲಿ ಕಂಡುಬರುವ ಸ್ಟಾರ್ಚ್ ಅಂಶವನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ತೊಳೆದು ತೆಗೆದು ಬಿಡುವುದು. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಅಕ್ಕಿಯ ಸ್ಟಾರ್ಚ್ ಅಂಶದಲ್ಲಿ ನಮ್ಮ ಆರೋಗ್ಯ ವನ್ನು ಆರೋಗ್ಯವನ್ನು ರಕ್ಷಣೆ ಮಾಡುವಂತಹ ಮತ್ತು ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ದೂರ ಮಾಡುವಂತಹ ಆರೋಗ್ಯ ಗುಣಗಳು, ಇದರಲ್ಲಿ ಕಂಡು ಬರುತ್ತದೆಯಂತೆ. ಆದರೆ ಆದರೆ ಬಹುತೇಕ ಜನರು ಅಕ್ಕಿಯನ್ನು ಚೆನ್ನಾಗಿ ಸ್ವಚ್ಛ ಮಾಡಿ ಇಂತಹ ಒಂದು ನೈಸರ್ಗಿಕ ಸೌಲಭ್ಯದಿಂದ ವಂಚಿತರಾಗುತ್ತಾರೆ.
ಹಾರ್ಮೋನ್ ತರಬೇತುದಾರ ಪೂರ್ಣಿಮಾ ಪೆರಿ ಪ್ರಕಾರ, ಏನು ತಿನ್ನಬೇಕು ಎನ್ನುವ ಬಗ್ಗೆ ತುಂಬಾ ಆಲೋಚನೆ ಮಾಡಿದರೆ, ಆಗ ಇದರಿಂದ ಒತ್ತಡ ಬೀಳುವುದು. ಒತ್ತಡವು ಆಹಾರಕ್ಕಿಂತಲೂ ಹೆಚ್ಚು ಕೆಟ್ಟ ಪರಿಣಾಮ ಬೀರಬಹುದು.
ಆಹಾರದ ಸಮಯದ ಬಗ್ಗೆ ಒತ್ತಡ ಹೇರಿದಾಗ ಏನಾಗುವುದು?: ಒತ್ತಡವು ದೇಹದ ಮೇಲೆ ಹಲವಾರು ಬಗೆಯಿಂದ ಪರಿಣಾಮ ಬೀರುವುದು. ಇದನ್ನು ಊಹಿಸಲು ಕೂಡ ಆಗದು.
ರಾತ್ರಿಯ ಸಮಯದಲ್ಲಿ: ಇನ್ನು ರಾತ್ರಿಯ ಸಮಯದಲ್ಲಿ ಅನ್ನ ಸೇವನೆ ಮಾಡಿದರೆ ನಿದ್ದೆಯ ಗುಣಮಟ್ಟವು ಕೂಡ ಹೆಚ್ಚಾಗುವುದು ಎಂದು ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲದೆ ದೇಹದ ತೂಕವನ್ನು ಅಚ್ಚುಕಟ್ಟಾಗಿ ಕಾಯ್ದುಕೊಳ್ಳಲು ನೆರವಾಗುತ್ತದೆ. ಇದರ ಜೊತೆಗೆ ಬೆಳಗಿನ ಸಮಯದಲ್ಲಿ ಹಾಸಿಗೆಯಿಂದ ಮೇಲೆದ್ದ ಸಂದರ್ಭದಲ್ಲಿ ಹೆಚ್ಚು ತಾಜಾತನದಿಂದ ಕೂಡಿರಲು ನೆರವಾಗುತ್ತದೆ.
ಯಾವಾಗ ಮತ್ತು ಏನು ತಿನ್ನಬೇಕು ಎನ್ನುವ ಬಗ್ಗೆ ಅತಿಯಾಗಿ ಚಿಂತೆ ಮಾಡಿದರೆ, ಆಗ ಇದರಿಂದ ಒತ್ತಡದ ಹಾರ್ಮೋನ್ ಕಾರ್ಟಿಸಾಲ್ ಮಟ್ಟವು ಏರಿಕೆ ಆಗುವುದು. ಕಾರ್ಟಿಸಾಲ್ ಮಟ್ಟವು ಏರಿಕೆಯಾದರೆ, ಆಗ ಇದರಿಂದ ಕೊಬ್ಬು ಶೇಖರಣೆ ಅತಿಯಾಗುವುದು, ಸಕ್ಕರೆ ತಿನ್ನುವ ಬಯಕೆ ಏರುವುದು ಮತ್ತು ದೇಹದಲ್ಲಿ ಪ್ರತಿರೋಧಕ ಶಕ್ತಿ ಕುಗ್ಗುವುದು.
ಇನ್ಸುಲಿನ್ ಪ್ರಭಾವ ಕುಂದುವುದು:
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಂತಹ ಹಾರ್ಮೋನ್ ಇನ್ಸುಲಿನ್ ಪರಿಣಾಮವು ಒತ್ತಡದಿಂದಾಗಿ ಕಡಿಮೆ ಆಗುವುದು. ಇದ ರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ ಆಗುವುದು ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾಡುವುದು.
ಜೀರ್ಣಕ್ರಿಯೆಗೆ ಪರಿಣಾಮ ಬೀರಬಹುದು!
ಒತ್ತಡವು ಜೀರ್ಣಕ್ರಿಯೆ ಮೇಲೆ ನೇರವಾಗಿ ಪರಿಣಾಮ ಬೀರುವುದು. ಇದರಿಂದ ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ದೀರ್ಘಕಾಲಿಕ ಹೊಟ್ಟೆಯ ಸಮಸ್ಯೆಗಳು ಬರುವುದು. ಜೀರ್ಣಕ್ರಿಯೆಯು ಕೆಟ್ಟದಾಗಿದ್ದರೆ ಆಗ ಇದರಿಂದ ಪೋಷಕಾಂಶಗಳು ದೇಹಕ್ಕೆ ಸರಿಯಾಗಿ ಸಿಗದೆ ಇರುವುದು.
ಆಹಾರದ ಸಮಯದ ಬಗ್ಗೆ ಚಿಂಎ ಮಾಡಿದರೆ ಆಗ ಇದರಿಂದ ದೇಹದ ನೈಸರ್ಗಿಕ ಆವರ್ತನದ ಮೇಲೆ ಪರಿಣಾಮ ಉಂಟಾಗಬಹುದು. ಇದರಿಂದ ನಿದ್ರೆ ಬರದೇ ಇರಬಹುದು ಅಥವಾ ನಿದ್ರೆಯಿಂದ ಎಚ್ಚರಿಕೆ ಆಗಬಹುದು. ನಿದ್ರೆಯು ಕಡಿಮೆಯಾದರೆ ಆಗ ಇದರಿಂದ ಪ್ರತಿರೋಧಕ ಶಕ್ತಿ ಕುಂದುವುದು ಮತ್ತು ಅನಾರೋಗ್ಯಕಾರಿ ಆಹಾರ ಅಭ್ಯಾಸಕ್ಕೆ ಇದು ಕಾರಣವಾಗುವುದು.
ದೀರ್ಘಕಾಲಿಕ ಒತ್ತಡದಿಂದಾಗಿ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರಾನ್ ಎನ್ನುವ ಹಾರ್ಮೋನ್ ಪರಿಣಾಮ ಬೀರುವುದು. ಇದರಿಂದಾಗಿ ಅಸಾಮಾನ್ಯ ಋತುಚಕ್ರ, ಮನಸ್ಥಿತಿ ಬದಲಾವಣೆ ಮತ್ತು ಇತರ ಸಮಸ್ಯೆಗಳು ಬರಬಹುದು.