ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜನಸಂಖ್ಯೆಗೆ ಏನೂ ಕಡಿಮೆ ಇಲ್ಲ ಹಾಗೆ ಅದೇ ರೀತಿ ವೆಹಿಕಲ್ ಗಳಿಗೂ ಕೂಡ ಕಮ್ಮಿ ಇಲ್ಲ ಅಂತಾನೇ ಹೇಳಬಹುದು. ಮನೆಗೊಬ್ಬರಿಗೊಂದು ವಾಹನ ಇಟ್ಟುಕೊಂಡಿದ್ದಾರೆ. ಇದರಿಂದ ಕೆಲವೆಡೆ ಟ್ರಾಫಿಕ್ ಜಾಂ ಬಗ್ಗೆ ಕೇಳೋದೆ ಬೇಡ ಸುಸ್ತಾಗಿ ಹೋಗುತ್ತೆ!
ಬಿಬಿಎಂಪಿ ವ್ಯಾಪ್ತಿಯಲ್ಲಿನ 191 ಕಿ.ಮೀ ಉದ್ದದ 12 ಹೈಡೆನ್ಸಿಟಿ ಕಾರಿಡಾರ್ಗಳನ್ನು 273 ಕೋಟಿ ರೂ. ವೆಚ್ಚದಲ್ಲಿಅಭಿವೃದ್ಧಿಪಡಿಸಲು ರಾಜ್ಯ ಸರಕಾರವು 2022ರ ಡಿ.17ರಂದು ಅನುಮೋದನೆ ನೀಡಿ ಆದೇಶಿಸಿತ್ತು. ಬಳಿಕ ಪಾಲಿಕೆಯು ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿರುವ ಮೂರು ಕಾರಿಡಾರ್ಗಳನ್ನು ಕೈಬಿಟ್ಟು, ಉಳಿದ 9 ಕಾರಿಡಾರ್ಗಳ ಅಭಿವೃದ್ಧಿಗೆ 2023ರ ಮಾ. 2ರಂದು ಟೆಂಡರ್ ಆಹ್ವಾನಿಸಿತ್ತು.
9 ಕಾರಿಡಾರ್ಗಳನ್ನು ಮೂರು ಪ್ಯಾಕೇಜ್ಗಳಾಗಿ ವಿಂಗಡಿಸಿ ಕರೆದಿದ್ದ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಿ, ಅನುಮೋದನೆ ಕೋರಿ ಸರಕಾರದಿಂದ ರಚಿತವಾಗಿರುವ ಅಧಿಕಾರಯುಕ್ತ ಸಮಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆನಂತರ ಅಧಿಕಾರಯುಕ್ತ ಸಮಿತಿಯು ಸಭೆಯಲ್ಲಿಕೈಗೊಂಡ ನಿರ್ಣಯದಂತೆ ನಗರಾಭಿವೃದ್ಧಿ ಇಲಾಖೆಯು ಮಾ. 23ರಂದು ಕಾರಿಡಾರ್ಗಳ ಅಭಿವೃದ್ಧಿ ಕಾಮಗಾರಿಯ ಟೆಂಡರ್ಗಳಿಗೆ ಅನುಮೋದನೆ ನೀಡಿ ಆದೇಶಿಸಿದೆ. ವಿಧಾನಸಭಾ ಚುನಾವಣೆ ಘೋಷಣೆಗೆ ಮುನ್ನ ಒಪ್ಪಿಗೆ ನೀಡಲಾಗಿದೆ.
9 ಕಾರಿಡಾರ್ಗಳ ಅಭಿವೃದ್ಧಿಗೆ 237 ಕೋಟಿ:
ನಗರದಲ್ಲಿನ 9 ಅತಿದಟ್ಟಣೆ ಕಾರಿಡಾರ್ ರಸ್ತೆಗಳ ಡಾಂಬರೀಕರಣ, ಇಕ್ಕೆಲಗಳಲ್ಲಿನ ಚರಂಡಿಗಳು, ಫುಟ್ಪಾತ್ಗಳ ಅಭಿವೃದ್ಧಿ ಕಾಮಗಾರಿಗೆ 237.90 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ಪ್ಯಾಕೇಜ್-1 ರಲ್ಲಿ ಬಳ್ಳಾರಿ ರಸ್ತೆ, ಹೊರವರ್ತುಲ ರಸ್ತೆ ಕಾರಿಡಾರ್ಗಳ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆಯನ್ನು ಸ್ಟಾರ್ ಇನ್ಫ್ರಾಟೆಕ್ ಸಂಸ್ಥೆ ಪಡೆದುಕೊಂಡಿತು. ಈ ಸಂಸ್ಥೆಯು 84.97 ಕೋಟಿ ರೂ.ಗಳಿಗೆ ಬಿಡ್ ಸಲ್ಲಿಸಿ, ಟೆಂಡರ್ ಪಡೆದಿತ್ತು. ದರ ಸಂಧಾನದ ಬಳಿಕ 77.55 ಕೋಟಿ ರೂ.ಗಳಿಗೆ ಅಂತಿಮಗೊಳಿಸಲಾಗಿದೆ.
ಪ್ಯಾಕೇಜ್-2 ರಲ್ಲಿ ಹಳೇ ಮದ್ರಾಸ್ ರಸ್ತೆ, ಹಳೇ ವಿಮಾನ ನಿಲ್ದಾಣ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆಯನ್ನು ಬಿಎಸ್ಆರ್ ಇನ್ಫ್ರಾಟೆಕ್ ಸಂಸ್ಥೆಯು 83.66 ಕೋಟಿ ರೂ.ಗಳಿಗೆ ಬಿಡ್ ಸಲ್ಲಿಸಿ ಟೆಂಡರ್ ಪಡೆದಿತ್ತು. ದರ ಸಂಧಾನದ ಬಳಿಕ 76.69 ಕೋಟಿ ರೂ.ಗಳಿಗೆ ಅಂತಿಮಗೊಳಿಸಲಾಗಿದೆ.
ಪ್ಯಾಕೇಜ್-3ರಲ್ಲಿತುಮಕೂರು ರಸ್ತೆ, ಮಾಗಡಿ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ ಕಾರಿಡಾರ್ಗಳ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆಯನ್ನು ಕೆವಿಆರ್ ಕನ್ಸ್ಟ್ರಕ್ಷನ್ ಸಂಸ್ಥೆಯು ಪಡೆದುಕೊಂಡಿತು. ಈ ಸಂಸ್ಥೆಯು 90.75 ಕೋಟಿ ರೂ.ಗಳಿಗೆ ಬಿಡ್ ಸಲ್ಲಿಸಿ ಟೆಂಡರ್ ಪಡೆದಿತ್ತು. ದರ ಸಂಧಾನದ ಬಳಿಕ 83.64 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದೆ.