ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಹಾಗೂ ಟಾಲಿವುಡ್ ಹೀರೋ ಸಿದ್ದಾರ್ಥ್ ಮದುವೆಯಾಗಿದ್ದಾರೆ ಎಂಬ ಸುದ್ದಿ ಎರಡು ದಿನಗಳ ಕಾಲ ಸಖತ್ ವೈರಲ್ ಆಗಿತ್ತು.
ಮದುವೆಯ ಸುದ್ದಿಗೆ ಸ್ಪಷ್ಟನೆ ನೀಡಿದ ನಟಿ ಅದಿತಿ ರಾವ್ ನಾವಿನ್ನು ಮದುವೆಯಾಗಿಲ್ಲ. ಆಗಿರೋದು ಜಸ್ಟ್ ಎಂಗೇಜ್ ಮೆಂಟ್ ಅಷ್ಟೇ ಎಂದು ಕ್ಲಾರಿಟಿ ನೀಡಿದ್ದರು.
ಅಂದ ಹಾಗೆ ಅದಿತಿ ಹಾಗೂ ಸಿದ್ದಾರ್ಥ್ ಇಬ್ಬರಿಗೂ ಇದು ಎರಡನೇ ಮದುವೆ. ಮೊದಲನೇ ಮದುವೆಯ ಸಂಬಂಧ ಕಳೆದುಕೊಂಡಿರುವ ಜೋಡಿ ಇದೀಗ ಎರಡನೇ ಮದುವೆಯಾಗಲು ರೆಡಿಯಾಗಿದ್ದಾರೆ.
ಸಿನಿಮಾ ರಂಗದಿಂದ ಕೆಲ ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದ ಸಿದ್ದಾರ್ಥ್ ಇದೀಗ ಮತ್ತೆ ಕಂಬ್ಯಾಕ್ ಮಾಡಿದ್ದಾರೆ.
ಸಿದ್ದಾರ್ಥ್ 2003ರಲ್ಲಿ ಮೇಘನಾ ನಾರಾಯಣ್ ಎಂಬುವವರನ್ನು ಮದುವೆಯಾಗಿದ್ದರು. ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ಪಕ್ಕದ ಮನೆಯ ಮೇಘನಾ ಮೇಲೆ ಪ್ರೀತಿ ಶುರುವಾಗಿ ಬಳಿಕ ಆಕೆಯನ್ನು ವರಿಸಿದ್ದರು.
ಸಿದ್ದಾರ್ಥ್ ಹಾಗೂ ಮೇಘನಾ ಮದುವೆಯನ್ನು ಸಾಕಷ್ಟು ಗುಟ್ಟಾಗಿ ಇಡಲಾಗಿತ್ತು. ಇದುವರೆಗೂ ಮೇಘನಾ ಹಾಗೂ ಸಿದ್ದಾರ್ಥ್ ಮದುವೆಯ ಫೋಟೋಗಳು ಲಭ್ಯವಾಗಿಲ್ಲ.
ಇಬ್ಬರ ಮಧ್ಯೆ ಶುರುವಾದ ಮನಸ್ತಾಪದಿಂದ 2006ರಲ್ಲಿ ಇಬ್ಬರು ಬೇರೆ ಬೇರೆಯಾಗಿ ವಾಸಿಸಲು ಶುರುಮಾಡಿದರು. 2007ರಲ್ಲಿ ಇಬ್ಬರು ಅಧಿಕೃತವಾಗಿ ಡಿವೋರ್ಸ್ ಪಡೆದುಕೊಂಡರು.