ಇಂದಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗೆ ಗುರಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನೂ ಬಾಳಿ ಬದುಕಬೇಕಾದ ಯುವಜನತೆಯರು, ಸಣ್ಣ ವಯಸ್ಸಿನಲ್ಲಿಯೇ ಈ ಕಾಯಿಲೆಗೆ ಬಲಿಯಾಗುತ್ತಿರುವುದು, ನಿಜಕ್ಕೂ ನೋವುಂಟು ಮಾಡುತ್ತಿದೆ.
ಯಾಕೆ ಈ ಕಾಯಿಲೆಯಿಂದಾಗಿ ಹೆಚ್ಚಿನವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ನೋಡುವುದಾದರೆ, ಕೆಲವರು ತಮ್ಮ ದೈಹಿಕ ಫಿಟ್ನೆಸ್ ಕಾಯ್ದುಕೊಳ್ಳುವ ಸಲುವಾಗಿ ಜಿಮ್ನಲ್ಲಿ ಮಾಡುವ ಅತಿಯಾದ ವರ್ಕೌಟ್ನಿಂದಾಗಿ, ಹೃದಯಕ್ಕೆ ಅತಿಯಾದ ಒತ್ತಡ ಬೀಳುವುದರಿಂದ, ಇಂದಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚಾಗುತ್ತಿವೆ, ಎನ್ನುವ ಕೂಗು ಒಂದು ಕಡೆ ಯಾದರೆ, ಜಡಜೀವನ ಶೈಲಿ, ಅನಾರೋಗ್ಯಕಾರಿ ಆಹಾರಪದ್ಧತಿಯಿಂದಾಗಿಯೂ ಕೂಡ ಸಣ್ಣ ವಯಸ್ಸಿನ ಲ್ಲಿಯೇ ಹೃದಯದ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತಿದೆ ಎನ್ನುವ ಮಾತು ಇನ್ನೊಂದು ಕಡೆ.
ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಕಾಮನ್ ಆಗಿಬಿಟ್ಟಿದೆ. ಈ ಸಮಸ್ಯೆ ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಆಗಬಹುದು. ಸದ್ಯದ ದಿನಗಳ್ಲಿ ಬಾತ್ರೂಂನಲ್ಲಿ ಹಾರ್ಟ್ ಅಟ್ಯಾಕ್ ಕೇಸ್ಗಳು ಜಾಸ್ತಿ ಆಗುತ್ತಿದೆ. ಈ ಬಾತ್ರೂಂನಲ್ಲಿ ಹಾರ್ಟ್ ಅಟ್ಯಾಕ್ ಆಗುವುದು ಬಹಳ ಅಪಾಯಕಾರಿ. ಇನ್ನು ಡಾಕ್ಟರ್ಗಳ ಪ್ರಕಾರ, ಶೌಚಾಲಯ ಬಳಸುವಾಗ ಅಥವಾ ಸ್ನಾನ ಮಾಡುವಾಗ ಹಾರ್ಟ್ ಅಟ್ಯಾಕ್ ಆಗುವುದು ಜಾಸ್ತಿ ಎಂದು ಹೇಳಿದ್ದಾರೆ.
ಇನ್ನು ಬಾತ್ರೂಂನಲ್ಲಿ ಇಂಥ ಪರಿಸ್ಥಿತಿ ತುಂಬಾ ಸವಾಲಿನದಾಗಿದೆ. ಇದು ಖಾಸಗಿ ಜಾಗ. ಆದ್ದರಿಂದ ಇಲ್ಲಿ ನಿಮಗೆ ಹಾರ್ಟ್ ಅಟ್ಯಾಕ್ ಆದರೆ ಬಹಳ ಕಷ್ಟ. ಏಕೆಂದರೆ ಬಾತ್ರೂಂನಲ್ಲಿ ನಿಮಗೆ ತಕ್ಷಣ ಸಹಾಯಕ್ಕೆ ಯಾರೂ ಸಿಗುವುದಿಲ್ಲ. ಆದ್ದರಿಂದ ನಿಮ್ಮ ಪ್ರಾಣಕ್ಕೂ ಅಪಾಯ ಆಗಬಹುದು. ಇನ್ನು ಹಾರ್ಟ್ ಅಟ್ಯಾಕ್ ಸಂಭವಿಸಿದಾಗ ತಕ್ಷಣ ಚಿಕಿತ್ಸೆ ಆಗಬೇಕು. ಇಲ್ಲದಿದ್ದರೆ ದೊಡ್ಡ ಸಮಸ್ಯೆ ಆಗೋದು ಪಕ್ಕಾ.
ನಿಮಗೆ ಗೊತ್ತಾ? ಬಾತ್ರೂಂನಲ್ಲಿ ಏಕೆ ಜಾಸ್ತಿಯಾಗಿ ಎದೆ ನೋವು ಸಂಭವಿಸುತ್ತದೆ? ಹಾರ್ಟ್ ಅಟ್ಯಾಕ್ ಆ ಟೈಮ್ನಲ್ಲಿಯೇ ಏಕೆ ಜಾಸ್ತಿ ಆಗುತ್ತದೆ? ಸ್ನಾನ ಮಾಡುವಾಗ, ಮೂತ್ರ ವಿಸರ್ಜನೆ ಮಾಡುವಾಗ ಶರೀರದ ಮೇಲೆ ಬೀಳುವ ಒತ್ತಡದಿಂದ ನಮಗೆ ಹಾರ್ಟ್ ಅಟ್ಯಾಕ್ ಆಗಬಹುದು ಎಂಧು ತಜ್ಞರು ಹೇಳುತ್ತಾರೆ. ಈ ಸಂದರ್ಭದಲ್ಲಿ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಹೃದಯ ಸ್ಥಿತಿ ಚೆನ್ನಾಗಿಲ್ಲದಿದ್ದರೆ, ಹಠಾತ್ ಹಾರ್ಟ್ ಅಟ್ಯಾಕ್ ಆಗಬಹುದು. ಇದನ್ನು ವ್ಯಾಸೋವ್ಯಾಗಲ್ ಪ್ರತಿಕ್ರಿಯೆ ಎಂದು ಹೇಳಲಾಗುತ್ತದೆ
ತಣ್ಣನೆಯ ಅಥವಾ ಬಿಸಿ ನೀರಿನ ಸ್ನಾನ ಹೃದಯ ಬಡಿತದ ಮೇಲೆ ಪರಿಣಾಮ ಬೀರುತ್ತದೆ. ಸ್ನಾನ ಮಾಡುವ ನೀರಿನ ಜೊತೆ ಶರೀರದ ಉಷ್ಣತೆ ಹೊಂದಿಕೊಳ್ಳದಿದ್ದರೆ ಹೃದಯ ಸಂಬಂಧಿತ ಸಮಸ್ಯೆ ಎದುರಾಗುತ್ತದೆ. ಇದು ಹೃದಯ ಬಡಿತದ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಧಮನಿಗಳು ಮತ್ತು ಕ್ಯಾಪಿಲ್ಲರಿಗಳ ಮೇಲೆ ಒತ್ತಡ ಹೇರುತ್ತದೆ. ಇನ್ನು ಅಧಿಕ ರಕ್ತದೊತ್ತಡ ಅಥವಾ ಹೃದಯ ಸಮಸ್ಯೆ ಇರುವವರಿಗೆ ಹಾರ್ಟ್ ಅಟ್ಯಾಕ್ ಅಪಾಯ ಹೆಚ್ಚು.
ಇನ್ನು ಕೆಲವರು ದಿನನಿತ್ಯ ಸೇವಿಸುವ ಮಾತ್ರೆಗಳನ್ನು ಬಾತ್ರೂಂನಲ್ಲಿ ಕ್ಯಾಬಿನೆಟ್ನಲ್ಲಿ ಇಡುತ್ತಾರೆ. ಅತಿಯಾದ ಮಾತ್ರೆ ಸೇವನೆ ಹಠಾತ್ ಹಾರ್ಟ್ ಅಟ್ಯಾಕ್ ಅಥವಾ ಹೃದಯ ಬಡಿತಕ್ಕೆ ಕಾರಣವಾಗಬಹುದು. ಮಾತ್ರೆ ಸೇವಿಸಿ ಸ್ನಾನ ಮಾಡಿದ ತಕ್ಷಣ, ಅದು ಹೃದಯ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ. ಹೃದಯಕ್ಕೆ ತೊಂದರೆ ಉಂಟುಮಾಡಬಹುದು.
ನೀವು ಹಾರ್ಟ್ ಪೇಷಂಟ್ ಆಗಿದ್ದರೆ, ತಪ್ಪದೇ ಬಾತ್ರೂಂಗೆ ಹೋಗುವಾಗ ಮನೆಯಲ್ಲಿರುವ ಇತರೆ ಸದಸ್ಯರಿಗೆ ತಿಳಿಸಿ. ಮನೆಯವರು ಬಾತ್ರೂಂ ಬಾಗಿಲು ತಟ್ಟಿದಾಗ ನೀವು ಸ್ಪಂದಿಸದಿದ್ದರೆ, ತುರ್ತು ಪರಿಸ್ಥಿತಿ ಇದೆ ಎಂದು ಅವರಿಗೆ ತಿಳಿಯುತ್ತದೆ. ಇನ್ನು ನಿಮಗೆ ಹಾರ್ಟ್ ಅಟ್ಯಾಕ್ ಸಂಭಂವಿಸಿದರೆ ಆಗ ಎದೆಯ ಮೇಲೆ ಬಿಸಿ ಅಥವಾ ತಣ್ಣೀರು ಹಾಕಬೇಡಿ. ಹಾಗೆಯೇ ನಿದ್ರೆ ಮಾತ್ರೆ ಅಥವಾ ರಿಲ್ಯಾಕ್ಸೆಂಟ್ ಸೇವಿಸಿದ ನಂತರ ಬಿಸಿ ನೀರಿನ ಸ್ನಾನ ಮಾಡಬೇಡಿ.